ಕಹಿಸುರು ಒrwandaAnwh•hy ಕೊಂಡು ಅಲ್ಲಿ ಸೇರಿದ್ದ ಮಿಕ್ಕ ವೀರರನ್ನು ಯವನರ ಸಂಗಡ ಯುದ್ಧಕ ಪ್ರೋತ್ಸಾಹಪಡಿಸುತ್ತಿದ್ದಳು, ಆಗಿಂದಾಗ, ಅತಿ ಗೋಪ್ಯವಾಗಿ ಹೋಗಿ ಮಗನನ್ನು ನೋಡಿಕೊಂಡು ಬರುತ್ತಿದ್ದಳು, ಈ ದಿನವೂ ಮಗನನ್ನು ನೋಡಿ ಕೆಂಡು ಹಿಂದಿರುಗಿ ಬರುತ್ತ ಕಾಳಿಂದೀನದಿಯ ತೀರದಲ್ಲಿ ಮುಸಲ್ಮಾನ ಫಕೀ ರನ ಮಂದಿರದಲ್ಲುಳಿದಿದ್ದಳು. ಮುಕುಂದದಾಸನೂ ಅವಳ ಜತೆಯಲ್ಲಿ ಫಕೀರನ ಮಂದಿರದವರೆಗೂ ಬಂದಿದ್ದನು, ದುರ್ಗಾದಾಸನು ಆ ವೃದ್ದ ಫಕೀರನನ್ನು ಬಾಲ್ಯ ದಿಂದ ಬಲ್ಲನಲ್ಲದೆ, ಅನೇಕ ಕಾರಣಾಂತರದಿಂದ ಅವನನ್ನು ಗುರುವೆಂದು ಭಾವಿಸಿದ್ದನು. ಶರತ್ಕಾಲದ ಶುಕ್ಲ ಪಕ್ಷದ ರಾತ್ರಿಯು ಪ್ರಾಯಃ ಸವೆಯುತ್ತ ಬಂದಿತು. ಚಂದ್ರನು ರಾತ್ರಿಯೆಲ್ಲಾ ಜಾಗರಣೆ ಮಾಡಿ ದಣಿದು ತೂಕಡಿಕೆ ಬಂದು ಮಲಗು ವುದಕ್ಕೆ ಸಲುವಾಗಿ ಆಕಾಶಪ್ರಾಂತದಲ್ಲಿ ಒತ್ತಟ್ಟು ವಾರೆಯಾದನು. ಬೆಟ್ಟಗಳ ಸಂದುಗಳಲ್ಲಿ ಇಕ್ಕೆಡದಲ್ಲಿ ಹೋಗಿದ್ದ ಭಾಟೆಮಾರ್ಗಕ್ಕೆ ಪಾರ್ಶ್ವದಲ್ಲಿ ದುರ್ಗಾ ದಾಸನು ಮಾರ್ಗಾಯಾಸದಿಂದ ಕ್ಲಾಂತನಾಗಿ ಮಲಗಿಕೊಂಡು ನಿದ್ರೆ ಹೋಗು ತಿದ್ದನು, ಅವನ ಪಾರ್ಶ್ವದಲ್ಲಿ ಕೃಷಿಕ ಯುವಕನು ಮಲಗಿಕೊಂಡು ಏನೋ ಯೋಚಿಸುತಿದ್ದನು. ಅವರಿಬ್ಬರಿಗೂ ಸ್ವಲ್ಪ ದೂರದಲ್ಲಿ ಅರುಂಧತಿದೇವಿಯ, ಅವಳ ಹತ್ತಿರ ರಾಜಕುಮಾರಿ ಆಂಬಾಲಿಕೆಯೂ, ನೆಲದ ಮೇಲೆ ಮಲಗಿದ ರು. ಅರುಂಧತಿಗೆ ವಿದ್ಯೆ-ರಾಜಕುಮಾರಿ ಆಂಬಾಲಿಕೆಯು ಮಾರ್ಗಾಯಾಸದಿಂದ ಶ್ರಮಪಟ್ಟಿದ್ದರೂ, ನಿದ್ದೆ ಹತ್ತದೆ ನೀಲೋತ್ಪಲದ ಹಾಗಿದ್ದ ಕಣ್ಣುಗಳನ್ನು ತೆರೆದು ಕೊಂಡು ಅಸ್ತಂಗತನಾಗುತ್ತಿದ್ದ ಚಂದ್ರನಕಡೆ ನೋಡುತಿದ್ದಳು, ಕೃಷಿಕ ಯುವಕನು ತನ್ನ ಹಾಗೇ ರಾಜಕುಮಾರಿಗೂ ಕಣ್ಣಿಗೆ ನಿದ್ದೆ ಹತ್ತಿರಲಿಲ್ಲವೆಂದು ತಿಳಿದಿರಲಿಲ್ಲ. ಇದ್ದಕ್ಕಿದ್ದ ಹಾಗೆ ಸ್ವಲ್ಪ ದೂರದಲ್ಲಿ ಬಹುಸಂಖ್ಯೆ ಕುದುರೆಗಳ ಗೊರಸಿನ ಶಬ್ದವು ಕೇಳಿಸುತ್ತ ಬಂದಿತು. ಕೃಷಿಕಯುವಕನು ಚಕಿತನಾಗಿ ಸೊಂಟಕ್ಕೆ ಕಟ್ಟಿದ್ದ ಕತ್ತಿಯನ್ನೊರೆಗಳಚಿ ಹಿಡಿದು ನಿಂತು ದುರ್ಗಾದಾಸನನ್ನೆಬ್ಬಿಸಿ, ವೀರ ಪರ ಕತ್ತಿಯೊರೆಯನ್ನು ತೆಗೆಯೋ ಣಾಗಲಿ-ಎದುರಿಗೆ ಬಹುಸಂಖ್ಯಕ ಶತ್ರು ಸೇನೆ ! ಎಂದನು. - ದುರ್ಗಾದಾಸನು ನೋಡಲಾಗಿ, ಹತ್ತಿರದಲ್ಲಿಯೇ ಅಶ್ವಾರೋಹೀ ಯವಸ ಸೇನೆಯು ತಮ್ಮ ಕಡೆಗೇ ಬರುತ್ತಿದ್ದುದನ್ನು ಕಂಡು, ' ನಾವಿರುವವರು
ಪುಟ:ಕೋಹಿನೂರು.djvu/೩೬
ಗೋಚರ