ಕೊನರು . ಕೈಮುಗಿದುಕೊಂಡು ನಿಮೀಲಿತನಯನೆಯಾಗಿ ಕಾತರವಚನಗಳಿಂದ ಭಗವಂತ ನಲ್ಲಿ ತನ್ನ ಅಭೀಷ್ಟವನ್ನು ಬೇಡಿಕೊಳ್ಳುತಿದ್ದಳು. ಅವಳಿದ್ದೆಡೆಗೆ ಸ್ವಲ್ಪ ದೂರ ಶುಕ್ಷದಶಮಿಯ ಅಪೂರ್ಣ ಕಳೆಗಳುಳ್ಳ ಬಾಲಶಶಿಯಹಾಗೆ ಹತ್ತು ವರ್ಷದ ಬಾಲೆ ಯೊಬ್ಬಳು ಹೂವಿನ ಗೊಂಚಲ ಭಾರದಿರದ ಬಗ್ಗಿದ ಕಿಂಶುಕವೃಕ್ಷದ ಕೆಳಗೆ ನಿಂತು ತಲೆಯೆತ್ತಿಕೊಂಡು ಮೇಲೆ ನೋಡುತಿದ್ದಳು. ಈ ಸಮಯದಲ್ಲಿ ಹನ್ನೆರಡು ವರ್ಷದ ಹುಡುಗನೊಬ್ಬನು ಬಂದು ಕೆರೆಯ ನೀರಿನ ಅಂಚಿನಲ್ಲಿ ನಿಂತುಕೊಂಡನು. ಅವನ ಮೈಯೆಲ್ಲಾ ರಕ್ತಮಯವಾಗಿ ದ್ವಿತು. ಸೊಂಟದಲ್ಲಿ ಒರೆಕೂರಿಸಿದ ಕತ್ತಿ. ಎರಡು ಕೈಗಳಲ್ಲಿಯೂ ಎರಡು ಹಕ್ಕಿಗಳು, ಹುಡುಗನು ಮೈಯಲ್ಲಿದ್ದ ರಕ್ತವನ್ನು ತೊಳೆದುಕೊಳ್ಳಲು ಸೋಪಾ ನದ ಮೆಟ್ಟಿಲುಮೇಲೆ ಬಂದು ನಿಂತನು. ಆದರೆ ಕೈಯಲ್ಲಿದ್ದ ಹಕ್ಕಿಗಳನ್ನು ಯಾರ ವಶ ಕೊಟ್ಟು ಹೋಗಬೇಕು ? ಕೈಬಿಟ್ಟರೆ ಅಡವಿಯ ಹಕ್ಕಿಗಳು ಅಡವಿ ಯನ್ನು ಸೇರುವುವು ! ಹುಡುಗನು ಕಿಂಶುಕವೃಕ್ಷದ ಕೆಳಗೆ ನಿಂತಿದ್ದ ಹುಡುಗಿ ಯನ್ನು ಕಂಡು ಅವಳ ಬಳಿಗೆ ಹೋಗಿ, " ನೀನಾರು ? ಒಬ್ಬಳೇ ನಿಂತುಕೊಂಡು ನೋಡುವದೇನು ? ೨೨ ಎಂದು ಕೇಳಿದನು. ಹುಡುಗಿಯು ಮರದ ಕೊಂಬೆಯಕಡೆ ಕೈ ತೋರಿಸಿ, ಮೇಲೆ ನೋಡು, ಎಷ್ಟು ದೊಡ್ಡದಾಗಿಯೂ ಸುಂದರವಾಗಿಯೂ ಇರುವ ಹೂವು ಅರಳಿದೆ ! 29 ಎಂದಳು, - * ನಿನಗೆ ಆ ಹೂವ ಬೇಕೆ ? 99 “ ನನಗೆ ಅದು ಸಿಕ್ಕುವಬಗೆ ಹೇಗೆ ? ಒಗಳ ಮೇಲಿರುವ ಕೊಂಬೆಯ ಲ್ಲಿದೆ..! ಹುಡುಗ- (ನಕ್ಕು) ಎತ್ತರವಾದ ಕೊಂಬೆಯಲ್ಲಿರುವ ಹೂವನ್ನು ಯಾರೂ ಕೆಡಹುಲಾರ? ನೀನು ನನ್ನ ಎರಡು ಹಕ್ಕಿಗಳನ್ನು ಹಿಡಿದುಕೊಂಡಿರು, ಈಗಲೇ ಮರದಲ್ಲಿ ರುವ ಹೂವನ್ನು ನಿನಗೆ ತಂದುಕೊಡುವೆನು. ಹುಡುಗಿಯು ಹರುಷದಿಂದ ಹಕ್ಕಿಗಳನ್ನು ಹಿಡಿದುಕೊಂಡು ಮರವನ್ನು ನೋಡುತ್ತ, “ ಆದರೆ ನಿನ್ನ ಮೈಯೆಲ್ಲಾ ಮುಳ್ಳು ಚುಚ್ಚಿ ಘಾಯವಾಗುವುದಿ ಲ್ಲವೆ?99 ಎಂದಳು. ಹುಡುಗ-ಮುಳ್ಳಿಗೆ ಭಯಪಟ್ಟು ರಾಜಪೂತನು ಹೂವನ್ನು ತೆಗೆದು ಕೊಂಡು ಬರುವುದಕ್ಕೆ ಹಿಂಜರಿಯುವನೆ ? ಇದೋ, ನೋಡು : ಬೇಟೆಗೆ ಸಲು
ಪುಟ:ಕೋಹಿನೂರು.djvu/೧೦
ಗೋಚರ