ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

54

ಕೋಟಿ ಚೆನ್ನಯ

ಗಾಯಗಳಿಂದ ಜರ್ಜರಿತವಾಗಿ ಹೋದ ಚೆನ್ನಯನು ಎದ್ದು ನಿಂತು, ಅಣ್ಣಾ! ಏನು ನೋಡುತ್ತಿರಿ? ಈಗ ಈ ಹಂದಿಗೆ ಗೆಲವು ಹೇಳುತ್ತೀರೋ? ಇಲ್ಲವೆ ಪಂಜದ ಮುನ್ನೂರು ಅಳಿಗೆ ಇದಿರಾಗುತ್ತೀರೋ?” ಎಂದು ಕೇಳಿದನು,

ಕೋಟಿಯು “ಚೆನ್ನಯ, ನೀನು ಮುಂದರಿಸಬೇಡ. ನಾನು ಇನ್ನೊಮ್ಮೆ ಒಡಂಬಡಿಸುತ್ತೇನೆ. ನಾವು ಕೊಂದ ಹಂದಿ ನಮ್ಮದಲ್ಲವೇ? ಎಂದು ಪಂಜದವರ ಹತ್ತಿರ ಮಾತಾಡುವುದಕ್ಕೆ ಪ್ರಾರಂಭಿಸಿದನು.

ಅಷ್ಟರಲ್ಲಿ ಪಂಜದವರು ಬೀಳುಹಾಕಿ ಹಂದಿಯನ್ನು ಎಳೆದು ಕೊಂಡುಹೋಗಲು ಸಿದ್ದವಾಗಿದ್ದುದನ್ನು ಕಂಡು ಚೆನ್ನಯನು ತನ್ನ ನಡುವಿಗಿದ್ದ ಬೆಳ್ಳಿಯ ಜೋಡು ಉಡುದಾರವನ್ನು ಈಚೆಗೆ ತೆಗೆದು, ಹಂದಿಯ ಎರಡು ದಾಡೆಗಳಲ್ಲಿ ಸಿಕ್ಕಿಸಿ, ಅದನ್ನು ಒಬ್ಬನೇ ಹಿಂದಕ್ಕೆ ಸೆಳೆದು, ಪಂಜಕ್ಕೂ ಎಣ್ಮೂರಿಗೂ ನಡುವೆ ಇರುವ ಮಂಜಳಪಾದೆ ಎಂಬ ಸ್ಥಳದಲ್ಲಿ ಸರಸರನೆ ಒಯ್ದು ತಂದನು. ಇಕ್ಕಡೆಯವರಿಗೆ ಹೊಯ್ ಕಯ್ ಆಯಿತು, ಕೋಟಿಚೆನ್ನಯರು ಆ ಮುನ್ನೂರು ಆಳುಗಳಲ್ಲಿ ಹಲವರನ್ನು ಸುಗ್ಗಿ ಬೆಳೆಯ ಹುಲ್ಲು ಸಡಿಗಳನ್ನು ಮಗುಚುವಂತೆ ಅಡ್ಡ ಹಾಕಿದರು. ಅಳಿದುಳಿದವರು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು, ಬೆನ್ನಿಗೆ ಕಾಲುಕೊಟ್ಟರು.

ತರುವಾಯ ಹಂದಿಯನ್ನು ಸೀಳಿದ್ದಾಯಿತು; ಎಣ್ಮೂರು ಬಲ್ಲಾಳನ ಅಪ್ಪಣೆ ಪ್ರಕಾರ ಎಲ್ಲರಿಗೂ ಮಾಂಸವನ್ನು ಹಂಚಿದ್ದಾಯಿತು; ಕೋಟಿ ಚೆನ್ನಯರು ಬೇಟೆಯ ಆಯಾಸವನ್ನು ಎಣ್ಣೆಯ ಸ್ಥಾನದಿಂದ ಕಳೆದದ್ದಾಯಿತು, ಒಂದು ವಾರದೊಳಗೆ ಅವರ ಮೈ ಗಾಯಗಳೆಲ್ಲ ವಾಸಿಯಾಗಿ ಅವರ ಭುಜಗಳು ಮತ್ತೆ ಕುದುರುವುದಕ್ಕೆ ಹತ್ತಿದುವು.

ಇತ್ಯ ಎಣೂರಿನ ಮೇಲೆ ದಂಡೆತ್ತಿ ಹೋಗಬೇಕೆಂದು ಹವಣಿಸುತ್ತಿದ್ದ ಪೆರುಮಾಳು ಬಲ್ಲಾಳನಿಗೂ ಚೆಂದುಗಿಡಿಗೂ ಈ ಬೇಟೆಯಿಂದ ಒಂದು ನೆಪವು ದೊರೆಯಿತು, ಪೆರುಮಾಳನು ಎಣ್ಮೂರನ್ನು ಕಾವೇರಿ ಸಂಕ್ರಮಣದೊಳಗೆನೇ ಪುಡಿಪುಡಿ ಮಾಡಬೇಕೆಂದು ಇದ್ದನು. ಆದರೆ ಪಂಜದಲ್ಲಿ ಕೊಳುಗುಳಕ್ಕೆ ಬೇಕಾದ ಸಾಮಗ್ರಿಗಳು ಒದಗದೆ ಇದ್ದುದರಿಂದಲೋ ಅಥವಾ ಕೇಮರಬಲ್ಲಾಳನ ಬುದ್ದಿಯು ಕೆಸರುಗದ್ದೆಯ ಗೂಟದಂತೆ ಇದ್ದುದರಿಂದಲೋ ಅಥವಾ ಇನ್ನು ಯಾವ ಕಾರಣದಿಂದಲೋ ತುಲಾ ಸಂಕ್ರಾಂತಿಯು