ಮೊದಲನೆಯ ಪರಿಚ್ಛೇದ wwwxwwwymyvyww ಸಂಧ್ಯಾ ಕಾಲಕ್ಕೆ ಸ್ವಲ್ಪ ಮುಂದಾಗಿ ಅಜಬೂರು ನಗರಕ್ಕೆ ಸಮೀಪದಲ್ಲಿ ರುವ ಹರದೇವಪುರಗ್ರಾಮಕ್ಕೆ ಒಂದೆರಡು ಮೈಲಿಯಲ್ಲಿ ಹರಿಯುವ ಕಾಳಿಂದಿನೀ ನದಿಯ ತೀರದಲ್ಲಿ ನಿರ್ಜನವಾಗಿದ್ದ ದೊಡ್ಡ ಬೈಲಿನಲ್ಲಿ ದನಾಕಾಯುವ ಕೃಷಿಕ ಹುಡುಗನೊಬ್ಬನು ಏಕಾಂಗಿಯಾಗಿ ಮಲಗಿಕೊಂಡು ಯೋಚಿಸುತ್ತಿದ್ದನು. ಎಂಟು ವರ್ಷಕ್ಕೆ ಹಿಂದೆ ಚಿಕ್ಕಂದಿನಲ್ಲಿ ರಾಜಸಮುದ್ರ ಕೆರೆಯ ಕಟ್ಟೆಯಮೇಲೆ ಕಿಂಶುಕ ವೃಕ್ಷದ ಕೆಳಗೆ ಒಬ್ಬ ಹುಡುಗಿಯು ಎಲ್ಲಿಂದಲೋ ಬಂದು ಅವನಿಗೆ ಒಂದುತಡವೆ-ಒಂದುತಡವೆಮಾತ್ರ-ಮುಖವನ್ನು ತೋರಿ ಎಲ್ಲಿಯೋ ಹೋಗಿ ಔತುಕೊಂಡುಬಿಟ್ಟಳು. ಅದುಮೊದಲು ದನಾ ಕಾಯುವ ಹುಡುಗನು ಎಲ್ಲೆಲ್ಲಿ ಎಷ್ಟು ಹುಡುಕಿದರೂ ಆ ಅಪಾರ್ಥಿ ದನಿಧಿ-ಹರನ ಚಡದಲ್ಲಿ ಹಾರುತ್ತಿದ್ದ ಆ ಶುಧಾಂಶುಲೇಖೆಯು-ಜಗತ್ತಿನಲ್ಲಿ ಎಲ್ಲೆಲ್ಲಿಯೂ ಕಾಣಿಸಲಿಲ್ಲ, ದನಾಕಾ ಯುವ ಹುಡುಗರು, ಎಲ್ಲಿಗೆ ಹೋಗಿ ಏನು ಮಾಡಿದರೆ ಅವಳನ್ನು ಮತ್ತೊಂದು ಸಲ ನೋಡಲಾದೆನೆಂದು ಯೋಚಿಸುತ್ತಿದ್ದನು. - ಯೋಚಿಸುತಿದ್ದ ಹಾಗೆ ಯುವಕನಿಗೆ ನಿದ್ರೆಯು ಹತ್ತಿತು. ನಿದ್ರಾವಸ್ಥೆ ಯಲ್ಲಿ ಸ್ವಪ್ನವನ್ನು ಕಂಡನು. ಸ್ವಪ್ನದಲ್ಲಿ ಅವನ ಆ ಅಪಾರ್ಥಿವನಿಧಿಸ್ವರೂಪ ವಾದ ದೇವಕನ್ನಿ ಕೆಯನ್ನು ನಿಂದಿಸುವ ಹುಡುಗಿಯನ್ನು ಹುಡುಕುತ್ತಾ ಪ್ರಾಣ ಸಮಾಗಮವಿಲ್ಲದ ಎತ್ತರವಾದ ಪರ್ವತದ ಮೇಲೆ ಹೋದಹಾಗೂ ಪರ್ವತದ ಶಿಖರದ ಮೇಲಿದ್ದ ಸಮಭೂಮಿಯಲ್ಲಿ ದೊಡ್ಡ ದೊಡ್ಡ ಅಲೆಗಳುಳ್ಳ ಒಂದು ನದಿಯು ಗರ್ಜಿಸುತ್ತ ಹರಿಯುತಿದ್ದ ಹಾಗೂ ಯುವಕನು ಆ ಪರ್ವತದ ಶಿಖರದ ಮೇಲೆ ನಿಂತು ಘಟ್ಟಿಯಾಗಿ, ಹಾಹಾ ! ಪುನಃ ಒಂದು ಸಲ ನೋಡಲಾರದಿರು ನೆನೆ ? ಎಂದು ಕೂಗಿಕೊಂಡಹಾಗೂ, ಯಾರೋ ಮೇಲಿನಿಂದ, ಭಯವಿಲ್ಲಪುನಃ ನೋಡುವೆ ಎಂದು ಉತ್ತರವನ್ನು ಕೊಟ್ಟಹಾಗಾಗಿ, ಯುವಕನು ಚಮಕಿ ತನಾಗಿ ನೋಡಲು ತಲೆಯ ಕೂದಲನ್ನು ಹರಿದಾಡಿಸಿಕೊಂಡು ಲಾವಣ್ಯಮಯಿ ಯಾದ ಹೆಂಗಸೊಬ್ಬಳು ಅವನೆದುರಿಗೆ ಬಂದು ನಿಂತು ಮಧುರಸ್ಸರದಿಂದ, ಪುನಃ ನೋಡುವೆ ಎಂದು ಹೇಳಿದಹಾಗೂ ಯುವಕನು ಕಾತರನಾಗಿ, ಯಾವಾಗ ನೋಡುವೆನು ? ಎಂದು ಕೇಳಲು, ಹೆಂಗಸು, ನಿನ್ನೆದುರಿಗೆ ಕಣ್ಣು ಬಿಟ್ಟು ನೋಡೆಂದು ಹೇಳಿದ ಹಾಗೂ ಯುವಕನು ಆತುರದಿಂದ ನೋಡಲಾಗೆದುರಿಗೆ ಅಗಣಿತ ಸೌಧವಾಲೆಗಳಿಂದ ಶೋಭಿತವಾಗಿದ್ದ ವಿಸ್ತ್ರತವಾದ ರಾಜಧಾನಿ-ಅದರ
ಪುಟ:ಕೋಹಿನೂರು.djvu/೧೭
ಗೋಚರ