ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

50

ಕೋಟಿ ಚೆನ್ನಯ

ಚಾಡಿಗಾರರು ಬಲ್ಲಾಳನನ್ನು ಅವರ ಮೇಲೆ ತಿರುಗಿಸುವುದಕ್ಕೆ ತೊಡಗಿದರು. ಅರಸರ ಕಿವಿಗೆ ತರಲೆ ಹಾಳು, ಬಾಗಿಲ ಕಿವಿಗೆ ಒರಲೆ ಹಾಳು' ಎಂಬ ಗಾದೆಗೆ ಸರಿಯಾಗಿ, ಬಲ್ಲಾಳನು ಆ ಚಾಡಿಗಾರರ ಮಾತಿಗೆ ಕಿವಿಗೊಡ ಹತ್ತಿದನು. ಅವನು ಕಿವಿಗೊಡುವಷ್ಟಕ್ಕೆ ಚಾಡಿ ಹೆಚ್ಚುತ್ತ ಹೋಯಿತು,

ಈ ಚಾಡಿಗಾರರಲ್ಲಿ ಒಬ್ಬನು ಒಂದು ದಿನ ಬಲ್ಲಾಳನ ಹತ್ತಿರ ಯಾರೂ ಇಲ್ಲದ್ದನ್ನು ಕಂಡು, ಬುದ್ದಿ! ಮನೆಯಲ್ಲಿ ಬೇಸರವೆಂದು ಇಲ್ಲಿ ಬಂದೆ- ಇಲ್ಲಿಯೂ ನಮ್ಮ ಹೊಸ ಬಂಟರು ಹೇಳುವಂತೆ ಬೇಸರಿಕೆ” ಎಂದನು.

ಆಗ ಎಣ್ಯರು ಬಲ್ಲಾಳನು ಕಿವಿಗಳನ್ನು ಚೆನ್ನಾಗಿ ತೆರೆದು, “ಹೊಸ ಬಂಟರು ಏನೆನ್ನುತ್ತಾರೆ?” ಎಂದು ಕೇಳಿದನು.

“ನಮ್ಮ ಸೇವೆಗೆ ಹೊಸಬರಾದವರಿಗೆ ಇಲ್ಲಿ ಬೇಸರವಾಗುವುದೇನೋ ಸಹಜ” ಎಂದು ಚಾಡಿಗಾರನು ಮೇಲಿನ ಮೇಲೆ ಹೇಳಿದನು.

“ನೀನು ಅಳುಕಬೇಡ. ಎಲ್ಲವನ್ನೂ ಬಿಚ್ಚಿ ಹೇಳು” ಎಂದು ಬಲ್ಲಾಳನು ಹುಬ್ಬೆತ್ತಿ ಕೇಳಿದನು.

ಚಾಡಿಗಾರ-“ ಬುದ್ದಿ, ಇದು ಬಡ ರಾಜ್ಯವಂತೆ, ನೀವು ಬಡ ಬಲ್ಲಾಳರಂತೆ. ಹೀಗೆ ಕಲೆ ಹೇಳಿ ಹೊಸ ಬಂಟರು ಕುಲ ದೂಷಿಸುತ್ತಾರೆ, ಬುದ್ದಿ.”

ಬಲ್ಲಾಳನು ಇನ್ನು ಹೆಚ್ಚು ಕೇಳುವುದಕ್ಕೆ ಮನಸ್ಸಿಲ್ಲದೆ ಕೋಟಿ ಚೆನ್ನಯರನ್ನು ಕರೆತರಿಸಿ, ಚಾಡಿಗಾರನ ಇದಿರಿನಲ್ಲಿ ಅವರನ್ನು ವಿಚಾರಿಸಿದನು.

ಆಗ ಚೆನ್ನಯನು ಕೈಮುಗಿದು, “ಬುದ್ಧಿ! ಇದು ಯಾವುದೂ ನನ್ನ ಅಣ್ಣನಿಗೆ ಗೊತ್ತಿಲ್ಲ. ಮಾತಾಡಿದ್ದು ನಾನು. ನಾನು ನಿಮ್ಮ ಕುಲವನ್ನು ದೂಷಿಸಿಲ್ಲವೆಂದು ಖಂಡಿತವಾಗಿ ಹೇಳುವೆನು. ನನ್ನ ಮಾತುಗಳನ್ನು ನಾನೇ ಹೇಳಿಬಿಡುತ್ತೇನೆ, ಬುದ್ಧಿ! ಮೊನ್ನೆ ಸಂಕಲೆ ಕಡಿದು ಜನಗಳನ್ನು ಹರಹುತಿದ್ದ ಅರಮನೆಯ ಸೊಕ್ಕಾನೆಯನ್ನು ನಾವಿಬ್ಬರು ಹಿಡಿದು ತಂದು, ಲಾಯದಲ್ಲಿ ಕಟ್ಟಿದೆವಷ್ಟೆ. ಆ ದಿನ ನಮಗೆ ಹಿಡಿಯಲಾರದಷ್ಟು ಸಂತೋಷವಾಯಿತು. ಇಂಥ ಸಾಹಸವಿದ್ದರೆ ಉಂಡ ಅನ್ನ ನಮಗೆ ಅರಗುತ್ತದೆ. ನಾವು ಈ ರಾಜ್ಯಕ್ಕೆ ಬಂದು ಎರಡು ಮೂರು ವರುಷಗಳಾದರೂ, ಬಡವರಾದ ನಮ್ಮಿಂದ ಯಾವ ತರದ ಪೌರುಷವೂ ಬೀಡಿಗೆ