ವಿಷಯಕ್ಕೆ ಹೋಗು

ಪುಟ:ಕುರುಕ್ಷೇತ್ರ ಗ್ರಂಥ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೮

ಕುರುಕ್ಷೇತ್ರ?

ಬಹದ್ದರ, ಇಬ್ರಾಹಿಮಖಾನ ಗಾರದಿ, ವಿಂಚೂಠಕರ, ಪವಾರ, ಬಾಳಕೃಷ್ಣಶಾಸ್ತ್ರಿ, ಮೇಹೇಂದಳೆ, ಬಾಬುರಾವಭಾನುಫಡಣವೀಸ, ಲಕ್ಷ್ಮಣರಾವಸಾನಸೆ, ಜನಕೋಜಿಸಿಂದೆ, ಮಹದಾಜಿಸಿಂದೆ, ಲಕ್ಷ್ಮಣಬಲ್ಲಾಳ ಮೊದಲಾದ ಸರದಾರರ ದರಬಾರ ನೆರೆಸಿ, ದುರಾ ಣಿಯಕಡೆಯಿಂದ ಬಂದ ವಕೀಲರನ್ನು ಕಾಣಿಸಿಕೊಂಡನು. ಶಹನಕಡೆಯಿಂದ ನಜರಾಣೆ ಯಾಗಿ ಬಂದ, ಆನೆ-ಕುದುರೆ-ಉಡುಗರೆ-ಅಲಂಕಾರ ಮಾದಲಾದವನ್ನು ಆತನು ಸ್ವೀಕ ಶಿಸಿದನು. ಬಳಿಕ ಬಂದಪತ್ರವನ್ನು ಒಡೆದುನೋಡಲು, ಅದರಲ್ಲಿ ಅಬದಾಲಿಯು ಒಗರಿ ನಿಂದ ಬರೆದದ್ದರ ತಾತ್ಪರ್ಯವೇನಂದರೆ-“ನೀವು ನಿಮ್ಮ ರಾಜ್ಯದ ಗಡಿ ದಾಟಿ ಮುಂದಕ್ಕೆ ಸಾಗಿಬಂದಿರಿ, ಪಂಜಾಬ, ಬಂಗಾಲ, ಅಂತರ್ವೇದಿ, ಮಾರವಾಡ ಇವು ಬಾದಶಹನ ರಾಜ್ಯದ ಭಾಗಗಳಾಗಿದ್ದು, ಅವುಗಳಮೇಲೆ ನೀವು ಕಣು ಇಟ್ಟಿರುವಿರಿ. ಗುಜರಾಥಪ್ರಾಂತವನ್ನೂ ನೀವು ಸ್ವಾಧೀನಪಡಿಸಿಕೊಂಡಿರಿ. ದಿಲ್ಲಿಯ ಬಾದಶಾಹಿಯ ಸಿಂಹಾಸನವನ್ನೊಡೆದು, ಅದರ ಅಮರ್ಯಾದೆಮಾಡಿರುವಿರಿ. ಬಾದಶಹನು ನಮ್ಮನ್ನು ಸಹಾಯಕ್ಕಾಗಿ ಕರೆದಿರುವನು, ನೀವು ದಕ್ಷಿಣದ ರಾಜ್ಯವನ್ನು ಉಪಭೋಗಿಸಿ, ದಿಲೀಪತಿಯ ಗೌರವವನ್ನು ಕಾಯತಕ್ಕದ್ದು; ಆದರೆ ನೀವು ಹಾಗೆ ನಡೆಯಲಿಲ್ಲ. ಆದರೂ ಆಗಲಿ, ಈಗ ದಿಲೀಪತಿಯ ಕೈಯಿಂದ ದಂಡ ಯಾತ್ರೆಯ ವೆಚ್ಚವನ್ನು ಪಡೆದು ನೀವು ದಕ್ಷಿಣಕ್ಕೆ ಹೊರಟುಹೋಗತಕ್ಕದ್ದು. ಚಿತ್ತೂರ, ಜೋ ಧಪೂರ, ಜಯಪೂರ, ಉದೇಪೂರ ಅಜಮಿಾರ ಮೊದಲಾದ ಐವತ್ತೆರಡು ಜನರು ದಿಲ್ಲಿಯ ಬಾದಶಹನ ಮಾಂಡಲಿಕರಿರುತ್ತಾರೆ. ಅವರನ್ನು ವಶಮಾಡಿಕೊಂಡು ದಿಲ್ಲಿಯ ಬಾದಶಾಹಿ ಯನ್ನು ನೀವು ಸಂಪೂರ್ಣವಾಗಿ ಮುಣುಗಿಸುವ ಯತ್ನ ಮಾಡುತ್ತಿರುವಿರಿ; ಆದರೆ ಬಾದ ಶಹನಮೇಲೆ ಶಸ್ತ್ರವೆತ್ತುವವರ ಶಾಸನಮಾಡುವದಕ್ಕಾಗಿಯೂ, ಅವರ ಉದ್ಯಾಮತನದ ಕೃತಿಯನ್ನು ನಿಲ್ಲಿಸುವದಕ್ಕಾಗಿಯೂ ನಾವು ನಮ್ಮ ದೇಶವನ್ನು ಬಿಟ್ಟು, ಸೈನ್ಯದೊಡನೆ ಇಲ್ಲಿಗೆ ಬಂದಿರುವೆವು. ನೀವು ದಕ್ಷಿಣದ ಆರುವರಿ ಸುಭೆಗಳನ್ನು ಆಕ್ರಮಿಸಿ, ಈಗ ಬಾದ ಶಾಹಿಯನ್ನು ಮುಣುಗಿಸುವ ಯೋಚನೆಯಲ್ಲಿರುವಿರಿ. ಇದರಿಂದ ನಿಮಗೆ ಹಿತವಾಗಲಿ ಕ್ಕಿಲ್ಲ. ಬಾದಶಹನು ಕೃಪಾವಂತನಾಗಿ ನಿಮಗೆ ಪೂರ್ವದಲ್ಲಿ ೬|| ಸುಭೆಗಳ ಸರದೇಶಮು ಖಿಯ ಸನದು ಕೊಟ್ಟಿರುವನು, ಅವನ್ನು ಉಪಭೋಗಿಸುತ್ತ ಸುಖವಾಗಿ ಇರಬೇಕು. ನರ್ಮದೆಯ ದಕ್ಷಿಣತೀರದಿಂದತ್ತಕಡೆಯ ಗಡಿಯನ್ನು ರಕ್ಷಿಸಿಕೊಂಡು ಇರಬೇಕು, ಮೇವು ಮಿಡಚಿಯ ಸಲುವಾಗಿ ಎರಡುಕೊಟಿ ರೂಪಾಯಿ, ದಂಡಯಾತ್ರೆಯ ವೆಚ್ಚದಸಲುವಾಗಿ ಒಂದುಕೊಟಿ ರೂಪಾಯಿ ಕೂಡಿ ಮೂರುಕೋಟಿ ರೂಪಾಯಿಯ ಬಾದಶಾಹಿಯ ಹೊಸ ಸನದು ಮಾಡಿಕೊಡುವೆವು; ಅದನ್ನು ತಕೊಂಡು ಉಳಿದ ಮಾಂಡಲಿಕರಂತೆ ನೀವೂ ಇರ ಬೇಕು. ಇದಕ್ಕೆ ನಿಮ್ಮ ಒಪ್ಪಿಗೆಯಿದ್ದರೆ, ನಮ್ಮ ನಿಮ್ಮ ಒಡಂಬಡಿಕೆಯಾಗುವದು. ಇದಕ್ಕೆ ಒಪ್ಪಿ ಕೊಳ್ಳುತಿದ್ದರೆಯೇ ನೀವು ಉತ್ತರಕಳಿಸಬೇಕು; ಅಂದರೆ ಬಾದಶಹರವರಿಗೆ ಹೇಳಿಎಲ್ಲವನ ಸೈಮಾಡಿಸಿಕೊಡುವೆವು. ಇದಕ್ಕೆ ಒಪ್ಪಿಕೊಳ್ಳದಿದ್ದರೆ ಮಾತ್ರ ಪರಿಣಾಮವುನೆಟ್ಟಗಾಗಲಿಕ್ಕಿಲ್ಲ. *

ಮರಾಟರ ಉತ್ಕರ್ಷ ಸ್ಥಿತಿಯನ್ನು ಮನಸ್ಸಿನಲ್ಲಿ ತಂದರೆ, ಅಬದಾಲಿಯ ಈ ಪತ್ರವು ಒರಟತನದ್ದಾಗಿಯೂ, ಬೆದರಿಕೆ ತೋರಿಸುವಂತಹದಾಗಿಯೂ ತೋರುವದು. ಭಾವು