ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಂಜದ ಗಡಿಕಲ್ಲು

43

ಭೂಮಿಗೆ ಬಂದ ಜನಗಳ ಹಾಗೆ ಕಾಣುತ್ತದೆ. ಆದರೆ ತಾವು ಯಾರು ಎಂದು ತಮ್ಮೊಂದಿಗೆ ಕೇಳುವುದಕ್ಕೆ ನಾಲಗೆಯು ಹೆದರಿ ತರತರಿಸುತ್ತದೆ- ನಿಜವಾಗಿಯೂ ತಾವು ಯಾರು ಎಂದು ಅಪ್ಪಣೆಯಾಗಲಿ” ಎಂದು ಕೈಮುಗಿದು ಕೇಳಿದನು.

ಚೆನ್ನಯನು ಕತ್ತಿಯ ಹಿಡಿಗೆ ಕೈಹಾಕಿದನು. ಕೋಟಿಯು ಆಯ್ಯಾ ಕಳ್ಳು ಕುಡಿದು ಮೈ ಹಾಳು ಮಾಡಬಾರದು; ಸುಳ್ಳು ನುಡಿದು ಬಾಯಿ ಹೊಲಸು ಮಾಡಬಾರದು. ನಾವು ಅವಳಿಜವಳಿ, ನಾನು ಕೋಟಿ-- ಅಣ್ಣ. ಇವನು ಚೆನ್ನಯ-ತಮ್ಮ” ಎಂದು ಗಂಭೀರತೆಯಿಂದ ಹೇಳಿದನು.

ತಕ್ಷಣವೇ ಆ ಐವರು ಹಿಂದಕ್ಕೆ ಸರಿದು, ಬಾಯಲ್ಲಿ ಮಾತಿಲ್ಲದವರಾಗಿ, ಅಲ್ಲಿಯೇ ಕೈ ಕಟ್ಟಿ ನಿಂತುಕೊಂಡರು. ಅನಂತರ ಕಿನ್ನಿಚೆನ್ನಯನು “ಬುದ್ದಿ, ಹುಡುಕಿದರೆ ದೊರೆಯದ ಮದ್ದು ಬಳ್ಳಿ ಕಾಲಿಗೆ ತೊಡರಿದಂತಾಯಿತು; ಕಣ್ಣಿಗೆ ಕಾಣದ ಚಿನ್ನದ ಕೊಪ್ಪರಿಗೆ ಕೈಯಲ್ಲಿ ಬಂದು ಕುಳಿತಂತಾಯಿತು; ತಮ್ಮಿಬ್ಬರನ್ನು ನೋಡಬೇಕೆಂದು ಹೊರಟಿದ್ದ ನಮಗೆ ಇಲ್ಲಿಯೇ ತಮ್ಮ ದರ್ಶನವಾಯಿತು” ಎಂದು ಬಹಳ ವಿನಯದಿಂದ ಹೇಳಿಕೊಂಡನು.

ಕೋಟಿಯು “ನೀವು ಯಾರು ಎಂದು ವಿಚಾರಿಸಿದನು.

ಉತ್ತರ-“ಬುದ್ಧಿ, ತಮಗೆ ಕೇಮರಬಲ್ಲಾಳನಲ್ಲಿ ಆದ ಮರೆಮೋಸವನ್ನು ಕೇಳಿ, ತಮ್ಮನ್ನು ಸಂಧಿ ಮಧ್ಯಸ್ಥಿಕೆಯಿಂದ ಕರೆದುಕೊಂಡು ಬರಲು ಎಣ್ಮೂರು ಬಲ್ಲಾಳನಿಂದ ಆಜ್ಞಾಪಿಸಲ್ಪಟ್ಟ ಜನಗಳು ನಾವು. ತಮ್ಮ ಸಮಾಚಾರವನ್ನು ಮೊದಲೇ ಕೇಳಿದ್ದೇವೆ.”

ಪ್ರಶ್ನೆ- “ನಮ್ಮ ಸಂಗತಿಯನ್ನು ಯಾರು ಹೇಳಿದರು ?"

ಉತ್ತರ- “ತಮ್ಮ ಸಾಕಣೆ ತಾಯಿ ಸಾಯಿನ ಬೈದಿತಿ »

ಪ್ರಶ್ನೆ - “ ಅವಳು ಪಡುಮಲೆಯಲ್ಲಿ ಇದ್ದಾಳೆ. ಅವಳಿಂದ ಗೊತ್ತಾಗಲು ಸಾಧ್ಯವಿಲ್ಲವಷ್ಟೆ!"

ಉತ್ತರ- “ಸಾಯಿನ ಬೈದಿತಿಯು ಎಣ್ಮೂರನ್ನು ಸೇರಿಕೊಂಡು ಬಹು ಕಾಲವಾಯಿತು, ಸಾಯುವ ಮುಂಚೆ ಅವಳು ನಿಮ್ಮನ್ನು ಒಂದು ಸಲ ಕಣ್ಣ ತುಂಬ ನೋಡಬೇಕೆಂದು ಹಂಬಲಿಸುತ್ತಾಳೆ, ಬುದಿ."