ಪುಟ:ಕೋಹಿನೂರು.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

# ಮೂರನೆಯ ಭಾಗ. (m ಮೊದಲನೆಯ ಪರಿಚ್ಛೇದ ನಾಥದ್ವಾರದಲ್ಲಿ ಯಾವದಿನ ಪಾಠಕರು ಅಂಬಾಲಿಕೆಯನ್ನೂ ವಿಲಾಸ ಕುಮಾರಿಯನ್ನೂ ಸನ್ಯಾಸಿಯ ವೇಷದಲ್ಲಿ ನೋಡಿದ್ದರೆ ಆ ದಿವಸಕ್ಕೆ ಹಿಂದೆ ಹತ್ತು ವರ್ಷದಲ್ಲಿ ಬೇಸಿಗೆ ಕಾಲದಲ್ಲೊಂದುದಿನ ಎರಡನೆಯ ಜಾವದಲ್ಲಿ ಉದಯ ಪುರದ ರಾಜಪ್ರಸಾದದಲ್ಲಿ ಮಹಾರಾಣಾ ಜಯಸಿಂಹನ ಹಿರಿಯ ಮಹಿಷಿ ಕರ್ಣಾವತಿಯು ಮುಖ ಬಾಡಿದವಳಾಗಿ ತಲೆಯನ್ನು ತಗ್ಗಿಸಿಕೊಂಡು ಮಂಚದ ಮೇಲೆ ಕುಳಿತಿದ್ದಳು, ಕೆಲವು ದಿವಸದಿಂದ ಅವಳಿಗೆ ಮನಸ್ಸು ಸಮಾಧಾನವಾ ಗಿರಲಿಲ್ಲ. ಅವಳ ಹನ್ನೆರಡು ವರ್ಷದ ಗಂಡುಮಗು ಅಮರಸಿಂಹನು ಎರಡು ತಿಂಗಳಿಗೆ ಹಿಂದೆ ಆಹೇರಿಯಾ ಉತ್ಸವದ ದಿನ ಬೆಟ್ಟಗಳಲ್ಲಿ ಬೇಟೆಗೆ ಹೋಗಿದ್ದವ ನಿಗೆ ಮೈಗೆ ಸ್ವಸ್ಥವಿಲ್ಲದೆ ಬಾಡಿದ ಮುಖವುಳ್ಳವನಾಗಿ ಕೂತಸ್ಸಳವನ್ನು ಬಿಟ್ಟೆ ಳುವುದಿಲ್ಲ. ಹೊತ್ತಿಗೆ ಸರಿಯಾಗಿ ಊಟಮಾಡುವುದಿಲ್ಲ. ಒಬ್ಬರಸಂಗಡ ಮಾತ ನಾಡುವುದಿಲ್ಲ. ಒಂದೊಂದು ದಿನ ನಿಶಿರಾತ್ರಿಯಲ್ಲಿ ಹಾಸಿಗೆಯಿಂದೆದ್ದು ಒಬ್ಬನೇ ಹೋಗಿ ರಾಜಸಮುದ್ರ ಕೆರೆಯಮೇಲೆ ಕುಳಿತಿರುವನು, ಕೇಳಿದರೆ ಸರಿಯಾಗಿ ಹೇಳುವುದಿಲ್ಲ. ಎರಡು ತಿಂಗಳಿಂದ ವಹಿಷಿಯು ರಾಜವೈದ್ಯರ ನೆಲ್ಲಾ ಕರೆಯಿಸಿ ನೋಡಿಸಿದರೂ ಮಗನ ಚಿತ್ತವಿಕಾರಕ್ಕೆ ಕಾರಣವು ಗೊತ್ತಾಗದು. ಕಿರಿಯ ಮಹಿಷಿ ಕಮಲಾದೇವಿಯು ಕರ್ಣಾವತಿದೇವಿಯ ಮಂಚಕ್ಕೆ ಸ್ವಲ್ಪ ದೂರದಲ್ಲಿ ನಿಲವುಗನ್ನಡಿಯೆದುರಿಗೆ ಕುಳಿತು ತಲೆಯನ್ನು ಬಾಚಿಕೊಳ್ಳುತ್ತ ಮೃದುಮೃದುವಾಗಿ ಗಾನಮಾಡುತ್ತಾಳೆ-ಅವಳ ಹಿಂದೆ ಪರಿಚಾರಿಕೆಯೊಬ್ಬಳು ನಿಂತಿದ್ದಾಳೆ, ಪ್ರವಾರಾಜ್ಯದ ರಾಜವಂಶದಲ್ಲಿ ಹುಟ್ಟಿದ ಕಮಲಾದೇವಿಯನ್ನು ಚರಿತ್ರೆಯಲ್ಲಿ ಅಭಿಮಾನವುಳ್ಳ ರಾಣಿ • ಯೆಂದರೆ, ಸೊಕ್ಕು ಅಥವಾ ಗರ್ವ