೨ ಕುಲ ಕ್ಷೇತ್ರ! ಅಫಗಣರು ಮರಾಟರನ್ನು ತುಂಡರಿಸಲಿಕ್ಕೆ ಹಿಂದೆ-ಮುಂದೆ ನೋಡಲಿಲ್ಲ; ಸಾಧಿಸಿವನ್ನು ಸೇಡು ತೀರಿಸಿಕೊಳ್ಳಹತ್ತಿದರು. ಹಿಂದಿರುಗಿ ಹೋಗುತ್ತಿರುವ ಮರಾಟರ ದಂಡನ್ನು ಅವರು ಅಟ್ಟಿಬರುತ್ತಲೇ ಇದ್ದರು. ಹಿಂದಿನಿಂದ ಹೊಸಸ್ಯವು ಅವರ ಸಹಾಯಕ್ಕೆ ಬರುತಲಿತ್ತು. ಅವರನ್ನು ಮಹದಾಜಿಸಿಂದೆಯೂ, ವಿಂಚ್ರಕರನೂ, ಸವಿರಹ ಧ್ವರನೂ ತಡೆಯುತ್ತಿದ್ದರು. ಹೋಳಕರನು ತಮ್ಮ ಛಾವಣಿಯ ಸನಿಯಕ್ಕೆ ಹೋದನು. ಇತ್ತ ಮಹದಾಜಿಸಿಂದೆಯು ತನಗೆ ಎದುರಾದ ಅಫಗಾಣರನ್ನು ಸೋಲಿಸಿ ಹಿಂದಕ್ಕೆ ಜಯಶಾಲಿಯಾದನು; ಆದರೂ ಅಫಗಾಣ ಮತ್ತೊಂದು ಮೊಡ ವಂಡು ಹೋಳಕರನ ಸೈನ್ಯದಮೆಲೆ ಸಾಗಿಬರುತಿತ್ತು. ಅದಕ್ಕೆ ಇಬ್ರಾಹೀಮಖಾನಗರದಿಯು ಎದುರಾಗಿ, ತನ, ಕ ವಾ ಯ ತಿ ಯ ಸೈನ್ಯದ ಕೈಯಿಂದ ಅದನ್ನು ಹೊಡೆದೋಡಿಸಿ ಜಯವನ್ನು ಸಂಪಾದಿಸಿದನು. - ಹೀಗೆ ಸಿಂದೆಯೂ, ಇಬ್ರಾಹಿಮಪಾನನೂ ಅಫಗಾಣರನ್ನು ಹೊಡೆದೋಡಿಸಿ ದರೂ, ಹೋಳಕರನು ಪೆಟ್ಟತಿಂದು ಹಿಂದಿರುಗಿ ಬಂದದ್ದರಿಂದ, ಒಟ್ಟಿನಮೇಲೆ ಮರಾಟರಿಗೆ ಸೋಲು ಬಂದಂತಾಯಿತು. ಸದಾಶಿವರಾವಭಾವು, ವಿಶ್ವಾಸರಾವ, ಬಳವಂತರಾವ ಮಹೇಂದಳೆ ಮೊದಲಾದವರು ಕುದುರೆಗಳನ್ನು ಹತ್ತಿಕೊಂಡು ಛಾವಣಿಯ ಬಾಗಿಲೊಳಗೆ ನಿಂತುಕೊಂಡಿದ್ದರು. ಮಹದಾಚಿಸಿಂದೆಯು ತನಗೆ ಜಯವಾಯಿತೆಂಬ ಸಂತೋಷದಿಂದ ಛಾವಣಿಯನ್ನು ಪ್ರವೇಶಿಸಿ, ಭಾವುಸಾಹೇಬನಿಗೆ ಮುಜರೆಮಾಡಲು, ಭಾವುಸಾಹೇಬನು ಮುಜರೆಯನ್ನು ಸ್ವೀಕರಿಸಿ ಸ್ವಲ್ಪ ಸಿಟ್ಟಿನ ಮುದ್ರೆಯಿಂದ-“ಯಾಕೆ ಒಂದೇಸಾಹೇಬ, ದುರಾಣಿಯಿಂದ ಪೆಟ್ಟು ತಿಂದು ಹಿಂದಿರುಗಿ ಬಂದಿರಾ ?” ಎಂದು ಪ್ರಶ್ನೆ ಮಾಡಿದನು. ರಾತ್ರಿಯ ಯುದ್ಧದ ಪರಿಣಾಮದಿಂದ ಒಟ್ಟಿನಮೇಲೆ ಭಾವುಸಾಹೇಬನು ಹೀಗೆ ಪ್ರಶ್ನೆ ಮಾಡಬಹುದಾಗಿತ್ತು. ಇದನ್ನರಿತು ಸಿಂದೆಯು ಮನಸ್ಸಿನಲ್ಲಿ ಸ್ವಲ್ಪ ಖಿನ್ನನಾಗಿ ಶ್ರೀಮಂತರನ್ನು ಕುರಿತು--ಧನೀಸಾಹೇಬ, ತಾವು ಪರಶುರಾಮನ ಅವತಾರವಾಗಿರುವ ದರಿಂದ, ತಮಗೆ ಗೊತ್ತಿಲ್ಲದ ವಿಷಯವಿಲ್ಲ; ಅಂದಬಳಿಕ ನಾನು ಸ್ವತಃ ಪೆಟ್ಟು ತಿಂದಿಲ್ಲೆ ಬದು ವಿದಿತವಾಗಿರಬಹುದು. ತಮ್ಮ ಮಾತು ಬೇರೆ ಯಾರಿಗಾದರೂ ಹತ್ತುತಿ ದ್ದರೆ ಹತ್ತುತ್ತಿರಬಹುದು,” ಎಂದು ಅನ್ನಲು, ಸದಾಶಿವರಾಯನು-ಪಾಟೀಲಬಾವಾ, ಏನೇ ಇರಲಿ, ನೀವು ಪೆಟ್ಟು ತಿಂದರೇನು, ಎರಡನೆಯವರು ಬಿಟ್ಟು ತಿಂದರೇನು, ನಾವು ಒಂದೇ ಎಂದು ತಿಳಿಯುವೆವು.” ಎಂದು ನುಡಿದನು. ಅದಕ್ಕೆ ಹಿಂದೆಯು ತಿರುಗಿ ಮಾತಾ ಡದೆ ಮುಂದಕ್ಕೆ ಸಾಗಿದನು. ಅಷ್ಟರಲ್ಲಿ ಇಬ್ರಾಹಿಮಪಾನಗರದಿಯ ಸೈನ್ಯವು ಅಥ ಗಾಣರನ್ನು ಓಡಿಸಿ ಸಿನಿಂದ ಹೆಜ್ಜೆ ಹಾಕುತ್ತ ಬರುತ್ತಿರುವದು ಭಾವುಸಾಹೇಬನ ಕಣ್ಣಿಗೆ ಬಿದ್ದಿತು. ಗಾರದಿಯಮೇಲೆ ಭಾವುಸಾಹೇಬನ ವಿಶ್ವಾಸ ಬಹಳವೆಂಬದನ್ನು ವಾಚಕರು ಬಲ್ಲರು. ಪಸ್ರಂಗಒದಗಿದಲ್ಲಿ ಈತನೇ ನಮ್ಮ ಮಾನವನ್ನು ಕಾಯುವನೆಂದು ಭಾವುಸಾಹೇಬನು ಸಂಪೂರ್ಣವಾಗಿ ನಂಬಿದ್ದನು, ಭಾರತಯುದ್ಧದಲ್ಲಿ ದುರ್ಯೋಧನನು ಕರ್ಣನನ್ನು ನಂಬಿದಂತೆ, ಈಗ ಭಾವೂಸಾಹೇಬನು ಗಾರದಿಯನ್ನು ನಂಬಿದ್ದನೆಂದು ಹೇಳ
ಪುಟ:ಕುರುಕ್ಷೇತ್ರ ಗ್ರಂಥ.djvu/೫೯
ಗೋಚರ