ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

56

ಕೋಟಿ ಚೆನ್ನಯ

ಕೊಳುಗುಳಕ್ಕೆ ಜನಗಳನ್ನು ಕೂಡಿಕೊಂಡು ಬರತಕ್ಕದ್ದು, ಹಾಗೆ ಕಾಳಗಕ್ಕೆ ಬರಲು ಆಗದಿದ್ದರೆ, ಬಲ್ಲಾಳರಾದ ನೀವು ಸೀರೆಯುಟ್ಟು, ರವಕೆ ತೊಟ್ಟು ಬೀಡಿನ ಚಾವಡಿಯಲ್ಲಿ ತಲೆಬಾಗಿ ನಿಂತುಕೊಂಡಿದ್ದಲ್ಲಿ ಬಿಲ್ಲಾಳರಾದ ನಾವು ದಿಬ್ಬಣ ಸಮೇತ ಹಣ್ಣು ಕೇಳಲು ಬರುವಂಥವರಿದ್ದೇವೆ.

ಹೀಗೆ ಸೇನಬೋವನು ಓದಿದ ಪತ್ರವನ್ನು ಕೇಳಿ ದೇವಬಲ್ಲಾಳನ ಬಾಯಿ ನೀರು ಆರಿಹೋಯಿತು. ಎರಡು ನಿಮಿಷಗಳವರೆಗೆ ಓಲಗದಲ್ಲಿ ಸದ್ದುಗಲಗು ಇಲ್ಲದೆ ಮೌನವು ಕವಿಯಿತು.

“ಕಿನ್ನಿ ಚೆನ್ನಯ, ಓಲೆಯ ಒಕ್ಕಣೆ ಕಿವಿಯಲ್ಲಿ ಹೋಯಿತಷ್ಟೆ. ಇದಕ್ಕೆ ಏನು ಹೇಳುತ್ತೀ? ” ಎಂದು ದೇವಬಲ್ಲಾಳನು ಕಿನ್ನಿಚೆನ್ನಯನ ಕಡೆಗೆ ಮೋರೆ ತಿರುಗಿಸಿ, “ ಈ ಕೋಟಿಚೆನ್ನಯರ ಸಂಗತಿಯು ಬಿಸಿಹಾಲಿನ ಗುಟುಕಿನಂತೆ ಒಳಗೆ ತೆಗೆದುಕೊಳ್ಳಲಿಕ್ಕೂ ಇಲ್ಲ, ಹೊರಗೆ ಉಗುಳಲಿಕ್ಕೂ ಇಲ್ಲ ಎಂಬಂತಾ ಗಿದೆ. ಏನು ಮಾಡೋಣ? ಎಂದು ಕೇಳಿದನು.

ಕಿನ್ನಿ ಚೆನ್ನಯನು ಎದ್ದು “ಬುದ್ದಿ,” ಎಂದು ದೈನ್ಯದಿಂದ ನುಡಿದು, ಸುಮ್ಮನಾದನು.

ಆಗ ಕೋಟಿಯು “ಬುದ್ದಿ, ಬೀಡಿನವರನ್ನು ಹುರಿಗೊಳಿಸತಕ್ಕ ತಾವೇ ಹೀಗೆ ಕಳವಳಿಸಿದರೆ ಮಾಡುವುದೇನು? ಬೆಂಕಿಗೆ ಚಳಿ ಹಿಡಿದರೆ, ನೀರಿಗೆ ಬಾಯಿ ಆರಿದರೆ, ಗಾಳಿಗೆ ಮೈ ಬೆವರಿದರೆ ನಿವಾರಿಸ ತಕ್ಕವರು ಯಾರು? ಇಂಥ ಪ್ರಸಂಗದಲ್ಲಿ ತಮ್ಮಂಥವರು ವಿವೇಚನೆಯಿಂದ ವರ್ತಿಸಬೇಕಾಗಿದೆ. -ಎಂದನು,

ಆಗ ಚೆನ್ನಯನು “ಬುದ್ಧಿ, ನಮ್ಮಿಂದ ತಮಗಾಗಲಿ ತಮ್ಮ ರಾಜ್ಯಕ್ಕಾಗಲಿ ಅಪಾಯವು ಬರುವಂತಿದ್ದರೆ, ನಾನು ಈಗಲೇ ಹೊರಟೆ. ನನಗೆ ಅಪ್ಪಣೆಯಾಗಲಿ” ಎಂದು ಕೈಮುಗಿದು ನಿಂತುಕೊಂಡನು.

ದೇವಬಲ್ಲಾಳನು ಆ ಬಂಟರ ದೆಸೆಯಿಂದ ತನ್ನ ರಾಜ್ಯಕ್ಕೆ ಆಪತ್ತು ಒದಗಿತೆಂದು ತನ್ನ ಮನಸ್ಸಿನಲ್ಲಿಯೇ ನೆನಸಿ, ಅದನ್ನು ಬಾಯಿಬಿಟ್ಟು ಹೇಳಲಾರದೆ, ಉಸ್ಸೆಂದು ಒಮ್ಮೆ ಉಸಿರುಬಿಟ್ಟನು,

ಅದನ್ನು ಕಂಡು ಕೋಟಿಯು- “ಬುದ್ದಿ, ತಾವು ಚಿಂತೆ ಬಿಡಬೇಕು. ಇನ್ನು ನಮಗೆ ರಣವೀಳ್ಯವನ್ನು ಕೊಟ್ಟು ಕಳುಹಿಸಿದ್ದಲ್ಲಿ