ವಿಷಯಕ್ಕೆ ಹೋಗು

ಪುಟ:ಕುರುಕ್ಷೇತ್ರ ಗ್ರಂಥ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೨

ಕುರುಕ್ಷೇತ್ರ!

ಹೆಮ್ಮೆಯ ಪೇಶ್ವೇಯ ಸರಕಾರವು ಇದಕ್ಕೆ ಸೊಪ್ಪು ಹಾಕಲಿಲ್ಲ. ತಾನು ಅಬದಾಲಿಯನ್ನು ಸಹಜವಾಗಿ ಹೊಡೆ ದೋಡಿಸಿ ತನ್ನ ವರ್ಚಸ್ವವನ್ನು ನಿರಾಯಾಸವಾಗಿ ಕಾಯ್ದು ಕೊಳಲ್ಲಬದೆಂದು ಅದು ಭಾವಿಸಿತು. ಅದರ ಅಪ್ಪಣೆಯಂತೆ ಉತ್ತರಹಿಂದುಸ್ಥಾನದ ದಂಡ ಯಾತ್ರೆಗಾಗಿ ಮರಾಟರ ಸೈನ್ಯವು ಸಿದ್ದವಾಗತೊಡಗಿತು, ಈ ಮಹತ್ವದ ಕಾರ್ಯ ಕ್ಕಾಗಿ ಕಂಕಣಕಟ್ಟುವ ಯೋಗ್ಯವೀರನು ರಾಘೋಬಾದಾದಾನೇ ಆಗಿದ್ದನು; ಆದರೆ ಅಬದಾಲಿಗೆ ಅನುಭವಿಕನಾದ ತಮ್ಮ ವೀರನ ಜೋಡು ದೊರೆಯುವ ಯೋಗವಿದ್ದಂತೆ ತೋರಲಿಲ್ಲ. ಈ ಬ್ರಾಹ್ಮಣವೀರನು ಮೇಲೆ ಹೇಳಿದಂತೆ ತೈಮೂ ರಶಹನನ್ನು ಸೋಲಿಸಿ ಪುಣೆಗೆ ಬಂದಾಗ, ದುಡ್ಡು ತರದೆ ಸಾಲಮಾಡಿಕೊಂಡು ಬಂದಿದ್ದನು. ಆಗ ತರುಣನಾದ ಸದಾಶಿವರಾಯನು ಅವಿವೇಕತನದಿಂದ ದಾದಾನಿಗೆ ಸಿಕ್ಕುವಂತೆ ಆಡಿದನು, ಅದರಿಂದ ರಾಘೋಬಾದಾದಾನು ಈಗ ದಂಡಯಾತ್ರೆಗೆ ಸಮ್ಮತಿಸದೆ, "ನಾನು ಇನ್ನು ಪುಣೆಯಲ್ಲಿ ನಿಂತು ಕಾರಭರಸಾಗಿಸುವೆನು, ನೀವು ದಂಡಯಾತ್ರೆಗೆ ಹೋಗಿರಿ”ಎಂದು ಸದಾಶಿವರಾವ ಭಾವುನಿಗೆ ಹೇಳಿದನು.' ಆದರೆ ಭಾವುವು ಹಿಂಜರಿಯುವವನೆಯೆ? ತರುಣನಾದ ಭಾವುವು ತನ್ನ ಏರಿಕೆಯ ರಕ್ತದ ಧರ್ಮಕ್ಕನುಸರಿಸಿ ಉದಯಗಿರಿಯ ಹೆಮ್ಮೆಯಿಂದ ತಟ್ಟನೆ ದಂಡಯಾತ್ರೆಗೆ ಒಪ್ಪಿಕೊಂಡು, ನಾನಾಸಾಹೇಬನ ಅಪ್ಪಣೆಪಡೆದು ಸೈನ್ಯವನ್ನು ಸಿದ್ಧಗೊಳಿಸ ಹತ್ತಿದನು.

ಭಾವೂಸಾಹೇಬನು ಸರ್ವಸನ್ನಾಹದೊಡನೆ ಉತ್ತರಹಿಂದುಸ್ಥಾನದ ತೆರಳಿದನು. ಆಗ ಗಾದಿಯ ಮಾಲಕನಾದ ಶ್ರೀಮಂತ ನಾನಾಸಾಹೇಬನು ಉತ್ತರಹಿಂದುಸ್ತಾನದ ಯಾವತ್ತು ರಜಪೂತ, ಜಾಟ, ಜವಾಹೀರ ಮೊದಲಾದ ಜಾತಿಯ ಹಿಂದೂರಾಜರಿಗೂ, ಮಾಂಡಲಿಕರಿಗೂ, ಸಂಸ್ಥಾನಿಕರಿಗೂ ಸಾಂಡಣೆಸವಾರರ ಮುಖಾಂತರ ಪತ್ರಬರೆದು ತಿಳಿಸಿದ ನೇನಂತೆ-"ಹಿಂದೂ ಧರ್ಮಾಭಿಮಾನಿಗಳೇ, ಹಿಂದೂಧರ್ಮದ ಸಂರಕ್ಷಣಕ್ಕಾಗಿಯೂ, ಗೋವಧವನ್ನು ನಿಲ್ಲಿಸುವದಕ್ಕಾಗಿಯೂ, ಮೆಂಛರ ಪ್ರಾಬಲ್ಯವನ್ನೂ ಕುಗ್ಗಿಸುದಕ್ಕಾಗಿಯೂ ಶ್ರೀ ಶಂಕರನ ತ್ರಿಶೂಲವನ್ನು ಧರಿಸಿ ಸದಾಶಿವರಾವ ಭಾವೂರವರ ಉತ್ತರಹಿಂದುಸ್ಥಾನಕ್ಕೆ ದಂಡೆತ್ತಿ ಬಂದಿದ್ದಾರೆ; ಆದ್ದರಿಂದ ನೀವೆಲ್ಲರಾ ಕೂಡಲೆ ನಿಮ್ಮ ನಿಮ್ಮ ಸೈನ್ಯ ಗಳೊಡನೆ ಸಿದ ರಾಗಿ ಅವರನ್ನು ಕೂಡಿಕೊಳ್ಳಬೇಕು". ಈ ಪತ್ರದಂತೆ ಒಬ್ಬೊಬ್ಬರೇ ಹಿಂದೂರಾಜರು ಭಾವುದನ್ನು ಕೂಡುತ್ತ ಹೋದದರಿಂದ, ಆತನ ಸೇನಾಸಮುದ್ರವು ಉಕ್ಕೇರುತ್ತ ಹೋಯಿತು. ಶ್ರೀಮಂತ ನಾನಾಸಾಹೇಬರ ಹಿರಿಯ ಮಗನಾದ ಯುವರಾಜ ವಿಶ್ವಾಸರಾಯನು ಈ ದಂಡಯಾತ್ರೆಯಕೂಡ ಹೊರಟಿದ್ದನು . ಆತನು ಕೇವಲ ಹದಿನೆಂಟು ವರ್ಷದ ಬಾಲಕನಾಗಿದ್ದನು. ಆತನನ್ನು ಇಷ್ಟುದೂ ರದ ದಂಡಯಾತ್ರೆಗೆ “ಕಳಿಸಲಾರೆನೆಂದು ಆತನ ತಾಯಿಯಾದ ಗೋಪಿಕಬಾಯಿಯು ಹಟಹಿಡಿದಳು. ಆಗ ಸದಾಶಿವರಾಯನು_" ಅತ್ತಿಗೆಯವರೇ , ರಾವಸಾಹೇಬರನ್ನು ನೀವು ಹುಡುಗರೆಂದು ತಿಳಿ ಯುವಿರಿ, ಆದರೆ ಅವರು ಸಿಂಹದ ಮರಿಯಿರುವರು, ನರಿನಾಯಿಗಳ ಕುನ್ನೆಯಲ್ಲ.”ಎಂದು ಹೇಳಿದನಂತೆ! ಹಿಂದುಸ್ಥಾನದ ಆಗಿನ ಕಾಲವೇ ಪೌರುಷದ್ದಾಗಿತ್ತು! ಇರಲಿ. ಹೀಗೆ