ವಿಷಯಕ್ಕೆ ಹೋಗು

ಪುಟ:ಕುರುಕ್ಷೇತ್ರ ಗ್ರಂಥ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕುರುಕ್ಷೇತ್ರ!

ಕ್ರೂರರ ಈ ಸಂಭಾಷಣದ ಅರ್ಥವು ಬೈರಾಗಿಣಿಗೆ ತಿಳಿಯದಿದ್ದಿದರೂ, ಅವರ ಹಾವ ಭಾವ ಮೊದಲಾದವುಗಳಿಂದ ತನಗೆ ಪ್ರಾಣಸಂಕಟವು ಒದಗಿ ತಿಂದು ಆಕೆಯೂ ತಿಳಿದುಳು. ಮರಣಕಂಟವು ಹುಟ್ಟಿದಹಾಗಾಗಿ ಆಕೆಯು ನಡುಗತೊಡಗಿದಳು; ಆದರೆ ಆ ಕಟರಿಕಗೆ ಎನುಡಿದರೆ ದಯವು ಉತ್ಪನ್ನವಾದೀತು' ದಾವುದನು ಬೈರಾಗಿಣಿಯ ರಟ್ಟೆಯನು ಬಿಡದಾದನು.ಅದನ್ನು ನೋಡಿ ಖುದಾಯಾರನೂ ಬೈರಾಗಿಣಿಯ ಮತ್ತೊಂದು ರಟ್ಟೆ ಹಿಡಿದು ಎಳೆಯಹತ್ತಿದನು. ಆ ಕ್ರೂರರು ಮೊದಲಿನ ತಮ್ಮ ಕರಾರು ಮುರಿದು ಮತ್ತೆ ಜಗಳಾಡಹತ್ತಿದರು. ಅವರು ಕಡೆಗೆ ಸಿಟ್ಟಿಗೆದ್ದು ಶಸ್ತ್ರಹಿರಿದು ಒಬ್ಬರಮೇಲೊಬ್ಬರು ಒಪ್ಪಿಗಮೆಮೋರು ಬೀಳಲು, ಬೈರಾಗಿಣಿಯ ಬಿಡುಗಡೆಯಾಗಿ ಆಕೆಯು ಲುತುಫನಿಗೆ ಶರಣುಹೋಗಿ ತನ್ನನ್ನು ಕಾಪಾಡಲೆಂದು ಬೇಡಿಕೊಳ್ಳಹತ್ತಿದಳು. ಆ ಇಬ್ಬರು ಕ್ರೂರಸಿಪಾಯಿಗಳಿಗಿಂತ ಲೂ ಲತುಫನು ಆಕೆಗೆ ಸೌಮ್ಯನಾಗಿ ತೋರಿದನು. ಬಂದರೆ ಈತನಿಗೇ ದಯವು ಬಂದೀತೆಂದು ಆಕೆಯ ಭಾವನೆಯಾಯಿತು. ನಿಜವಾಗಿ ಬೈರಾಗಿಣಿಯು ಬಹಳ ಹಣ್ಣಾಗಿದ್ದಳು. ಆಕೆಯ ಮನಸ್ಸಿನಲ್ಲಿ ಶ್ರೀ ರಾಮನಿಗೆ ಮೊರೆಯಿಟ್ಟು -ಪ್ರಭೋ ಸಿತಾಪತೀ. ಈ ಅನಾಥಳ ಮೇಲೆ ದಯಮಾಡು. ನನ್ನ ಈ ಯಮಯಾತನೆಯನ್ನು ಪರಿಹರಿಸು. ನಾನು ಕಷ್ಟವನ್ನು ಎಷ್ಟoತ ಅನುಭವಿಸಲಿ? ಸೀತಾಮಾತೆಯನ್ನು ದುಷ್ಟ ರಾವಣನ ಬಾಧೆಯಿಂದ ಮುಕ್ತ ಮಾಡಿದ ನೀನು, ಈ ರಾಕ್ಷಸರ ಬಾಧೆಯಿಂದ ನನ್ನನ್ನು ಮುಕ್ತ ಮಾಡಿಸಲು ಯಾರನ್ನಾದರೂ ಪ್ರೇರಿಸು. ನಿನ್ನ ಹೊರತು ನನಗೆ ಅನ್ಯಗತಿಯಿಲ್ಲ. ನೀನು ಅನಾಥರಕ್ಷಕನಲ್ಲವೆ.

ಬೈರಾಗಿಣಿಯು ಈ ಮೇರೆಗೆ ಮನಸ್ಸಿನಲ್ಲಿ ಪ್ರಾರ್ಥಿಸುತ್ತಿರಲು, ಇತ್ತ ಲುತುಫಖಾನನ ಕಾಮವಾಸನೆಯು ಹೆಚ್ಚಿ ಆತನು ಬೈರಾಗಿಣಿಯನ್ನು ಅಪಹರಿಸಲು ಯತ್ನಿಸಹತ್ತಿದ್ದುನು ಇದನ್ನು ನೋಡಿ ಖುದಾಯರ -ದಾವುದರಿಬ್ಬರೂ ಸಂತಾಪಗೊಂಡರು. ಏನು ಮಾಡಿದರೂ ಬೈರಾಗಿಣಿಯನ್ನು ಖಾನನಿಗೆ ಹತ್ತಗೊಡಬಾರದೆಂದು ಅವರಿಬ್ಬರೂ ಭಾವಿಸಿ, ಒಬ್ಬನು? ಆಕೆ ಯನ್ನು ತುಂಡರಿಸುವದಕ್ಕಾಗಿ ಖಡ್ಗವೆತ್ತಿದನು, ಇನ್ನೊಬ್ಬನು ಆಕೆಯನ್ನು ಇರಿಯುವದಕ್ಕಾಗಿ ಕರಾರಿಯನ್ನು ಕಠಾರಿಯನ್ನು ಹಿರಿದನು.ಆಗ ಬೈರಾಗಿಣಿಯ ಸ್ಥಿತಿಯೇನಾಗಿರಬಹುದೆಂಬದನ್ನು ವಾಚಕರೇ ತರ್ಕಿಸಬಹುದು. ಆಕೆಯು ಕಣ್ಣು ಮುಚ್ಚಿಕೊಂಡು ಮೇಲೆ ಹೇಳಿದಂತೆ ಶ್ರೀ ರಾಮನನ್ನು ಪ್ರಾರ್ಥಿಸುತ್ತ ಮರಣಕ್ಕೆ ಸಿದ್ದವಾಗಿದ್ದಳು. ಅಷ್ಟರಲ್ಲಿ ಶ್ರೀ ರಘುಪತಿಯು ಆಕೆಯನ್ನು ಕರುಣಿಸಿದಂತೆ ತೋರಿತು. " ಸರಿಯಿರಿಸಲಯಿರಿ; ಹಾದಿಯಾದಿ; ಬದಿಗಾಗಿರಿ" ಎಂಬ ಗದ್ದರಿಕೆಯ ಶಬ್ದಗಳು ಕಿವಿಗೆ ಬೀಳತೊಡಗಿದವು. ಹೀಗೆ ಗದ್ದರಿಸುವವರು ದಂಡಿ ನೊಳಗಿನ ಕಾಲಾಳುಗಳಾಗಿದ್ದರು. ಅವರು ಜನರ ದಟ್ಟಣೆಯೊಳಗಿಂದ ಹಾದಿಯ ಮಾಡುತ್ತ ಬರುತಿದ್ದರು ಅವರ ಹಿಂದಿನಿಂದ ನಾಲ್ಕು ಜನ ಸರದಾರರು,ತಮ್ಮ ಬೆಟ್ಟದಂಥ ಕುದುರೆಗಳನ್ನೇರಿ ಸಾವಕಾಶವಾಗಿ ಬರುತ್ತಲಿದ್ದರು. ವಿಶ್ರಾಂತಿಗಾಗಿ ಹೊರಗೆ ಹೋಗಿದ್ದ ಅವರು ಈಗ ತಮ್ಮ ಡೇರೆಯ ಕಡೆಗೆ ನಡೆದಿದ್ದರು. ಎಲ್ಲಕ್ಕೂ ಮುಂದೆ ಅಹಮ್ಮದರಹಾದಿಬದಲಿಯನ್ನು ಬರುತ್ತಿದ್ದನು. ಆತನು ಪ್ರಸಿದ್ಧ ವಿರಹಣ, ಯುದ್ಧ