ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾತಿಗೆ ಮಾತು

11

ತರಿಸಿ, ತೆವರಿಯ ಬಾಯನ್ನು ಮುಚ್ಚಿಸಿ, ತನ್ನ ಗದ್ದೆಗೆ ನೀರು ಹನಿಯದಂತೆ ಮಾಡಿಸಿ ಬಿಟ್ಟನು.

ಆಗ ಕೋಟಿಯು “ಅಯ್ಯಾ! ನಿಮ್ಮ ಆಳುಗಳು ಗದ್ದೆಯ ಬಾಯಿ ಮುಚ್ಚುವುದು ಸರಿಯಲ್ಲ. ಎಣಿಲ ಕಾಲದ ಉಪ್ಪನ್ನ, ಸುಗ್ಗಿ ಕಾಲದ ಮಳೆ ಬೆಳೆ, ಇವು ನನಗೂ ಸರಿ; ನಿಮಗೂ ಸರಿ, ನಮ್ಮ ಮೇಲೆ ನಿಮಗೆ ಹಗೆ ಇದ್ದರೆ, ಅದನ್ನು ನಮ್ಮೊಡನೆ ಸಾಧಿಸಿರಿ; ಬಿತ್ತಿದ ಬೆಳೆಯೊಡನೆ ಸಾಧಿಸಬೇಡಿರಿ, ನೀತಿ ಪ್ರಕಾರ ಹೋಗುವ ನೀರು ನೀತಿ ಪ್ರಕಾರ ಹೋಗಲಿ ಎಂದು ಹೇಳಿದನು.

ಅದಕ್ಕೆ ಬುದ್ಧಿವಂತನು ಜರ್ಬಿನಿಂದ “ಏನಂದೆ ? ನೀತಿಗೀತಿ ನಿನಗೆ ಬಿಲ್ಲರ ಕುಟ್ಟಿಗೆ ಯಾರು ಕೊಟ್ಟರೊ ? ನಿನ್ನ ಗದ್ದೆಯ ನೀರಿಗೆ ನನ್ನ ಗದ್ದೆಯ ದಾರಿಯೇ ? ಗದ್ದೆ ಒತ್ತಿನ ಕಾಡು ಕಡಿ, ಕಣಿ ತೋಡು, ನೀರು ಬಿಡು-ಹೋಗುತ್ತದೊ ಇಲ್ಲವೊ ನೋಡು !” ಎಂದು ಆರ್ಭಟಿಸಿದನು.

ಕೋಟಿಯು ಇನ್ನು ಸಮಾಧಾನದಿಂದ “ಅಯ್ಯಾ ! ನಾನು ಬಂದೇ ಇಷ್ಟಾಯಿತು. ನನ್ನ ತಮ್ಮ ಚೆನ್ನಯ ಬಂದಿದ್ದರೆ, ಒಂದಕ್ಕೆ ಒಂದೂವರೆ ಆಗುತಿತ್ತು” ಎಂದನು.

“ಏನು ಬೊಗಳುತ್ತೀ? ನಿನ್ನ ತಮ್ಮ? ಅವನೇನು ಕಾಟಿಯ ಹಾಲು ಕುಡಿದವನೇ ? ಅವನು ಬಾನನ್ನು ಒಡೆದು ಬರುತ್ತಾನೋ ಇಲ್ಲವೆ ಭೂಮಿಯನ್ನು ಬಿರಿದು ಬರುತ್ತಾನೊ? ನಿನ್ನ ತಮ್ಮ?” ಎಂದು ಬುದ್ದಿವಂತನು ಅಬ್ಬರದಿಂದ ಅಣಕಿಸಿದನು.

ಇವರಿಬ್ಬರ ಬಾಯಿಯ ಬಡಿದಾಟವನ್ನು ದೂರದಲ್ಲಿ ನಿಂತು ಕೇಳುತ್ತಲಿದ್ದ ಚೆನ್ನಯನು ತನ್ನ ಕತ್ತಿಯನ್ನು ಹಿಡಿದುಕೊಂಡು, ಸರಸರನೆ ಅಲ್ಲಿಗೆ ಬಂದನು. ಆದರೂ ಬುದ್ಧಿವಂತನ ಬಾಯಲ್ಲಿ ಬೈಗಳು ಅಡಗಲಿಲ್ಲ,

ಕೋಟಿಯು ಚೆನ್ನಯನನ್ನು ತಡಿಸಿ “ಮಲ್ಲಯ! ಬೇಡ! ಕೆಣಕ ಬೇಡ! ತಲೆಗೆ ಹೊಯ್ದ ನೀರು ಕಾಲಿಗೆ ಇಳಿಯುತ್ತದೆ. ಕಾಲಿಗೆ ಎರೆದ ನೀರು ತಲೆಗೆ ಏರುವುದೇ? ಕ್ರಮ ಪ್ರಕಾರವಾಗಿ ಮೇಲಿಂದ ಕೆಳಕ್ಕೆ ಹರಿಯ