ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

20

ಕೋಟಿ ಚೆನ್ನಯ

ಬ್ರಾಹ್ಮಣನು ಕವಡಿಗಳನ್ನು ಆಡಿಸಿ, “ಅಯ್ಯನೂರನ್ನು ಮುಟ್ಟಿದ ನಂತರದ ದಿನಗಳಲ್ಲಿ ವಿಷಗಳಿಗೆ ಸಂದರ್ಭಗಳೇ ಹೆಚ್ಚು, ಜಗಳದ ಕುರುಹು ತೋರುತ್ತದೆ” ಎಂದನು.

ಕೋಟಿ- ಯಾರೊಳಗೆ ಜಗಳ ??)

ಬ್ರಾಹ್ಮಣ “ನೆಗಳೆಗೂ ಆನೆಗೂ.

ಚೆನ್ನಯ- “ಜಗಳದಲ್ಲಿ ನಾನು ಮೊಸಳೆಯನ್ನು ಸೀಳಿಬಿಡುತ್ತೇನೆ.”

ಕೋಟಿಯು ಜಗಳದಲ್ಲಿ ಏನಾಗುವುದೆಂದು ನೋಡಿ' ಎಂದು ಮರಳಿ ಪ್ರಶ್ನೆ ಇಟ್ಟನು.

ಬ್ರಾಹ್ಮಣನು ಮತ್ತೊಮ್ಮೆ ಕಾಯಿಗಳನ್ನು ಮಗುಚಿ ಹಾಕಿ, “ಜಗಳದಲ್ಲಿ ಆ ಆ ಆ ಆ..... ” ಎಂದು ಬಾಯಿತೆರೆದು ಆಕಳಿಸಿದನು.

ಚೆನ್ನಯ-ಜೋಯಿಸರೇ, ಸೊಲ್ಲು ಹೊರಡುವುದಿಲ್ಲವೇ?

ಬ್ರಾಹ್ಮಣನು – “ಬೈದ್ಯರೇ, ಆನೆಗಳೆ ನೆಲಕ್ಕೆ ಬಿದ್ದು ಸತ್ಯದ ಬುಗ್ಗೆ ಒಸರೀತ; ಕೀರ್ತಿಯ ಹೊಳೆ ಹರಿದೀತು; ಸೌಖ್ಯದ ಬೆಳೆ ಬೆಳೆದೀತು” ಎಂದು ಹೇಳುತ್ತ ದೇವರ ಹೆಸರೆತ್ತಿ, ಮಣೆಗೂ ಕಾಯಿಚೀಲಕ್ಕೂ ಪೊಡಮಟ್ಟು, ನಿಮಿತ್ತ ಹೇಳುವುದನ್ನು ಮುಗಿಸಿ, ಒಳಕ್ಕೆ ಹೋದನು.

ಕೋಟಿ ಚೆನ್ನಯರ ಮನಸ್ಸಿಗೆ ಬ್ರಾಹ್ಮಣನು ಹೇಳಿದೆಲ್ಲಾ ರುಚಿಸಿತೊ ಇಲ್ಲವೋ ಗೊತ್ತಾಗಲಿಲ್ಲ. ಆದರೂ ಬ್ರಾಹ್ಮಣನು ಮನೆಯೊಳಗಿಂದ ಹೊರಕ್ಕೆ ಬರುವ ವರೆಗೆ ಕೋಟಿಯು ಅಲ್ಲಿಂದ ಏಳಲಿಲ್ಲ.

ಒಂದು ಗಳಿಗೆಯ ತರುವಾಯ ಬ್ರಾಹ್ಮಣನು ಎರಡು ಬಿಂದಿಗೆಗಳನ್ನು ತಂದು ಅವರ ಮುಂದಿಟ್ಟನು. ಅಣ್ಣ ತಮ್ಮಂದಿರು ಬಿಂದಿಗೆಯ ಹಾಲು ಕುಡಿದು, ತಟ್ಟೆಯಲ್ಲಿ ಇಟ್ಟಿದ್ದ ವೀಳ್ಯದೆಲೆಯನ್ನು ಕೈಯಲ್ಲಿ ತೆಗೆದು ಕೊಂಡರು.

ಇಷ್ಟರಲ್ಲಿ ಹೊತ್ತು ಮುಳುಗುವುದಕ್ಕಾಯಿತು. ಅವರು ಬ್ರಾಹ್ಮಣನಿಗೂ ಅವನ ಕವಡಿಮಣೆಗೂ ಸಾಷ್ಟಾಂಗ ನಮಸ್ಕಾರಮಾಡಿ, ಕಟ್ಟೆಯಿಂದ ಇಳಿದು, ಮುಂದಕ್ಕೆ ಹೋದರು.