ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬ್ರಾಹ್ಮಣ ಜೋಯಿಸ

19

ಕಣಿ ಹೇಳುವುದಕ್ಕಾಗಿ ಕುಳಿತುಕೊಂಡನು. ಕೋಟಿಚೆನ್ನಯರೂ ಅಲ್ಲೇ ಕುಳಿತುಕೊಂಡು ನೋಡುತಿದ್ದರು. ಬ್ರಾಹ್ಮಣನು ಒಮ್ಮೆ ಕವಡಿಯನ್ನು ಲೆಕ್ಕಮಾಡಿದನು; ಕೈ ಬೆರಳುಗಳನ್ನು ಎಣಿಕೆ ಮಾಡಿದನು; ಜೇಡಿ ಚೂರಿನಿಂದ ನೆಲದ ಮೇಲೆ ಬರೆದನು; ಗುಣಿಸಿ ನೋಡಿದನು; ಮಣಮಣ ಮಂತ್ರ ಹೇಳಿದನು, ಕಡೆಗೆ ಇಬ್ಬರ ಮುಖವನ್ನು ದೃಷ್ಟಿಸಿ ಅವನು ಹೀಗೆಂದನು.

"ಎರಡು ಮರಿಯಾನೆಗಳು ಕಾಡಿನಿಂದ ಹೊರಬಿದ್ದು ತೋಡನ್ನು ಕಲಕಿ, ಗದ್ದೆಯನ್ನು ತುಳಿದು, ಕಬ್ಬಿನ ತೋಟದ ಮೇಲೆ ಕಣ್ಣಿಟ್ಟಂತೆ ತೋರುತ್ತದೆ.”

ಚೆನ್ನಯನು : ಸರಿ, ಜೋಯಿಸರೇ ! ಚೆನ್ನಾಗಿ ಹೇಳಿದಿರಿ. ಇನ್ನೇನು ಕಾಣುತ್ತದೆ ?” ಎಂದು ಕೇಳಿದನು.

ಬ್ರಾಹ್ಮಣನು ಚೆನ್ನಾಗಿ ಗುಣಿಸಿ ನೋಡಿ, “ಆನೆಮರಿಗಳಿಗೆ ನಾಲ್ಕು ಕಡೆ ಅಪಾಯ, ಮೂಡು ಕಡೆಯಿಂದ ಕಿಚ್ಚಿನ ಅಪಾಯ, ಕಡೆಯಿಂದ ಕರ್ಪದ ಮೋಸ, ಬಡಗಿನಿಂದ ಕೋವಿಯ ಏಟು, ತೆಂಕಲಿಂದ ಮೊಸಳೆಯ ಕಾಟ- ಹೀಗೆಲ್ಲಾ ತೋರುತ್ತದೆ' ಎಂದು ಹೇಳಿ, “ನೀವು ಮಾತ್ರ” – ಎಂದು ಮಾತು ಬೀಳುವಷ್ಟರಲ್ಲಿ ಚೆನ್ನಯನು “ನಮಗೆ ಏನಾಗುತ್ತದೆಂದು ಹೇಳಿ ಬಿಡಿ” ಎಂದು ಒದರಿದನು.

ಚೆನ್ನಯನ ಗರ್ಜನೆಗೆ ಬ್ರಾಹ್ಮಣನ ಬೆರಳೆಣಿಕೆ ತಪ್ಪಿತು; ಅವನು ಮತ್ತೆ ಲೆಕ್ಕಹಾಕಿ ೧೯೯ ರ ಮೇಲೆ ಬಿಡಬೇಕು” ಎಂದು ಸೂಚಿಸಿದನು.

ಕೋಟಿ – “ಇನ್ನೂರು ಬಿಡಬೇಕೆ ?” ಎಂದು ಕೇಳಿದನು.

ಬ್ರಾಹ್ಮಣ - “ಇನ್ ಊರು ಬಿಡು; ಮುಂದೆ ಹತ್ತು, ಹತ್ತು, ಹತ್ತು, ಹತ್ತು ಹೀಗೆ ಏರಿಸಿ ಹೋಗಬೇಕು” ಎಂದನು.

ಕೋಟಿ- “ಎಲ್ಲಿಯವರೆಗೆ?

ಇಲ್ಲಿವರೆಗೆ ಹೋಗಬೇಕು” ಎಂದು ಬ್ರಾಹ್ಮಣನು ತನ್ನ ಬಲಗೈಯ ಬೆರಳುಗಳನ್ನು ಬಿಡಿಸಿ ತೋರಿಸಿದನು,

ಕೋಟೆಯು “ಐನೂರನ್ನು ಮುಟ್ಟಿದ ಮೇಲೆ ನಮಗೆ ಮುಹೂರ್ತಗಳು ಕೂಡಿ ಬಂದಾವೋ ?” ಎಂದು ತಿರಿಗಿ ಪ್ರಶ್ನೆ ಇಟ್ಟನು.

2*