ವಿಷಯಕ್ಕೆ ಹೋಗು

ಪುಟ:ಕೋಹಿನೂರು.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೨೪ ಕೊಹಿನುರು mmmmmmmmm ಇದುವರೆವಿಗೂ ರಾಜಕುಮಾರಿಗೆ ಅಮರಸಿಂಹನ ನಿಜವಾದ ಪರಿಚಯವನ್ನು ವಿವರಿಸಿ ಹೇಳಲಿಲ್ಲವೇಕೆ ? ಹಾಗೆ ಹೇಳಿದ್ದರೆ, ನಾನು ಈ ಭಯಂಕರವಾದ ವ್ಯಾಪಾರವನ್ನು ಕಣ್ಣಿಂದ ನೋಡುತ್ತಿರಲಿಲ್ಲ-ಅಮರಸಿಂಹನು ಇವಳನ್ನು ಮದುವೆ ಮಾಡಿಕೊಳ್ಳುವುದು ನಿಜವಾಗಿಯೂ ನಿನಗೆ ಸಮ್ಮತವೆ ? ಅವರಿಬ್ಬರೂ ಗಂಡಹೆಂಡಿರಾಗಿರುವುದನ್ನು ನೀನು ನೋಡಿ ಸಂತೋಷಪಡುತಿದ್ದಿಯಾ ? ೨ - : ವಿಲಾಸಕುಮಾರಿ-( ಅಳುತ್ತ)-ಅಯ್ಯೋ ! ದೇವ? ಇಷ್ಟು ಕಾಲದ ಬಳಿಕ ತಾವು ನನ್ನನ್ನು ನಂಬತಕ್ಕವಳಲ್ಲವೆಂದು ತಿಳಿಯೋಣಾಯಿತೆ ! ನಿರ್ಭಾಗ್ಯ ಯಾದ ನಾನು, ಮದುವೆಯ ಸಮಯದಲ್ಲಿ ಅಂಬಾಲಿಕೆಯು ಆ ದೀನದರಿದ್ರ ಕೃಷಿಕನು ಕಾಜಕುಮಾರನೆಂದು ತಿಳಿದು ಅವಳಾ ಎಲ್ಲಾ ದುಃಖವೂ ನೀಗುವು ದೆಂದು ತಿಳಿದಿದ್ದೆನು, ಹೊಸ ದಂಪತಿಯರು ಸುಖಸಾಗರದಲ್ಲಿ ಮುಳುಗೇಳು ವುದನ್ನು ನೋಡಿ ನನ್ನ ಜನ್ಮವನ್ನು ಸಾರ್ಥಕವಾಗಿ ಮಾಡಿಕೊಳ್ಳಬೇಕೆಂದು ಬಹಳ ಆಶೆಯುಳ್ಳವಳಾಗಿದ್ದೆನು. ಆ' ಆಶೆಯು ಪೂರ್ಣವಾಗದೆ ? ಈ ಅಲ್ಪ ಬುದ್ಧಿಯುಳ್ಳ ಬಾಲೆಯ ಅಪರಾಧವನ್ನು ಮನ್ನಿಸಬೇಕೆಂದು ಬೇಡುತ್ತೇನೆ. ಅಂಬಾಲಿಕೆಗೆ ಪ್ರಾಣದಾನ ಮಾಡೋಣಾಗಬೇಕು, ಬೇಗನೆ ಹೇಳೋಣಾಗಲಿ, ದೇವ! ತಾವು ಬೇಗನೆ ಉತ್ತರವನ್ನು ಕೊಡದಿರುವುದರಿಂದ ನನ್ನ ಪ್ರಾಣವು ಬಹಳವಾಗಿ ಹೊಡೆದುಕೊಳ್ಳುತ್ತಿದೆ. ಈ ಚಿರದುಃಖಿನಿಯ ಇಹಜೀವನದಲ್ಲಿ ರು ವುದಿದೊಂದೇ ಆಶೆ-ಇದು ಪೂರ್ಣವನ್ನು ಹೊಂದದೆ ? « ವತ್ಸೆ ! ನಿನ್ನ ಸ್ನೇಹಿತೆಯ ಪ್ರಾಣಕ್ಕೆ ಭಯವಿಲ್ಲ- ವಿಧಾತನ ಮಂಗಳ ಮಯವಾದ ಸಂಕಲ್ಪದಿಂದ ನಾವು ಸರಿಯಾದ ಕಾಲದಲ್ಲಿ ಇಲ್ಲಿಗೆ ಬಂದ ಹಾಗಾಯಿತು. ೨ ( ವಿಳಾಸಕುಮಾರಿಯು ಹರುಷದಿಂದ, “ ಹಾಗಾದರೆ, ಅಪ್ಪಣೆ ಕೊಡೋ ಕಾಗಲಿ-ನಾನು ಹೋಗಿ ಮಿವಾರದ ರಾಜಕುಮಾರನಿಗೆ ಈ ಸುಖದ ಸಮಾಚಾರ ವನ್ನು ಹೇಳುವನು, ” ಎಂದಳು.

  • ಸ್ವಲ್ಪ ನಿಲ್ಲು, ವತ್ಸೆ ! ನಿನ್ನನ್ನು ಸ್ವಲ್ಪ ಕೇಳತಕ್ಕದಿದೆ - ನಿನ್ನ ಗಂಡ ನನ್ನು ಅಂಬಾಲಿಕೆಯು ಮದುವೆಮಾಡಿಕೊಂಡರೆ ಅವಳು ನಿನ್ನ ಸ್ಥಾನದಲ್ಲಿದ್ದು .ಇಸಗೆ ಚಿರಜೀವನವೂ ಪತಿ ಸುಖವು ಇಲ್ಲದೆ ಹೋಗುವುದು, ಮುಂದೆ ನಿನ್ನ .ಗತಿಯೇನಾಗುವುದೋ ಗೊತ್ತಾಗದೆ ನನ್ನ ಮನಸ್ಸು ಕಳವಳಗೊಂಡಿದೆ