ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬೇಟೆ

51

ಆಗಲಿಲ್ಲ, ಹಂದಿಯ ನವಿರು, ಹುಲಿಯ ಉಗುರು, ಆನೆಯ ದಂತ ಇವನ್ನು ತಂದು ಕಾಣಿಕೆ ಕೊಡೋಣ ಎಂದರೆ ತುಪ್ಪೆ ಕಲ್ಲಿನ ಕಾಡಿನಲ್ಲಿ ಕಾಲಿಡಲು ನನಗೆ ಅಪ್ಪಣೆ ಇಲ್ಲ; ಕೊಳುಗುಳಕ್ಕೆ ಹೋಗಿ ಹಗೆಗಳನ್ನು ಚೆಂಡಾಡಿ ಅವರ ತಲೆಗಳನ್ನು ನಿಮ್ಮ ಪಾದಕ್ಕೆ ಒಪ್ಪಿಸೋಣ ಎಂದರೆ ನಮಗೆ ರಣವೀಳ್ಯವನ್ನು ಕೊಟ್ಟಿಲ್ಲ. ಹೀಗೆ ನಮಗೆ ಉಂಡ ಉಣಿಸು ಕುತ್ತವಾಗಿದೆ, ಕುಡಿದ ನೀರು ಪಿತ್ತವಾಗಿದೆ. ಉಟ್ಟ ಬಟ್ಟೆ ಕೊಳೆಯಲಿಲ್ಲ, ಹಿಡಿದ ಕತ್ತಿ ಮಾಸಲಿಲ್ಲ. ಈ ಮಾತು ದೂಷಣೆಯಾದರೆ ಈ ಕತ್ತಿ ಇದೆ, ನನ್ನ ಕೊರಳೂ ಇದೆ ” ಎಂದು ಹೇಳಿ ಬಲ್ಲಾಳನ ಮುಂದುಗಡೆ ಕತ್ತನ್ನು ಬಾಗಿಸಿ ನಿಂತನು.

ದೇವ ಬಲ್ಲಾಳನು ಚೆನ್ನಯನ ವಚನಗಳನ್ನು ಕೇಳಿ ತಟಸ್ಥನಾಗಿ “ಹೌದು ಬಂಟರೇ, ನಮ್ಮ ರಾಜ್ಯದಲ್ಲಿ ಬೇಟೆಗೀಟಿ, ಆಯನ ಆರಾಟ ಇರಬೇಕು, ಇವುಗಳ ಮೂಲಕ ಜನಗಳಲ್ಲಿ ಮೈಬಲವು ಬರುತ್ತದೆ; ಸಂಘಶಕ್ತಿಯು ಒಳೆಯುತ್ತದೆ. ಆದರೆ ತುಪ್ಪೆ ಕಲ್ಲು ಕಾಡಿನಲ್ಲಿ ಬೇಟೆಯಾಡಿದರೆ ನಾವು ನಂಬದವರನ್ನು ಕೊಳುಗುಳಕ್ಕೆ ಕೂಗಿ ಕರೆದಂತಾಗುವುದು. ಅದಕ್ಕಾಗಿಯೇ ಹಿಂದೆ ಸರಿಯುತ್ತೇವೆ, ಬಂಟರೇ” ಎಂದನು.

ಆಗ ಚೆನ್ನಯನು “ಬುದ್ಧಿ, ಕಾಡು ಮೃಗಗಳ ಬಾಧೆಯಿಂದ ಜನಗಳನ್ನು ತಪ್ಪಿಸುವುದು ನಮ್ಮ ಕಾರ್ಯ. ಆ ಕಾರ್ಯಸಾಧನೆಯಲ್ಲಿ ಯಾವ ತೊಂದರೆ ಬಂದರೂ ಹಿಮ್ಮೆಟ್ಟಲಾಗದು” ಎಂದನು.

“ಹಾಗಾದರೆ ತುಪ್ಪೆ ಕಲ್ಲಡವಿಯ ಬೇಟಿ ಆಗಲಿ ಎಂದು ಬಲ್ಲಾಳನು ಅಪ್ಪಣೆ ಕೊಡಿಸಿ, “ಚೆನ್ನಯ, ಈ ಚಾಡಿಗೆ ಚಾಡಿಗಾರನನ್ನು ಏನು ಮಾಡಬೇಕು? ಇವನಿಗೆ ತಕ್ಕ ಶಿಕ್ಷೆಯಾವುದು?” ಎಂದು ಕೇಳಿದನು.

ಆಗ ಚೆನ್ನಯನು “ಬುದ್ಧಿ ಅವನಲ್ಲಿ ನನ್ನ ಕತ್ತಿ ನನೆಯುವಷ್ಟು ರಕ್ತವಿಲ್ಲ, ಕೊಕ್ಕಿ ತಿನ್ನುವಷ್ಟು ಮಾಂಸವಿಲ್ಲ, ಅವನನ್ನು ಬಿಟ್ಟುಬಿಡಿ” ಎಂದನು.

ಮೇಲಿನ ಸಂಭಾಷಣೆಯಾದ ಕೆಲವು ದಿನಗಳಲ್ಲಿಯೇ ಓಲೆಗಳನ್ನು ಬರಿಸಿ: ಬೇಟೆಗೆ ಬೇಕಾದ ಸನ್ನಾಹಕ್ಕಾಗಿ ಕಡಲ ಬಳಿಯ ಬೊಕ್ಕಪಟ್ಟಣದಿಂದ ಬಗೆಬಗೆಯ ಬಲೆಗಳನ್ನು ತರಿಸಿದ್ದಾಯಿತು; ಗಟ್ಟದ ಮೇಲಿಂದ

4*