ಪುಟ:ಕೋಹಿನೂರು.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೋಹಿಸುರು Ly wwwx wmmmmmmmmmmmmmmmmmmmun ಅವನೊಬ್ಬನೇ ಶಸ್ತ್ರಪಾಣಿಗಳಾಗಿದ್ದ ಇನ್ನೂ ರು ಮಂದಿ ಯವನರೆದುರಿಗೆ ಹೋಗಿ' ನಿಂತನು. ಅವನಾ ಸುಕುಮಾರ ವಕ್ಷದ ರಕ್ತಪಾನ ಮಾಡುವ ಸಲುವಾಗಿ, ಏಕಕಾಲದಲ್ಲಿ ಇನ್ನೂ ರು ಕತ್ತಿಗಳೆತ್ತಿದುದನ್ನು ಕಂಡು ನಾನು ಮೂರ್ಛಿಗೊಂಡು ರಾಜಮಹಿಷಿಯ ತೊಡೆಯಮೇಲೆ ಬಿದ್ದೆನು ! ನಿಷ್ಟುರನಾದ ದುರ್ಗಾದಾಸನೂ ಕಠಿಣ ಪ್ರಾಣಿಯಾದ ರಾಜಮಹಿಷಿಯೂ ಅವನನ್ನು ಶತ್ರುಗಳ ಕತ್ತಿಗೆ ಬಿಟ್ಟು ನನ್ನ ನ್ನು ಕರೆದುಕೊಂಡು ಹೊರಟುಹೋದರು. ಸಖಿ ! ಇಷ್ಟು ದಿವಸದ ಬಳಿಕ ಅದಕ್ಕೆಲ್ಲಾ ಪ್ರತೀಕಾರವಾಗಿ ನಾನು ಅವನನ್ನು ಮರೆತುಬಿಡುವೆನೆ ? ೨೨ - ವಿಲಾಸಕುಮಾರಿಯು ಅಂಬಾಲಿಕೆಯನ್ನು ಮುದ್ದಿಟ್ಟುಕೊಂಡು “ ಹೇಗೆ ತಾನೇ ಎದೆಯನ್ನು ಕಲ್ಲು ಮಾಡಿಕೊಂಡು ನೀನವನನ್ನು ಚಿರಕಾಲ ಕಣ್ಣಿಗೆ ಕಾಣಿಸಿಕೊಳ್ಳದೆ ತಲೆ ಮರೆಯಾಗಿ ಹೊರಟು ಹೋಗಲೆಂದು ಹೇಳುವೆ ? ಯಾವ ಪ್ರಾಣವನ್ನಿಟ್ಟುಕೊಂಡು ನೀನವನನ್ನು ಈ ಜನ್ಮದಲ್ಲಿ ನೋಡುವುದಿಲ್ಲವೆಂದು ಹೇಳಬೇಕೆಂದು ಹೇಳಬಲ್ಲೆ ? ೨೨ ಎಂದು ಹೇಳಿದಳು. ಅಂಬಾಲಿಕೆಯು ಪುನಃ ವಿಲಾಸಕುಮಾರಿಯ ಕುತ್ತಿಗೆಯನ್ನು ಕಟ್ಟಿ ಕೊಂಡು, ಅವಳೆದೆಯನ್ನು ಕಣ್ಣೀರಿಂದ ತೋಯಿಸುತ್ತ, “ ಹಾ ! ಸಖಿ | ನಾನು ರಾಜರಾಜೇಂದ್ರನ ಮಗಳು. ಅವನೋ, ನೀಚಕುಲದಲ್ಲಿ ಹುಟ್ಟಿದ ನೆಲವನ್ನು ಕೆರೆಯುವ ದೀನ ಹೀನನಾದ ಕೃಷಿಕ ೨೨ ಎಂದಳು. ಆ ರ ಸ ಯ ಪರಿ ೬ ದ. ಅಂಬಾಲಿಕೆಯು ಬಾರಿಬಾರಿಗೂ ಕೇಳಿಕೊಂಡಪ್ರಕಾರ ವಿಳಾಸಕಮ ರಿಯು ಕೃಷಿಕರನ್ನು ಕರೆದು ರಾಜಕುಮಾರಿಯ ಅಪ್ಪಣೆಯನ್ನು ಅವನಿಗೆ ತಿಳಿಸಿ ದಳು, ಕೃಷಿಕನು ಆಗಲೆಂದೊಪ್ಪಿಕೊಂಡು, ಬೆಳಕುಹರಿಯುತ್ತಲೇ ದುರ್ಗವನ್ನು ಬಿಟ್ಟು ಹೊರಟುಹೋಗುವುದಾಗಿ ಹೇಳಿದನು, ಆ ದಿನ ಸಮರಾತ್ರಿ ದುರ್ಗದ ಪಾರ್ಶ್ವದಲ್ಲಿ ಅಸ್ತಮಿತವಾಗುತ್ತಿದ್ದ ಚುಕ್ಕಿಯ ಚಿಕ್ಕ ಬೆಳಕಿನಲ್ಲಿ ಅಂಬಾಳಿಕೆಯೂ ಶಾಸಕುಮಾರಿಯ ಕಲ್ಲುಬಂಡೆಯಮೇಲೆ ನಿಂತಿದ್ದಾರೆ, ಕೃಷಿಕನು ಅವರ ಬಳಿ ಬಂದು ಕೈಮುಗಿದುಕೊಂಡು “ ರಾಜನಂದಿಸಿ ! ನಿಮ್ಮ ಅಪ್ಪಣೆಯಪ್ರಕಾರ