ವಿಷಯಕ್ಕೆ ಹೋಗು

ಪುಟ:ಕೋಹಿನೂರು.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಶ ದ ನೆ ಯ ಹರಿ ಟೈಪ. ನಾಥದ್ವಾರದಲ್ಲಿ ನಡೆಯಬೇಕಾದ ವಿವಾಹ ಮಹೋತ್ಸವಕ್ಕೋಸ್ಕಕ ವರನ ಕಡೆಯವರು ಪ್ರಯಾಣ ಬೆಳೆಸಬೇಕಾದ ಸಮಯವೊದಹಿತು. ರಾಣಾ ಜಯಸಿಂಹನು ಹೇಳಿದ ಪ್ರಕಾರ ಮೇಚ್ಚದಳಿತವಾಗಿದ್ದ ರಾಜಪ್ರಭಾವದ ಅತುರೆ ಶ್ವರ್ಯಗಳಲ್ಲುಳಿದಿದ್ದುದು ಆನೆಗಳಾಗಿಯೂ ಕುದುರೆಗಳಾಗಿಯೂ ಇದ್ದುವು. ಈಗ್ಗೆ ಇನ್ನೂ ರು ವರ್ಷವಾಗಿ ಹೋಗಿದ್ದರ ಸರ್ವಸ್ವವೂ ಹೋಗಿ ಬರಿದಾಗಿ ರುವ ರಾಬಪ ತಾನದ ವಿಲುಪ್ತವಾಗಿ ಹೋದೆ ಗೌರವದ ಭಸ್ಮಾವಶೇಷದಲ್ಲಿ ಅಳಿಸಿ ಹೋದ ಬೆಂಕಿಯ ಕಿಡಿಗಳ ಸ್ವರೂಪವಾಗಿ ಆನೆ ಕುದುರೆಗಳನ್ನು ಮಾತ್ರ ವಿಶೇಷವಾಗಿ ನೋಡಬಹುದು. - ಕಮಲಾದೇವಿಯ ಅಪ್ಪಣೆಯ ಪ್ರಕಾರ ನಿಮಿಷದೊಳಗೆ ತೇಜೋಗರ್ವ ಶೀಲವಾಗಿಯೂ ರಣಕುಶವುಳವಗಳಾಗಿಯೂ ಸ.೦ದರವಾಗಿಯೂ ಇದ್ದ ಹತ್ತು ಸಾವಿರ ಕುದುರೆಗಳು ಹೇಷಾರವ ಮಾಡುತ್ತ ಕುಣಿಯುತ್ತ ಬಂದು ರಾಜ ಪ್ರಾಸಾದದ ಪ್ರಾಂಗಣದಲ್ಲಿ ಸಾಲು ಸಾಲಾಗಿ ನಿಂತವು, ಅವುಗಳ ಹಿಂದೆ ಐನೂರು ಪ್ರಕಾಂಡ ದೇಹವುಳ್ಳ ಮಹಾ ಬಲವುಳ್ಳ ಆನೆಗಳು ಗಂಭೀರವಾಡೆ ನಡಿಗೆಯಿಂದ ಬಂದು ಪ್ರಾಸಾದಕ್ಕೆ ತಳಭಾಗದಲ್ಲಿ ನಿಂತವ, ಕಮಲಾದೇವಿಯ ಕೋರಿಕೆಯ ಪ್ರಕಾರ ಅವಳ ತೌರುಮನೆಯಾದ ಪ್ರಮಾ ರಾಜ್ಯದ ರಾಜಭವನ ದಿಂದ ೯ ದಾನವದೆಮನೆ : ವೆಂಬ ಪಟ್ಟದ ಕುದುರೆಯೂ (' ದಿಗ್ಗಜ ೨೨ ವೆಂಬ ಪಟ್ಟದ ಆನೆಯೂ ಬಂದಿದ್ದುವು. ಅತುಳಸೂರ್ತಿಯನ್ನೂ ಅಮಿತ ತೇಜನ್ನೂ ಉಳ್ಳ • ದಾನವದನನ ವೆಂಬ ಪಟ್ಟದ ಕುದುರೆಯು ಮುತ್ತು ವಜ್ರಗಳ ಹರ ಗಳಿಂದಲಂಕೃತವಾಗಿ ಕುಣಿದಾಡುತ್ತ ಪ್ರಾಂಗಣದ ಮುಂದುಗಡೆ ಬಂದು ನಿಂತಿತು. ಆದರ ಸಂಗಡ ಉನ್ನತ ಶbರಿಯಾಗಿ .ಗಂಭೀರವತಿಯುಳ್ಳ 6 ದಿಗ್ಗಜ ' ಎಂಬ ಪಟ್ಟದ ಆನೆಯು ನಾಲ್ಕು ಕಡೆಯೂ ಸೊಂಡಿಲವನ್ನು ತೂಗಾಡಿಕೊಂಡು ವಾದ ಹಾರದ ಕಾಂತಿಯನ್ನು ಬೀರಿ ಚಲ್ಲಾಡುತ್ತ ರಾಜ ಗಾಂಭೀರ್ಯದಿಂದ ಮುಂದಾಗಿ ಬಂದು ನಿಂತಿತು. ಕಮಲಾದೇವಿಯು ಹರುಷದಿಂದ ಪ್ರಾಸಾದದ ಪ್ರಾಂಗಣವನ್ನು ನೋಡಿ ಬಳಿಕ ಅಮರಸಿಂಹನಿಗೆ ವರನ ಉಡುಪನ್ನು ಉಡಿಸಬೇಕೆಂದು ಅವನನ್ನು 13