ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

28

ಕೋಟಿ ಚೆನ್ನಯ

ಸುದ್ದಿಯು ಪಂಜ ಸೀಮೆಯ ಅಧಿಕಾರಿಯಾದ ಕೇಮರ ಬಲ್ಲಾಳನ ಕಿವಿಯವರೆಗೆ ಹೋಯಿತು. ಅವರ ಬುದ್ಧಿಯ ಜಾಣ್ನೆಯನ್ನೂ ಮೈಯ ಬಲ್ಬನ್ನೂ ಕೇಳಿ ಆತನ ಕಿವಿಗೆ ಮೊದಲು ಮೊದಲು ಬಹಳ ರುಚಿಯಾಯಿತು. ಕ್ರಮೇಣ ಆ ಹೊಗಳಿಕೆಯೇ ಕಹಿಯಾಗ ಹತ್ತಿತು, ಹಾಗೆ ಬಲ್ಲಾಳನ ಮನಸ್ಸು ತಿರುಗುವುದಕ್ಕೆ ಚೆಂದುಗಿಡಿ ಎಂಬ ಹೆಸರಿನವನೊಬ್ಬನು ಮುಖ್ಯ ಕಾರಣನಾಗಿದ್ದನು,

ಚೆಂದುಗಿಡಿಯೂ ಕೆಮರ ಬಲ್ಲಾಳನೂ ಒಂದೇ ಮಡಕೆಯಲ್ಲಿ ಉಂಡ ಉಂಡಾಡಿಗಳು; ಒಂದೇ ಹಟ್ಟಿಯಲ್ಲಿ ಹೋರಿದ ಹೋರಿಗಳು; ಒಂದೇ ಗರಡಿಯಲ್ಲಿ ಕಲಿತ ಕಲಿಬಂಟರು, ಚಂದುಗಿಡಿಯು ಹರೆಯದ ಜವ್ವನಿಗನಿದ್ದಾಗ ಪಂಜದ ಮುದುಕ ಬಲ್ಲಾಳನು ಸತ್ತು ಹೋದನು, ತರುವಾಯ ಕೈಮರ ಬಲ್ಲಾಳನಿಗೆ ಎಂಟು ಮಾಗಣೆಯವರು ಕೂಡಿ ಪಟ್ಟ ಕಟ್ಟಿದ್ದೆ ತಡ, ಚೆಂದುಗಿಡಿಯ ಎರಡು ತೋಳುಗಳಲ್ಲಿ ಎಂಟು ತೋಳುಗಳು ಎದ್ದಂತಾಯಿತು, ಮುಂಚಿನ ಬಲ್ಲಾಳನಿದ್ದಾಗ ಪಯ್ಯಬೈದ್ಯನು ಆತನ ಬಲಗೈಯಂತಿದ್ದು, ಬೀಡಿಗೆ ಬೇಕಾದವನಾಗಿದ್ದನು. ಚಂದುಗಿಡಿಗೆ ಮೀಸೆಮೂಡುವುದಕ್ಕೆ ಮುಂಚಿನಿಂದ ಆತನ ಕಣ್ಣು ಪಯ್ಯಬೈದ್ಯನ ಮಣೆಯ ಮೇಲೆ ಇತ್ತು. ಕೇಮರನು ಸೀಮೆಯ ಬಲ್ಲಾಳನಾಗಿ ಎರಡು ಮಳೆಗಾಲಗಳು ಕಳೆಯುವುದರೊಳಗೆ ಚೆಂದುಗಿಡಿಯು ಬೈದ್ಯನ ಮೇಲೆ ಇಲ್ಲದ ಸಲ್ಲದ ದೂರುಗಳನ್ನು ಹೊರಿಸಿ ಅವನನ್ನು ಬೀಡಿನಿಂದ ಹೊರಡಿಸಿ, ಅವನಿದ್ದ ಸ್ಥಳದಲ್ಲಿ ತನ್ನ ಚಾಪೆಯನ್ನು ಬಿಡಿಸಿ, ಕಾಲುನೀಡಿ ಕುಳಿತುಕೊಂಡನು. ಬೈದ್ಯನು ಬೀಡಿನಿಂದ ದೂರವಾದರೂ, ಆತನು ತನ್ನ ತಂದೆಯು ನೆಟ್ಟಿದ್ದ ಬಲ್ಬಂಟನೆಂಬ ಅಭಿಮಾನವು ಕೇಮರಬಲ್ಲಾಳನ ಮನಸ್ಸಿನಿಂದ ತೀರಾ ಮಾಸಿಹೋಗಲಿಲ್ಲ. ಈ ಅಭಿಪ್ರಾಯವನ್ನು ಬಲ್ಲಾಳನ ಮನಸ್ಸಿನಿಂದ ಹೇಗಾದರೂ ಕಿತ್ತು ಬಿಟ್ಟು ಇಬ್ಬರೊಳಗೆ ಪರಸ್ಪರ ವೈರವನ್ನು ತಂದು ಹೂಡಬೇಕೆಂದು ಚೆಂದುಗಿಡಿಯು ಸಮಯವನ್ನು ಸಾಧಿಸುತ್ತಿದ್ದನು. ಹೀಗೆ ಸಾಧಿಸುವುದಕ್ಕೂ ಕೋಟಿ ಚೆನ್ನಯರು ಆ ಬೈದ್ಯನ ಮನೆಯಲ್ಲಿ ಉಳುಕೊಂಡದ್ದಕ್ಕೂ ಸರಿಯಾಯಿತು.

ಕೋಟಿ ಚೆನ್ನಯರು ಹಲವು ತಿಂಗಳಿಂದ ಪಯ್ಯಬೈದ್ಯನಲ್ಲಿ ಇದ್ದದ್ದು ಚೆಂದುಗಿಡಿಗೆ ಆಗುತ್ತಿರಲಿಲ್ಲ, ಚಂದುಗಿಡಿಯು ಸ್ವಭಾವದಲ್ಲಿ ಅಂಜು