ವಿಷಯಕ್ಕೆ ಹೋಗು

ಪುಟ:ಕೋಹಿನೂರು.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ho ಕೊಹಿನುರು ಹೊರಗೆ ಬಂದರು, ಅವರ ಹಿಂದೆ ಅನೇಕ ಮಂದಿ ಹೆಂಗಸರು ಕೈಚಪ್ಪಳೆಯಿಂದ ತಾಳವನ್ನು ಹಾಕುತ್ತ, ಬಾಯಿಯಿಂದ ಹಾಡುತ್ತ ಬಂದು ಮಂದಿರದ ಮುಂದು ಗಡೆ ಇದ್ದ ವಿಸ್ತಾರವಾದ ಅಂಗಳದಲ್ಲಿ ನಿಂತುಕೊಂಡರು. ಸ್ವಲ್ಪ ಹೊತ್ತಿನಲ್ಲಿ ನಾರಿಯರ ಸಂಗೀತ ಧ್ವನಿಯು ನಿಂತಿತು, ಆದರೆ ಮತ್ತೇನು ? ಅದು ನಾರಿ ಯರು ಹಾಡುತಿದ್ದ ಸಂಗೀತದ ಪ್ರತಿಧ್ವನಿಖೆ ? ಅಥವಾ ಅದಕ್ಕೆ ಪ್ರತ್ಯುತ್ತ ರವೋ ? ಹೆಂಗಸರ ಸುಗೀತವು ಪೂರೈಸುವುದಕ್ಕೆ ಮೊದಲು, ಭೀಷಣವಾದ ಮೈಗುಡಿಗಟ್ಟುವ ಗಂಭೀರವಾದ ಭೇರಿಯ ನಾದದೊಂದಿಗೆ ಸೇರಿಕೊಂಡು ಕತ್ತಿ ಗಳ ಝಣತ್ಕಾರ ಶಬ್ದದಲ್ಲಿ ಪ್ರತಿಧ್ವನಿತವಾಗಿದ್ದ ಮತ್ತೊಂದು ಸಂಗೀತದ ಶಬ್ದ ಮೆದ್ದಿತು ! ಅಮೃತಭಾಷಿಣಿಯಾದ ಕಲ್ಲೋಲನಿಯ (ನದಿಯ) ಪ್ರವಾಹದ ಕಲ ಕಲಧ್ವನಿಯು ಇದ್ದ ಹಾಗೆ ಗಭೀರವಾದ ಸಮುದ್ರದ ಗರ್ಜನೆಯಲ್ಲಿ ಪರಿಣಮಿಸಿದ ಹಾಗೆ ತೋರಿ ಬಂದಿತು ! ಕೃಷಿಕನು ಆಶ್ಚರ್ಯಗೊಂಡು ನೋಡುತಿದ್ದ ಹಾಗೆ, ಮಂದಿರದ ಮತ್ತೊಂದು ಪಾರ್ಶ್ವದಿಂದ ನೂರಾರು ಕಾಳಮೇಘದಹಾಗೆ ನೂರಾರುಮಂದಿ ವೀರರು ಉಜ್ವಲವಾದ ಒರೆಗಳಿದ ಕತ್ತಿಗಳನ್ನು ತಿರುಗಿಸುತ್ತ, ಘೋರವಾದ ಗಂಭೀರ ಗೀತಧ್ವನಿ ಮಾಡುತ್ತ, ಯುದ್ದ ಪ್ರಾಂಗಣದಲ್ಲಿ ರಣೆ ನೃತರಾದ ವೀರರ ಹಾಗೆ ನೃತ್ಯವನ್ನು ಮಾಡುತ್ತ ಮಂದಿರದ ಪ್ರಾಂಗಣಕ್ಕೆ ಮುಂದರಿದು ಬಂದರು, ಕೃಷಿಕನು ಮಂತ್ರಾಹತನಾದವನಹಾಗೆ ಕೇಳುತಿದ್ದನು; ಕೋಟಿ ಮಕ್ಕಳ ನೀನು ಪಡೆದಿರುವೆ ಯೆಲೆ ತಾಯೆ | ಕೋಟಿ ಖಡ್ಡದ ಧಾರೆಯಿಂದ ರಿಪುಗಳುಂ ಸಾಯ ಅರಿಮುಂಡ ಹಾರದಿಂ ಸಿಂಗರಿಸುವೆವು ತಾಯೆ ಧುರದೊಳಗೆ ಮುಂಗಟ್ಟು ಮೈಚ ಜನಗಳು ಸಾಯ ದುವೆವು ಸಾವಿನಲಿ ಭಯವಿಲ್ಲವೆಲೆ ತಾಯ | ಬೇದದಲಿ ವದನಶಶಿಕುಂದಲೇತಕೆ ತಾಯೆ ಮದಿಸಿ ರಣರಂಗದಲ್ಲಿ ದಾನವರ ದಳಗಳನ್ನು ಪದತಳದೊಳಿಟ್ಟೂರಸಿ ಯುಣಿಸುವವು ನಾಯ್ಗಳನು ಮುಗಿಲಿಂದ ಮರೆಯಾದ ನಿಜವದನ ಚಂದ್ರನಲಿ ನಗೆ ಮೊಳೆತು ಬೆಳಗಲೀ ಜಗವನಾನಂದದಲಿ ಓ ರಂತೆ ನೀಂ ಸುರಿವ ಕಣ್ಣೀರಿನಲ್ಲಿ ಬಾನಿ