ವಿಷಯಕ್ಕೆ ಹೋಗು

ಪುಟ:ಕೋಹಿನೂರು.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನೆಯ ಪರಿಚ್ಛೇದ www ವೀಶಪ್ರಾಣವು ಗಳಿತವಾಗಿಹುದು ಮಜ್ಜನನಿ ಏಳೆಲ್‌ ಜನ್ಮ ಭೂಮಿ ಜನನಿ ಯಳಮ್ಮ ಬಾಲರನು ನಲವಿಂದ ನೋಡುತ್ತೆ ಪೊರೆಯೆನ್ನ. ಬೆಳದಿಂಗಳಿಂದ ಬೆಳಗುತ್ತಿದ್ದಾ ಶೈಲಶೃಂಗದಲ್ಲಿ, ಆರ್ಯವೀರರು ವೀರಪದ ಭರದಿಂದ ಅರಾವಳಿ ಬೆಟ್ಟವನ್ನು ನಡುಗಿಸಿ, ಗಂಭೀರವಾದ ಸಂಗೀತದ ನಿನಾದ ದಿಂದ ಗಗನತಲವನ್ನು ಶೆಲೆಗೊಳಿಸಿ, ಪ್ರೇಮರಂಗದಲ್ಲಿ ನೃತ್ಯ ಮಾಡಲಾರಂಭಿಸಿ ದರು, ಕತ್ತಿಗಳನ್ನು ಮೇಲಕ್ಕೆತ್ತಿ, ಕತ್ತಿ ಕತ್ತಿಗೆ ಸಂಘರ್ಷಣ ಮಾಡಿಸಿ :- ಕೋಟಮಕ್ಕಳ ನೀನು ಪಡೆದಿರುವೆಯೆಲೆ ತಾಯೆ ! ಕೋಟಿ ಖಡ್ಡದ ಧಾರೆಯಿಂದ ರಿಪುಗಳಂ ಸಾಯೆ ! ೨೨ ಎಂದು ಹಾಡಿದರು. ಬಾಹುಗಳನ್ನು ಮೇಲಕ್ಕೆತ್ತಿ ಕಣ್ಣುಗಳನ್ನು ಮುಚ್ಚಿಕೊಂಡು ಉನ್ಮತ್ತರ ಹಾಗೆ ಕುಣಿಯುತ್ತ :- “ ಮೋದುವೆವು ಸಾವಿನಲಿ ಭಯವಿಲ್ಲವೆಲೆ ತಾಯೆ ೨೨ ಎಂದು ಹಾಡಿದರು. ಅಪರಿಮಿತವಾದ ಆನಂದದಿಂದಲೂ ಅತುಳಸೂರ್ತಿಯಿಂದಲೂ ಭುಜ ವನ್ನು ತಟ್ಟಿಕೊಂಡು ಹೆಜ್ಜೆಗಳಿಂದ ನೆಲವನ್ನ ಪ್ಪಳಿಸಿ ತುಳಿದು ಶಬ್ದ ಮಾಡುತ್ತ ;- CC ಮದಿಸಿ ರಣರಂಗದಲ್ಲಿ ದಾನವರ ದಳಗಳನು ಪದತಳದೊಳಿಟ್ನರಸಿ ಯುಣಿಸುವೆವು ನಾಯ್ಕ ಳನು ೨೨ ಎಂದು ಹಾಡುವರು. ಸಾಷ್ಟಾಂಗವಾಗಿ ನೆಲದ ಮೇಲೆ ಉರುಡಾಡಿ ಧರಣಿಯನ್ನು ಮುದ್ದಿಟ್ಟು :- 44 ಏಳಲೌ ಜನ್ಮಭೂಮಿ ಜನನಿ ಏಳಮ್ಮ, ಬಾಲರನು ನಲವಿಂದ ನೋಡುತ್ತ ಪೊರೆಯಮ್ಮ ೨9 ಎಂದು ಹಾಡುವರು. “ ಪುನಃ ಹಾರಿ ಹಾರಿ ಎದ್ದು ನಿಂತು ಅಂತರಿಕ್ಷದಲ್ಲಿ ಕತ್ತಿಗಳನ್ನು ತಿರುಗಿಸುತ್ತ :- “ ಅರಿಮುಂಡಹಾರದಿಂ ಸಿಂಗರಿಸುವೆವು ತಾಯ, ಧುರದೊಳು ಮುಂಗಟ್ಟು ಮೇಕ್ಟ ಜನಗಳು ಸಾಯೆ ೨೫ ಎಂದು ಹಾಡುವರು.