ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

48

ಕೋಟಿ ಚೆನ್ನಯ

ಅದಕ್ಕೆ ದೇವ ಬಲ್ಲಾಳನು ಅದು ಒಕ್ಕಲಿಲ್ಲದ ಗುತ್ತು, ಅಷ್ಟೇ ಅಲ್ಲ, ಆ ಗುತ್ತು ತನ್ನ ಸೇವೆಗೆ ಸೇರಿದ್ದೆಂದು ಪಂಜದ ಕೇಮರ ಬಲ್ಲಾಳನು ಸುಳ್ಳು ಸಾಧನೆ ಮಾಡಿ, ನಮ್ಮ ಹಳೆಯ ಗಡಿಕಲ್ಲುಗಳನ್ನು ಕಿತ್ತು ಹಾಕಿಸಿ, ಗುತ್ತಿನಲ್ಲಿ ಹೊಗೆ ಏಳುವುದಕ್ಕೆ ಬಿಡುವುದಿಲ್ಲ. ಇದು ನನಗೆ ಗೊತ್ತಿದ್ದು, ನಿಮ್ಮನ್ನು ಮೊದಲೇ ಜಗಳದ ಮಣೆಯ ಮೇಲೆ ಏತಕ್ಕೆ ಕೂರಿಸಬೇಕು?” ಎಂದು ಹೇಳಿದನು.

ಗಡಿಕಲ್ಲುಗಳನ್ನು ಕಿತ್ತ ಮಾತು ಬರುತ್ತಲೆ ಕೋಟಿ ಚೆನ್ನಯರು ಒಬ್ಬರು ಮತ್ತೊಬ್ಬರ ಮುಖವನ್ನು ನೋಡಿದರು, ಚೆನ್ನಯನು “ಬುದ್ಧಿ, ನಾವು ನಿಮ್ಮ ರಾಜ್ಯದಲ್ಲಿ ಕಾಲಿಡುವಾಗಲೇ ಆ ಜಗಳದ ಮಣೆಯನ್ನು ಮೆಟ್ಟಿ ಬಂದಿದ್ದೇವೆ, ನಾನು ಆ ಗಡಿಕಲ್ಲನ್ನು ಮುಂಚಿನ ಸ್ಥಳದಲ್ಲಿ ಹೊತ್ತು ಹಾಕಿ, ನಿಮ್ಮ ರಾಜ್ಯಕ್ಕೆ ೫೦ ಮಾರು ಜಾಗವನ್ನು ಕೂಡಿಸಿದ್ದೇನೆ, ಅಯ್ಯ ನೂರು ಗುತ್ತನ್ನು ನಮಗೆ ದಯಪಾಲಿಸಿ ಬಿಡಿ, ಜಗಳಕ್ಕೆ ಬರುವವರು ಬರಲಿ, ನಾವು ನೋಡಿಕೊಳ್ಳುತ್ತೇವೆ” ಎಂದನು.

ದೇವ ಬಲ್ಲಾಳನು “ಹಾಗಾದರೆ ಇನ್ನು ಜಗಳ ತಪ್ಪದು” ಎಂದನು.

ಕೋಟಿ “ಜಗವು ಇರುವಷ್ಟು ಕಾಲ ಜಗಳವು ಇದೆ, ಬುದ್ಧಿ” ಎಂದನು.

ದೇವ ಬಲ್ಲಾಳನು “ಆ ಗುತ್ತು ನಿಮಗೆ ಮೆಚ್ಚಿಗೆಯಾಗಿದ್ದರೆ ನನ್ನ ಅಡ್ಡಿ ಇಲ್ಲ, ಅದನ್ನು ನೀನು ಸಹಸ್ರ ಕಾಲಾವಧಿ ಅನುಭವಿಸಿಕೊಂಡು ಬಂದು, ಬೀಡಿನ ಮರ್ಯಾದೆಯನ್ನು ಕಾಪಾಡುವಂಥವರಾಗಬೇಕು” ಎಂದು ಹೇಳಿ, ಕೈವೀಳ್ಯವನ್ನು ಕೊಟ್ಟನು,

ಅದನ್ನು ಸ್ವೀಕರಿಸಿ ಕೋಟಿ ಚೆನ್ನಯರು ಎಣ್ಮೂರು ಬಲ್ಲಾಳನ ವಶವರ್ತಿಯಾಗಿದ್ದು, ಅಯ್ಯನೂರು ಗುತ್ತನ್ನು ಮಾಡಿಕೊಂಡು ಸುಖವಾಗಿದ್ದರು,

ಕೋಟಿ ಚೆನ್ನಯರನ್ನು ಹಿಡಿಯಲಿಕ್ಕೆ ಚೆಂದುಗಿಡಿಯೂ ಕೇಮರನೂ ಮಾಡಿದ ಮೋಸ, ಅವರು ಸೆರೆಯಿಂದ ತಪ್ಪಿಸಿಕೊಳ್ಳಲು ಮಾಡಿದ ಉಪಾಯ, ಅವರನ್ನು ಎಣ್ಮೂರಲ್ಲಿ ಕಂಡ ಸಂಗತಿ, ಅಲ್ಲಿ ಅವರಿಗೆ ದೊರೆತ ಆಶ್ರಯ, ಆವರ ಸಹಾಯದಿಂದ ಎಣ್ಮೂರು ಬಲ್ಲಾಳನು ತನ್ನ ರಾಜ್ಯ ವಿಸ್ತಾರಕ್ಕಾಗಿ ಮಾಡುವ ಹಂಚಿಕೆ- ಇವುಗಳ ಸುದ್ದಿಯು ಪಂಜ ಸೀಮೆಯಲ್ಲಿಯೂ