ಈ ಪುಟವನ್ನು ಪರಿಶೀಲಿಸಲಾಗಿದೆ
{[C]}/{(xxx-larger)}
೩ನೆಯ ಪ್ರಕರಣ -ಅವಿಚಾರ.
ಗರ್ವಿಷ್ಠನಾದ ತರುಣಭಾವುವಿಗೆ ಹೋಳಕರನ ಆಲೋಚನೆಯು ಸರಿ ಬೀಳಲಲ್ಲ, ಹೇಳಿಹೇಳಿದಂತೆ ಹೋಳಕರನ ವಿಷಯದ ಕುಭಾವನಯುಮಾತ್ರ ಆತನಲ್ಲಿ ಹೆಚ್ಚುತ್ತ ಹೋಯಿತು. ಹೋಳಕರನ ಮನಸ್ಸು ತೆಗೆಯಹತ್ತಿದನು. ಇಂಥ ಅವಿಚಾರದ ಕೃತಿಗಳು ಭಾವುಸಾಹೇಬನಿಂದ ಒಂದರಹಿಂದೊಂದು ಘಟಸುತ್ತ ಹೋದವು . ದಿಲ್ಲಿಯು ಕೈಸೇರಿದ ಬಳಿರುತು ಸದಾಶಿವರಾಯನ ಗರ್ವಕ್ಕೆ ಮತ್ತಿಷ್ಟು ಕಳೆ ಯೇರಿತು. ಬಾದಶಾಹಿಯ ಸಿಂಹಾಸನದ ಮೇಲೆ ವಿಶ್ವಾಸರಾಯನನ್ನು ಕುಳ್ಳಿರಿಸುವ ವಿಚಾರವು ನಡೆಯಿತು. ಕಚೇರಿಯ ಕೆಲಸವನ್ನು ಸುಜಾಉದ್ದಾತನಿಗೆ ಕೊಡಬೇಕೆಂದು ಮಾಡಿದರು, ಇವೆಲ್ಲ ಅವಿಚಾರದ ಕೆಲಸಗಳೇ ಸರಿ; ಯಾಕಂದರೆ, ಇದರಿಂದ ಸಿಂದೆ, ಹೋಳಕರರ ಮನಸ್ಸಿಗೆ ಅಸಮಧಾನ ವಾಗಿ ಅಂತಃಕಲಹಕ್ಕೆ ಆಸ್ಪದವು ದೊರೆಯಿತು. ಬಾದಶಾಹಿಯ ಮಾಂಡಲಿಕ ರಾಜರಿಗೆ ಇದು ರಾಜದ್ರೋಹದ ಕೆಲಸವಾಗಿ ತೋರಿತು. ಮುಂದೆ ಕೈಯಾಳಗಿನ ರೋಖ ಸಿಲಕು ತೀರಿಹೋಗಿ ವೆಚ್ಚವು ನಡೆಯದಾಗಲು, ಭಾವುಸಾಹೇಬನು ಹೆಚ್ಚಿನ ಅವಿಚಾರದ ಕೆಲ ಸಕ್ಕೆ ಕೈ ಹಾಕಿದನು. ಬಾದಶಹನ ಸಿಂಹಾಸನಕ್ಕೂ, ಕಚೇರಿಗೂ ಅಂಗೈದಪ್ಪಾದ ಬೆಳ್ಳಿ, ಯ ತಗಡಿನ ಛತ್ತು ಕೂಡ್ರಿಸಿದ್ದರು. ಅದರಮೇಲಿನ ಬಂಗಾರದ ವರಕಿನ ಕೌಶಲ್ಯದ ಕೃತಿಯು ಜನರ ಚಿತ್ತಹರಣ ಮಾಡುತ್ತಿತ್ತು. ದುಡ್ಡಿಗೆ ಜೋತಿದ್ದ ಭಾವುಸಾಹೇಬನ ದೃಷ್ಟಿಯು ಆ ಬೆಳ್ಳಿಯ ಛತ್ತಿನಮೇಲೆ ಹೋಯಿತು, ತಗಡುಉಚ್ಚಿಸಿ ಟಂಕಸಾಲೆಯಲ್ಲಿ ಅದರ ನಾಣ್ಯಗಳನ್ನು ಹೊಯಿಸಿ ದಂಡಿನ ಸಂಬಳ-ಸಾರಿಗೆ ತೀರಿಸಬೇಕೆಂದು ಆತನು ಮಾಡಿದನು. ಆಗ ಬಾದಶಾಹಿಯ ಸ್ವಾಮಿನಿಷ್ಠ ಮಾಂಡಲಿಕನಾದ ಸುರಜಮಲ್ಲ ಜಾಟನು ಬೇಡಿಕೊಾಂಡದ್ದೇನಂದರೆ-ಭಾವುಸಾಹೇಬ, ತಾವು ಬಾದಶಾಹಿಯ ಸಿಂಹಾಸನದ ಮರ್ಯಾ ದೆಯನ್ನು ಕಾಯಲೇಬೇಕು. ಪೂರ್ವದಲ್ಲಿ ನಾದಿರಶಹನು ಸಿಂಹಾಸನವನ್ನು ಸ್ವಾಧೀನಪ ಡಿಸಿಕೊಂಡನು; ಆದರೆ ಆತನು ಅದರ ಬಂಗಾರದ ಕಳಸವನ್ನು ಒಯ್ದನಲ್ಲದೆ, ಭತ್ತ ನ್ನು
ಮುಟ್ಟಲಿಲ್ಲ.ಆಮೇಲೆ ಕಂದಹಾರದ ಬಾದಶಹನಾದ ಅಬದು ಲಅಲ್ಲಿಯು ಎರಡು ಸಾರೆ ದಂಡೆತ್ತಿಬಂದು ಹಾವಳಿಮಾಡಿ ಹೋದನು. ಆತನು ತೋಪು ಮೊದಲುಮಾಡಿ ಎಲ್ಲ ಸಾಮಾನು ಒಯ್ದರೂ ಸಿಂಹಾಸನದ ಅಪಮಾನ ಮಾಡಲಿಲ್ಲ. ಸದ್ಯಕ್ಕೆ ನಿಮ್ಮ ಬಳಿ ಯಲ್ಲಿ ಬಾದಶಹನ ಉಮರಾವನಾದ ನಾನು ಇರುತ್ತೇನೆ. ನಮ್ಮ ಕಣ್ಣೆದುರಿಗೆ ಇಂಥ ಕೆಲಸವಾಗಬಾರದು. ಇದರಿಂದ ನಿಮಗೆ ಯಶಃಪ್ರಾಪ್ತಿಯಾಗಲಿಕ್ಕಿಲ್ಲ. ಸ್ವಾಮಿದ್ರೋ ಹದ ಪಾತಕವೂ ತಟ್ಟೀತು ; ಆದ್ದರಿಂದ ಈಗ ನಿಮ್ಮನ್ನು ಬೇಡಿಕೊಳ್ಳುವದೇನಂದರೆ, ದಯಮಾಡಿ ನನ್ನ ಇಷ್ಟು ಮಾತನ್ನು ನಡಿಸಿಕೊಡಬೇಕು. ನಿಮಗೆ ವೆಚ್ಚಕ್ಕೆ ತೊಂದರೆ ಯಾಗಿದ್ದರೆ, ನನಗೆ ಅಪ್ಪಣೆಯಾಗಬೇಕು. ಐದು ಲಕ್ಷ ರೂಪಾಯಿಗಳನ್ನು ಕೊಡುವೆನು.