ವಿಪರೀತಕಲ್ಪನೆ.
ಈಮೇರೆಗೆ ಭಾವೂಸಾಹೇಬನು ಯುಕ್ತಿಯುಕ್ತವಾದ ಯಾವಮಾತನ್ನೂ ನಡಿಸದೆ, ಬಾದಶಹನ ರತ್ನಖಚಿತವಾದ ಬಂಗಾರದ ಸಿಂಹಾಸನವನ್ನೂ, ದೊರೆತ ಬೆಳ್ಳಿ ಬಂಗಾರವನ್ನೂ ತಕ್ಕೊಂಡು ಬೆಳ್ಳಿಯ ಛತ್ತನ್ನು ಅಪಹರಿಸಿ ಕುಂಜಪ್ರರದ ಕಡೆಗೆ ಸೈನ್ಯದೊಡನೆ ಸಾಗಿದನು , ಉತ್ತರಹಿಂದುಸ್ಥಾನದವರ ಯಾವಮಾತನ್ನೂ ನಡಿಸಲಿಕ್ಕಿಲ್ಲೆಂದು ಆತನೂ, ಆತನ ದಕ್ಷಿಣದ ಪರಿವಾರದವರೂ ನಿಶ್ಚಯಿಸಿದ್ದರೆಂದು ಹೇಳಬಹುದು. ಅವರು ಮೇವು ಮಿಡಚಿಗಳಸಲುವಾಗಿ ಬಾದಶಾಹಿಯ ದೇಶವನ್ನು ಇಪ್ಪತ್ತು ಇಪ್ಪತ್ತೈದು ಹರದಾರಿಯ ವರೆಗೆ ಸುಲಿದುವಸಮಾಡಿದರು . ದುರಾಸೆ ಅಹಮ್ಮದಶಹನಿಗೆ ಅನ್ನ ಸಾಮಗ್ರಿಯು ದೊರೆ ಯದಾಯಿತು. ಭಾವುಸಾಹೇಬನ ಭಾಂಡಾರದಲ್ಲಿ ಏಳುಕೋಟಿ ರೂಪಾಯಿಗಳ ಸಂಗ ಹವಾಯಿತು. ಕುಂಜಪುರದೊಳಗಿನ ಬಾದಶಾಹೀ ಭಾಂಡಾರದೊಳಗಿನ ಧನವನ್ನು ಭಾವು ಸಾಹೇಬನು ಸುಲಿದನು, ಒಟ್ಟಿಗೆ ಮರಾಟರ ಭಾಂಡಾರದಲ್ಲಿ ಒಂಬತ್ತು ಕೋಟಿ ರೂಷಣ ಯಿಗಳ ಸಿಲಕು ಆಯಿತು. ಆತ ದುರಾಣಿ ಬಾದಶಹನ ಸೈನ್ಯದ ಬೀಡು ಯಮುನೆಯ ದಂಡೆಯಲ್ಲಿತ್ತು. ನಾವೆಗಳ ಪೂಲಿನ ಸಹಾಯದಿಂದ ಆತನ ಸೈನ್ಯವು ಯಮುನೆಯನ್ನು ದಾಟ ಇತ್ತಕಡೆಗೆ ಬರತೊಡಗಿತು. ಆಗ ಮರಾಟಾ ಸರದಾರರಾದ ನಿಂತರಕರ, ಸದಸೇರಬಹಾದ್ದರ, ಮಾಣಕೇಶರ, ಪವಾರ, ಗಾಯಕವಾಡ, ಸಿಂದೆ, ಗಾರದಿ ಎಂಬವರು ತೋಪುಗಳ ಹೊಡತದಿಂದ ಆ ಸೈನ್ಯದ ಸಂಹಾರಮಾಡತೊಡಗಿದರು. ಅದರಿಂದ ಶತ್ರು ಗಳ ಸೈನಿಕರಲ್ಲಿ ಬಹುಜನರು ರಣಭೂಮಿಯಲ್ಲಿ ಮಡಿದರು. ಅಬದಾಲಿಯ ಮತ್ತೊಂದು ಸೈನ್ಯವು ಭಾವುಸಾಹೇಬನ ದರ್ಪದ ಸವಿಗಂಡು ಹಿಂದಿರುಗಿ ಓಡತೊಡಗಿತು. ತನ್ನ ಸೈನ್ಯದ ಈ ಗತಿಯನ್ನು ನೋಡಿ ಅದಾಲಿಯು ಏಚಾರಮಗ್ನನಾದನು. ಆತನು ತನ್ನ ಮಿತ್ರರಾದ ಸುಜಾಉದ್ಲನೇ ಮೊದಲಾದವರಸಂಗಡ ಆಲೋಚಿಸತೊಡಗಿದನು. ಆಗ ಮನಸೂರ ಅಲ್ಮೀಯು ಅಬದಾಲಿಯನ್ನು ಕುರಿತು-"ಮರಾಟರು ಒಳ್ಳೆ ರಣಶೂರರು. ಅವರೆದುರಿಗೆ ಎದೆಗೊಟ್ಟು ನಿಲ್ಲುವದು ಸಾಮಾನ್ಯ ಕೆಲಸವಲ್ಲ, ಮೇಲೆ ದುಷ್ಮಾಳಬಿದ್ದಿರುವದು, ನಮ್ಮ ಅನ್ನಸಂಗ್ರಹವು ತೀರುತ್ತ ಬಂದಿರುವದು, ಮರಾಟರಿಗೆ ಅನ್ನದ ಕೊರತೆಯಿಲ್ಲ. ಮೇಲಾಗಿ ಬಾದಶಹನಭಾಂಡಾರವು ಅವರ ಕೈಸೇರಿತು. ಹೋದಲ್ಲಿ ಅವರಿಗೆ ಜಯವೂ, ನಮಗೆ ಅಪಜಯವೂ ಪ್ರಾಪ್ತವಾಗುತ್ತಿರುವವು. ಯುದ್ಧದಲ್ಲಿ ಅವರ ಕೈ ಮುಂದಾ ಗಿರುವದು. ಹಾಗೆ ಮಾಡಬೇಕು? ಏನು ಮಾಡಬೇಕು? ಎಂಥ ಹೊತ್ತು ಬಂದಿತಲ್ಲ!” ಎಂದು ನುಡಿಯಲು, ಸುಜಾದೌಲನುಸಂಧಾನಾರ್ಥವಾಗಿ ಭಾವೂಸಾಹೇಬಸಕಡೆಗೆ ವಕೀಲನನ್ನು ಕಳಿಸಬೇಕೆಂದು ಹೇಳಿದನು, ಬಳಿಕ ಬಹಳಹೊತ್ತು ಅರೆದಾಟವಾಗಿ, ಕಡೆಗೆ ಸಂಧಾನಾರ್ಥವಾಗಿ ವಕೀಲನನು ಕಳಿಸಬೇಕೆಂದು ಗೊತ್ತಾ ಯಿತು. ಆಮೇಲೆ ಹಿಮ ತಖಾ, ರಸುಲಖಪಠಾಣ, ಮಣಿರಾಮರಜಪೂತ, ಮಹದಾಜಿಸುಭಾವರಾನ ಎಂಬ ನಾಲ್ವರು ವಕೀಲರನ್ನು ಸಂಧಾನಾರ್ಥವಾಗಿ ಭಾವುಸಾಹೇಬನಕಡೆಗೆ ಕಳಿಸಿದರು. ಅವರ ಸಂಗಡ ಒಂದು ಪತ್ರವನ್ನೂ , ನಜಾಣೆಯನ್ನೂ ದುರಾಣಿಯು ಕಳಿಸಿದ್ದನು.
ಭಾವುಸಾಹೇಬನು ಮಲ್ಕಾರರಾವಹೋಳಕರ, ದಮಾಲೆಗಾಯಕವಾಡ, ಸಮಶೇರ