ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

58

ಕೋಟಿ ಚೆನ್ನಯ

ಪ್ರಾರಂಭವಾಗಿತ್ತು, ತುಳುನಾಡಿನ ಅತ್ಯಂತ ಪ್ರಸಿದ್ಧವಾದ ಸುಬ್ರಹ್ಮಣ್ಯ ಜಾತ್ರೆಯು ಸಮೀಪಿಸಿತು.

ಜಾತ್ರೆಗೆ ನಾಲ್ಕು ದಿವಸ ಮುಂಚಿತವಾಗಿ ಪೆರುಮಾಳು ಬಲ್ಲಾಳನು ಮಂದಿಮಾರ್ಬಲದೊಡನೆ ಪಡುಮಲೆಯಿಂದ ತೆರಳಿ, ಪೆರ್ಲಂಪಾಡಿಯ ಮಾರ್ಗವಾಗಿ ಹೋಗಿ, ಎರುಕಡಪಿನ ಹತ್ತಿರ ಬಂದು ಇಳಿದನು. ಸಂಜದ ಕೆೇಮರ ಬಲ್ಲಾಳನ ಜನಗಳು ಸಾಮಾನುಸರಂಜಾಮನ್ನು ಶೇಖರಿಸಿಕೊಂಡು ಕಡವಿನ ಆಚೆಗೆ ಇದ್ದುರು; ಕೇಮರನ ಇನ್ನೊಂದು ದಂಡು ಎಣ್ಮೂರಿನ ಸರಹದ್ದಿನ ಕಂಡಿಕಣಿವೆಗಳನ್ನು ಕಟ್ಟಿ, ರಸ್ತೆ ಮುಸ್ತೈದೆಗಳು ಎಣ್ಮೂರಿಗೆ ಹೋಗುವುದನ್ನು ನಿಲ್ಲಿಸಿಬಿಟ್ಟಿತ್ತು. ಈ ಸೈನ್ಯವು ಕಳ್ಳದಾರಿಯಾಗಿ ಬಂದು ತನ್ನ ರಾಜ್ಯದ ಗಡಿಗಳಲ್ಲಿ ಬಲಕಾಯಿಸಿ ನಿಂತಿದ್ದ ಸುದ್ದಿಯು , ಜಾತ್ರೆಯ ಮುಂಚಿನ ದಿವಸ ಎಣ್ಮೂರಿನ ದೇವಬಲ್ಲಾಳನಿಗೆ ಗೊತ್ತಾಗಿ ತನ್ನ ಕಡೆಯ ೫೦೦ ಮಂದಿಯನ್ನು ಎಣ್ಮೂರು ದೇವಸ್ಥಾನದ ಮುಂದುಗಡೆಯ ಬೈಲಿನಲ್ಲಿ ನಿಲ್ಲಿಸಿ, ಜಗಳವಾಡುವುದಕ್ಕೆ ಸಿದ್ದವಾಗಿದ್ದನು,

ಯುದ್ಧದ ಸಿದ್ಧತೆಯನ್ನು ಕಂಡು ಕೇಳಿದಸೀಮೆಯವರು ತಮ್ಮ ಬದುಕುಬಾಳನ್ನೂ ದನಕರುವನ್ನೂ ದೂರಕ್ಕೆ ಸಾಗಿಸಲು ಪ್ರಯತ್ನಿಸಿದರು; ಚಿನ್ನ ಬೆಳ್ಳಿ ಇದ್ದವರು ಅದನ್ನು ನೆಲಮರೆ ಮಾಡಿಕೊಂಡು ತಮ್ಮ ಮನೆಗಳನ್ನು ಕಾದುಕೊಂಡಿದ್ದರು; ಮರ್ದಾಳ ಸೀಮೆಯ ರೈತರು ಲೂಟಿಯ ಭಯದಿಂದ ತಮ್ಮ ಹೆಂಡತಿಮಕ್ಕಳು ಆದಿಯಾಗಿ ಸರ್ವಸ್ವವನ್ನು ಕೊಕ್ಕಡದ ಮಾರ್ಗವಾಗಿ ಸಾಗಿಸಿಬಿಟ್ಟರು.

ಮಾರ್ಗಶಿರ ಶುದ್ಧ ಷಷ್ಟಿಯ ದಿನ ಸೂರ್ಯೋದಯಕ್ಕೆ ಸರಿಯಾಗಿ ದೇವಬಲ್ಲಾಳನು ಕೋಟಿಚೆನ್ನಯರಿಗೆ ತೊಡವುತಾಂಬೂಲಗಳನ್ನು ಕೊಟ್ಟು, ತನ್ನ ಸೈನ್ಯಕ್ಕೆ ಅವರನ್ನು ಮುಖಂಡರನ್ನಾಗಿ ಮಾಡಿ, ಅವರ ಆಜ್ಞಾನುಸಾರವಾಗಿ ನಡೆಯುವುದಕ್ಕೆ ಅನುವಾದನು, ಕೋಟಿಚೆನ್ನಯರು ಸೈನ್ಯದ ಜನದಲ್ಲಿ ಬೀಡಿನ ಪಹರೆಗೂ, ಎಣೂರಿನ ಚೌಸುತ್ತಿನ ಕಾವಲಿಗೂ, ಬಲ್ಲಾಳನ ಚಾಕರಿಗೂ ಬೇಕಾದಷ್ಟು ಮಂದಿಯನ್ನು ವಿಂಗಡಿಸಿ, ಉಳಿದ ಅರೆವಾಸಿ ಮಂದಿಯನ್ನು ತಮ್ಮ ಸಂಗಡ ಕೂಡಿಕೊಂಡು,ಎಣ್ಮೂರು ದೇವಸ್ಥಾನದ ದಾರಿಯನ್ನು ಹಿಡಿದರು.