ಚೌಕಿಯ ಮುಖ್ಯವಾದ ಲುತುಫಖಾನನು 'ಇದನ್ನು ನೋಡಿ ತನ್ನ ಕೈಯೊಳಗಿನ ಛಯಂ ಕರವಾದ ಚಪಗೊಡಲಿಯನ್ನು ಎತ್ತಿಕೊಂಡು ಗದ್ದರಿಸುತ್ತ ಧಾವಿಸಿ ಅಲ್ಲಿಗೆ ಬರಲು, ಜನರು ಅತ್ತಿಂದತ್ತ ಹಿಂದಕ್ಕೆ ಸರಿದು ನಿಂತುಕೊಂಡು, ಹೊಡೆದಾಟವು ನಿಂತು ಗದ್ದಲವು ಕಡಿಮೆಯಾಯಿತು. ಆದರೂ ಹೊಡದಾಡಲಿಕ್ಕೆ ನಿಂತವರು ಒಬ್ಬರನ್ನೊಬ್ಬರು ಕೆಟ್ಟ ಕಣ್ಣಿನಿಂದ ನೋಡುತ್ತಿದ್ದರು.
ಹೀಗೆ ಲುತುಫಖಾನನ ಗದ್ದಲವ ನಿಲ್ಲಿಸಿ ಗದರಿಸಿ- “ಏನು ಗದ್ದಲವಿದು? ನಿಮ್ಮನ್ನು ಯಾರೂ ಕೇಳುವವರಿಲ್ಲವೆ? ಖುದಾಯಾರ, ಚಾವುದ, ಪುಂಡಾಟಿಕೆಯೇನಿದು? ಈ ತರುಣಿ ಯಾರು? ಯಮದೂತರಂತೆ ಈಕೆಯನ್ನು ಹೀಗೆ ಯಾಕೆ ಎಳೆದಾಡುವಿರಿ? ಹೆಂಗಸರನ್ನು ಛಾವಣಿಯಲ್ಲಿ ಕರತರಲಾಗದೆಂದು ಶಹಾನು ನಿರ್ಬಂಧಿಸಿದ್ದು ನಿಮಗೆ ಗೊತ್ತಿಲ್ಲವೆ?”ಎಂದು ನುಡಿಯುತ, ಬೈರಾಗಿಣಿಯಕಡೆಗೆ ನೋಡಿದನು. ಆಕೆಯ ಮೋಹಕಸ್ವರೂಪವು ಲುತುಫನ ಮನಸ್ಸನ್ನು ಆಕರ್ಷಿಸಿತು. ಆತನು ಎವೆಯಿಕ್ಕದೆ ಆಕೆಯನ್ನು ನೋಡತೊಡಗಿದನ. ಜನರು ಸುತ್ತು ಮುತ್ತು ನೆರೆದಿದ್ದರು. ದಾವುದನು ಬೈರಾಗಿಣಿಯ ರಟ್ಟಿಯನ್ನು ಹಿಡಿದಿದ್ದನ್ನು, ಆಗ ಲುತುವನು ಆತನನ್ನು ಕುರಿತು-"ದಾವುದ, ಈ ರಾಗಿಣಿಯ ಕೈಬಿಡು ಈಕೆಯ ಬಾಧ್ಯತೆಗೆ ನೀನು ಸಂಬಂಧಪಡುವದಿಲ್ಲ. ಶಹಾನ ಅಪ್ಪಣೆಯನ್ನು ಮೀರಿದ್ದರಿಂದ ನೀನು ಕಠಿಣಶಿಕ್ಷೆಗೆ ಪಾತ್ರನಾಗಿರುವೆ. ಈ ಸುದ್ದಿಯು ಶಹಾನ ಕಿವಿಗೆ ಮುಟ್ಟಿದರೆ, ಆತನು ನಿನ್ನನ್ನು ತೋಫಿನಬಾಯಿಗೆ ಕೊಡಬಹುದು. ಸರಿಹಿಂದಕ್ಕೆ ತೊಂಟ ತನ ಮಾಡಿದರೆ ನಿನ್ನ ಮುಸುಕೆ ಬಿಗಿಸಿ ಸೆರೆಮನೆಯಲ್ಲಿ ಚಲ್ಲಿಸೇನು.” ಎಂದು ಬೆದರಿಕೆಹಾಕಲು, ದಾವುದು ಸಂತಾಪದಿಂದ ತಲೆಯಲ್ಲಾಡಿಸುತ್ತ-ಮಿಯ್ಯಾಸಾಹೇಬ , ಇದನ್ನೆಲ್ಲ ನಾನುಬಲ್ಲೆನು , ಶಹಾನಅಪ್ಪಣೆಯು ನಮ್ಮಂಥ ಬಡಸಿಪಾಯಿಗಳಿಗೆ; ನಿಮ್ಮಂಥ ಅಮೀರ-ಉಮರಾವರಿಗಲ್ಲ. ಅವರು ಬತ್ತಲೆ ಕುಣಿದರೂ ಯಾರೂ ಕೇಳುವದಿಲ್ಲ. ನಮ್ಮ ಕಾಯ ದೆಯೇ ಬೇರೆ, ನಿಮ್ಮ ಕಾಯದೆಯೇ ? ಬೇರೆಯಲ್ಲವೆ? ಆದರೆ ಮಿಯ್ಯಾಸಾಹೇಬ, ಬಹು ಜೋಕೆ , ನಮ್ಮಂಥ ಸಿಪಾಯಿಗಳಿರುವದರಿಂದಲೇ ? ನಿಮ್ಮಂಥ ಅಮೀರ -ಉಮರಾವರ, ಹಾಗು ಸರದಾರರ ಪರಿಣಾಮವಾಗಿದೆ. ಇಲ್ಲದಿದ್ದರೆ ಕಾಫರರು ಇಷ್ಟು ಹೊತ್ತಿಗೆ ನಿಮ್ಮನ್ನೂ, ಶಹಾನನ್ನೂ ತಿಂದುಬಿಡುತ್ತಿದ್ದರು. ನಮ್ಮಗೊಡವಿಗೆ ನೀವು ವಿಶೇಷವಾಗಿ ಬರಬಾರದು. ನಮ್ಮನ್ನು ಹೀಗೆ ಛಲಿಸುವದು ಸರಿಯಲ್ಲ. ಇಂಥ ಸಣ್ಣಪುಟ್ಟ ಕೆಲಸದಲ್ಲಿ ನೀವು ಕೈಹಾಕುವದು ಭೂಷಣವಲ್ಲ. ಇದರಿಂದ ಸರ್ವಥಾ ಹಿತವಾಗದು. ಇಂಥ ಸಣ್ಣ ಕೆಲಸಗಳ ವ್ಯವಸ್ಥೆಯನ್ನು ನಮ್ಮೊಳಗೆ ನಾವು ಮಾಡಿಕೊಳ್ಳುವೆವು. ಇಷ್ಟು ಅನುಕೂಲತೆಯನ್ನು ನೀವು ನಮಗೆ ಮಾಡಿಕೊಡಲೇಬೇಕು; ಅಂದರೆ ನಿಮ್ಮ ಸಲುವಾಗಿ ಯುದ್ದದಲ್ಲಿ ನಮ್ಮ ಚಂಡುಕೊಯ್ದಿಡಿದಲು ನಾವು ಸಿದ್ಧರಾಗುವೆವು. ವೈರಿಗಳಾದ ಕಾಫರರ ರುಂಡಗಳ ಚಂಡಾಡಲಿಕ್ಕೆ ನಾವು ಹಿಂದೆ ಮುಂದೆ ನೋಡಲಿಕ್ಕಿಲ್ಲ. ಮಿಯ್ಯಾಸಾಹೇಬ , ಇದರಮೇಲೆಯೂ ನೀವು ನಮ್ಮ ಬೇಟೆಯ ಆಶೆಮಾಡಿದರೆ, ಇಗೋ, ಈ ಶಸ್ತ್ರದಿಂದ ಈ ತರುಣಿಯನ್ನು ಇಲ್ಲಿಯೇ ತುಂಡರಿಸಿಚಲ್ಲುವೆನು. ನಿಮ್ಮ ಕೈಗೆ ಹತ್ತಗೊಡಲಿಕ್ಕಿಲ್ಲ!