ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

22

ಕೋಟಿ ಚೆನ್ನಯ


ಚೆನ್ನ ಯನು “ನಮ್ಮ ಕತ್ತಿಗೆ ಕ್ರಯ ಕಟ್ಟುವವರು ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟಲಿಕ್ಕಿಲ್ಲ” ಎಂದನು.

ಅದಕ್ಕೆ ಸುಂಕದವನು “ಬಂಟರ ಕಾಲಿನ ಎಕ್ಕಡದ ಹೂವಿನ ಮೇಲೆ ಸುಂಕ, ಸೆಟ್ಟಿಯ ಕೊಡೆಯ ಕಾವಿನ ಮೇಲೆ ಸುಂಕ, ಅರಸುಮಗನ ದಂಡಿಗೆಯ ಕೊಂಬಿನ ಮೇಲೆ ಸುಂಕ- ನಾವು ತೆಗೆದುಕೊಂಡಿದ್ದೇವೆ. ನಿಮ್ಮನ್ನು ಬಿಡುವುದುಂಟೇ ?” ಎಂದನು.

ಚೆನ್ನಯ “ನಮ್ಮನ್ನು ಹಿಡಿಯುತ್ತೀಯಾ? ಬಾ ಕೆಳಗೆ, ಬಿಂಕದ ಬಲ್ಲಾಳನಿಗೆ ಕದಲದ ನಾವು ಸುಂಕದ ಕಲ್ಲಾಳನಿಗೆ ಬೆದರುವುದುಂಟೇ ? ಕೆಳಗಿಳಿ- ನಮ್ಮ ಮೇಲೆ ಸುಂಕ ಹೊರಿಸು” ಎಂದು ಹೇಳುತ್ತ ಮುಂದಕ್ಕೆ ಬಂದನು.

ಬಿಂಕದ ಬಲ್ಲಾಳನ ಹೆಸರು ಕೇಳುತ್ತಲೆ ಸುಂಕದವನ ಬಾಯಿ ಒಣಗಿತು. ಅವನು ಬೆಳಕು ತರುತ್ತೇನೆಂದು ಹೇಳಿ, ಒಳಕ್ಕೆ ಹೋಗಿ, ಅಲ್ಲಿಂದಲೇ ತಲೆ ತಪ್ಪಿಸಿಕೊಂಡು ಹೋದನು.

ಕೋಟಿ ಚೆನ್ನಯರು ಪಡುಮಲೆ ಬಲ್ಲಾಳನ ಸೀಮೆ ಕಳೆದು, ರಾತ್ರಿ ಎಲ್ಲಿಯೂ ತಡೆಯದೆ, ದಾರಿ ನಡೆದು, ಹೊತ್ತು ಎರಡುಮೂರು ಗಳಿಗೆ ಏರುವುದರೊಳಗೆ ಪಂಜಕ್ಕೆ ಬಂದು ಮುಟ್ಟಿದರು.