ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚಾಡಿಯ ಬಾಯಿ

49

ಪಡುಮಲೆ ಸೀಮೆಯಲ್ಲಿ ಹಬ್ಬುವುದಕ್ಕೆ ಬಹು ಕಾಲ ಹೋಗಲಿಲ್ಲ. ಒಬ್ಬ ಬಲ್ಲಾಳನು ಸಿಟ್ಟಿನಿಂದ ತನ್ನ ಊರಲ್ಲಿದ್ದ ಕಿನ್ನಿದಾರುವನ್ನೂ ಅವಳ ಗಂಡನನ್ನೂ ಬಹಳವಾಗಿ ಕಾಡಿದನು; ಇನ್ನೊಬ್ಬ ಬಲ್ಲಾಳನು ತನ್ನ ಬೀಡಿನಲ್ಲಿದ್ದ ಮುದುಕ ಸಾಯಿನ ಬೈದ್ಯನನ್ನು ಉಪದ್ರವಿಸಿದನು. ಇಬ್ಬರ ಕೋಪವು ಇಷ್ಟರಲ್ಲೇ ಮುಗಿಯಲಿಲ್ಲ. ಅವರು ಕೋಟಿಚೆನ್ನಯರನ್ನು ಕಂಡಲ್ಲಿ ಹಿಡಿದು ಕಡಿದು ಹಾಕ ಬೇಕೆಂಬದಾಗಿ ಅಪ್ಪಣೆ ಕೊಟ್ಟು, ಆಗಾಗ ತಮ್ಮ ಕಡೆಯ ಜನಗಳನ್ನು ಎಣ್ಮೂರಿಗೆ ಗುಟ್ಟಿನಿಂದ ಕಳುಹಿಸಿದರು; ವಿಷದ ಹಾಲಿನಿಂದ ಅವರನ್ನು ಕೊಲ್ಲಬೇಕೆಂದು ಗೊಲ್ಲರ ಮೂಲಕವಾಗಿ ದುರಾಲೋಚನೆ ನಡಿಸಿದರು; ಅವರ ಬಿತ್ತವುಳಿಯದಂತೆ ಮಾಡಬೇಕೆಂದು ಕಣಿಯರಿಂದ ಬಗೆಬಗೆಯ ಮದ್ದು ಮಾಟಗಳನ್ನು ಮಾಡಿಸಿದರು, ಏನು ಮಾಡಿದರೂ ಕೋಟಿಚೆನ್ನಯರ ತಲೆಕೂದಲು ಉದುರಲಿಲ್ಲ.

ಜೋಡಿ ಹುಲಿಗಳ ಬಾಯಿಂದ ತಪ್ಪಿಸಿಕೊಂಡು ಸುರಕ್ಷಿತವಾದ ಹಸುರು ಹುಲ್ಲುಗಾವಲಿಗೆ ಹೋಗಿ, ಕುಣಿದು ಮೇಯುವ ಹುಲ್ಲೆಯ ಮರಿಗಳನ್ನು ಕಂಡು ಆರ್ಭಟಿಸುವ ದುಷ್ಟ ವ್ಯಾಘ್ರಗಳಂತೆ ಆ ಇಬ್ಬರು ಬಲ್ಲಾಳರು ಚೆನ್ನಕೋಟಿಯರನ್ನು ಹುಟ್ಟಡಗಿಸಬೇಕೆಂದು ಮನಸ್ಸಿನಲ್ಲಿ ದೃಢಮಾಡಿಕೊಂಡರು, ಈ ಮಧ್ಯದಲ್ಲಿ ಚೆನ್ನಯನು ಗಡಿಕಲ್ಲುಗಳನ್ನು ಒಂದು ಕಡೆಯಿಂದ ಕಿತ್ತು ಇನ್ನೊಂದು ಕಡೆಯಲ್ಲಿ ನೆಟ್ಟಿದ್ದು, ಆಯ್ಯನೂರು ಗುತ್ತನ್ನು ವಿಸ್ತರಿಸಿದ್ದು, ಅವರಿಬ್ಬರು ಪಂಜಸೀಮೆಗೆ ಸೇರಿದ್ದ ಬಂಟಮಲೆಯಲ್ಲಿ ಹೇಳದೆ ಕೇಳದೆ ಆಗಾಗ ಬೇಟೆಯಾಡಿದ್ದು, ಸರ್ವರ ಹೃದಯದಲ್ಲಿ ಅವರಿಂದ ಒಂದು ಬಗೆಯ ಭೀತಿ ಹುಟ್ಟಿದ್ದು - ಇವುಗಳ ಸಮಾಚಾರವನ್ನು ಕೇಳಿ, ಪಡುಮಲೆಯ ಪೆರುಮಾಳನೂ ಪಂಜದ ಕೇಮರನೂ ಅವರನ್ನು ನೆಲಸಮಮಾಡುವ ಆಲೋಚನೆಯಿಂದ ಜನಗಳನ್ನು ಕೂಡಿಸುತ್ತ, ಮುಸ್ತೈದೆಯನ್ನು ಒದಗಿಸುತ್ತ, ತಕ್ಕ ವೇಳೆಯನ್ನು ಎದುರು ನೋಡುತ್ತ ಇದ್ದರು,

ಬೇಡುವ ಬಡವನು ಕೊಡುಗೈಯಾಗಿರುವ ದೊರೆಗೆ ಬೇಕಾದವನಾಗುತ್ತಲೇ ಚಾಡಿಯ ಬಾಯಿ ತುರಿಸಹತ್ತುತ್ತದೆ, ಕೋಟಿಚೆನ್ನಯರು ಎಣ್ಮೂರು ಬಲ್ಲಾಳನ ಪ್ರೀತಿಗೆ ಪಾತ್ರರಾಗಿ ಅವನ ಬೀಡಿನಲ್ಲಿ ಪ್ರಬಲರಾದುದನ್ನು ಕಂಡು