೧೪ ಕುರುಕ್ಷೇತ್ರ.
ಯನ್ನು ಕೇಳಿ ಮತ್ತೆ ಹೋಳಕರನು ಬಾಹುಸಾಹೇಬನಿಗೆ ಮಾಳವಪ್ರಾಂತ್ಯದಲ್ಲಿ ತಳಊರಿ ನಿಂತುಕೊಳ್ಳಬೇಕೆಂದು ನಾನು ಬರೆದಿರಲು, ನೀವು ಮುಂದಕ್ಕೆ ಯಾಕೆಂದಿರಿ? ಇದರಮೇಲಿಂದ ನೋಡುತ್ತಿರಲು, ನಿಮ್ಮ ಸುತ್ತುಮುತ್ತು ನೆರೆದಿರುವ ತರುಣರೇ ನಿಮಗೆ ಹಿತಕರ್ತರಾಗಿ ತೋರುವಂತೆ ಕಾಣುತ್ತದೆ. ನಾವು ವೃದ್ದರು, ಅರವತ್ತು ವರ್ಷದ ಅರವು.ಮರವು ನಮಗಾಗಿರುವದು, ನಾವು ಇಲ್ಲಿಯವರೆಗೆ ಮಾಡಿದ್ದೆಲ್ಲ ಸಾಹೇಬರವರ ಅಹಿತಕ್ಕಾಗಿಯೇ ಇರುವದು. ಇರಲಿ, ಇನ್ನು ಎಲ್ಲರೂ ಕೂಡಿ ಸ್ವರಾಜ್ಯದ ಹಿತ ವನ್ನು ಸಾಧಿಸಬೇಕು,” ಎಂದು ಬರೆದನು, ಹೀಗೆ ಹೋಳಕರನು ಸ್ಪಷ್ಟವಾಗಿ ಬರೆದದ್ದನ್ನು ನೋಡಿ ಭಾವುಸಾಹೇಬನು ವಿಠ ಲಶಿವದೇವವಿಂಟೂರಕರನ ಅಭಿಪ್ರಾಯವನ್ನು ವಿತರಿಸಿದನು. ಅದಕ್ಕೆ, ವಿಂಚೂ ರಕನು- “ಸಾಹೇಬ, ಸಂಗಡ ಹೆಂಡಿರು ಮಕ್ಕಳು ಬಂದಿರುವರು. ಅದರಂತೆ, ನಿಮ್ಮ ರಾಜ್ಯವು ನಿರ್ಭಯವಾದದ್ದೆಂದು ತಿಳಿದು ಎಷ್ಟೋ ಸರದಾರರ ಕುಟುಂಬದವರೂ ಕಾಶಿಯ ಯಾತ್ರೆಗಾಗಿ ಹೊರಟಿರುವರು. ಶತ್ರುವಿನ ಪ್ರಾಬಲ್ಯ ಬಹಳ ಪ್ರಸಂಗವು ಹೀಗೆಯೇ ಬಂದೀತೆಂದು ಹೆಳುವಾಗಿಲ್ಲ; ಆದ್ದರಿಂದ ಮಲಾ ಲ್ಹಾರರಾಯರು ಸೂಚಿಸಿದಂತೆ ಸಾಹೇಬ ರವರು ಪಾಳಯಬಿಟ್ಟುಕೊಂಡು ಇಲ್ಲಿಯೇ ಇರಬೇಕು” ಎಂದು ಹೇಳಿದನು. ಆದರೆ, ಮಿಂಚೂರಕರನು ಸಿಂದೆ, ಹೋಳಕರರಂತೆ ಉತ್ತರಹಿಂದುಸ್ಥಾನದಲ್ಲಿರತಕ್ಕ ಸರದಾರ ನಾದದ್ದರಿಂದ, ಆತನ ಮಾತುಗಳು ಭಾವೂಸಾಹೇಬನಿಗೆ ವಿಕಲ್ಪವಾಗಿ ತೋರಿದವು. ಉತರಹಿಂದುಸ್ಥಾನದ ಈ ಸರದಾರರ ಗುಟ್ಟೆಲ್ಲ ಒಂದೇಇರುವದೆಂದು ಆತನು ತಿಳಿದು, ಮಿಂಚೂರಕನಮಾತಿಗೆ ಲಕ್ರಗೊಡದೆ ನಗೆಯಾಡಿ ಮುಂದಕ್ಕೆ ಸಾಗಿದನು. ಮುಂದೆ ಗಂಭೀ ರಾನದಿಯ ತೀರದಲ್ಲಿ ಆಗ್ರಾ ಪಟ್ಟಣದಹತ್ತರ ಭಾವುಸಾಹೇಬನಿಗೂ, ಹೋಳಕರ ನಿಗೂ ಭೆಟ್ಟಿಯಾಯಿತು. ಆಗ ಹೋಳಕರನು ಭಾವಸಾಹೇಬನ ಹಂಗುಇಡದೆ ನೆರೆದ ಸಭೆಯಲ್ಲಿ ಗರ್ಜಿಸಿ-- ಭಾವುಸಾಹೇಬ, ನದಿಯ ಆಚೆಯಲ್ಲಿ ಇರಬೇಕೆಂದು ನಾನು ವತ ಬರೆದಿರುವಾಗ, ನದಿಯದಾಟಿ ಬರಲಿಕ್ಕೆ ಕಾರಣವೇನು? ಸುತ್ತಲೆ ನೆರೆದಿರುವ ತರುಣರು ತೀರಬುದ್ಧಿಗೇಡಿಗಳಿರುವರು; ಖುದ್ದಸವಾರಿಯನ್ನು ಇಲ್ಲಿಯವರೆಗೆ ಕರತಂದು ಸಂಕಟಕ್ಕೆ ಗುರಿಮಾಡಿದರು. ಇನ್ನು, ಸಂಕಟವನ್ನು ತಪ್ಪಿಸಲಿಕ್ಕೆ ಯತ್ನವಿಲ್ಲ ” ಎಂದು ಹೇಳಿದನು. ಹಿತ ಹಂಚಿಕೊಳ್ಳದವರಿಗೆ ಏನುಹೇಳಿದರೆ ಏನು ಪ್ರಯೋಜನವಾಗುವದು? ಹ%ಯು ಮಣೆ ಮಾಡಿದರೂ ಅವರು ಕೇಳುವರೇ? ಅವರ ವಿಕಲ್ಪವು ಮಾತ್ರ ಹೆಚ್ಚಾಗುವದು ?