ಪುಟ:ಕೋಹಿನೂರು.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಪರಿಚ್ಛೇದ ೬೬. wwwmmm ದುರ್ಗವನ್ನು ಬಿಟ್ಟು ಹೊರಟೆನು, ಆದರೆ, ನನ್ನನ್ನು ಕ್ಷಮಿಸುವುದಾದರೆ, .ಒಂದು ಸಂಗತಿಯನ್ನು ಕೇಳಬೇಕೆಂದಿದ್ದೇನೆ. ನಾನು ನಿಮ್ಮಲ್ಲೇನು ಅಪರಾಧವನ್ನು ಮಾಡಿದ್ದೇನೋ ಅದನ್ನು ನನಗೆ ಹೇಳಬೇಕು ೨೨ ಎಂದನು. ರಾಜಕುಮಾರಿಯು ಉತ್ತರವನ್ನು ಕೊಡಲಿಲ್ಲ. ಕತ್ತಲೆಯಲ್ಲಿ ಕೃಷಿಕನಿಗೆ | ಗೊತ್ತಾಗದೆ ರಾಜಕುವರಿಯ ಕಣ್ಣುಗಳಿಂದ ವಾರಿಧಾರಿಯು ಸುರಿಯುತಿ ದ್ವಿತು. ಕೃಷಿಕನು ಪುನಃ, “ ಹಾಗಾದರೆ ನಾನು ಈ ಸ್ಥಳವನ್ನು ಬಿಟ್ಟು ಹೊರಟುಹೋಗಬೇಕೆ ? ೨೨ ಎಂದು ಕೇಳಿದನು. ರಾಜಕುಮಾರಿ-(ಮೆಲ್ಲನೆ)-ಎಷ್ಟು ಚಾಗ್ರತೆ ಸಾಧ್ಯವೋ ಅಷ್ಟು ಜಾಗ್ರತೆಯಾಗಿ-ವಿಳಂಬವು ಆವಶ್ಯಕವಾಗಿ ಕಾಣುವುದಿಲ್ಲ. ಕೃಷಿಕ-ಆದರೆ ಪುನಃ ಎಷ್ಟು ದಿವಸದ ಬಳಿಕ ಬಂದು ನೋಡಬಹುದು ? ರಾಜಕುಮಾರಿ-ಪುನಃ ಬಂದು ನನ್ನನ್ನು ನೋಡುವುದರಿಂದ ಪ್ರಯೋ ಜನವೇನು ? ವಿಲಾಸಕುಮಾರಿ-ಯುದ್ಧವು ಕಡೆಯಾದ ಬಳಿಕ ರಾಜಕುಮಾರಿಯು ನಿನಗೆ ಯವನ ವಿಜಯಕ್ಕೆ ಪುರಸ್ಕಾರಸ್ವರೂಪವಾಗಿ ವರನ ಮಾಲೆಯನ್ನು ಹಾಕುವಳು. ಅಂಬಾಲಿಕೆ-ಸಲಿ ! ನಿನಗಿದು ಹಾಸ್ಯ ಪರಿಹಾಸ್ಯಕ್ಕೆ ಸಮಯವೆ ? ಹೋಗು, ವೀರವರ ! ಇಲ್ಲಿ ಅಕಾರಣ ನಿಂತಿರಬೇಡ. ಕೃಷಿಕನು ರಾಜಕುಮಾರಿಗೆ ಅಭಿವಾದನ ಮಾಡುವುದಕ್ಕೆ ಮುಂದಾದನು. ಅಂಬಾಲಿಕೆಯು ಸೆರಗಿನಲ್ಲಿ ಕಣ್ಣೀರೊರಸಿಕೊಂಡು ಪುನಃ, “ ಕೇಳು, ವೀರ ಯುವಕ ! ನೀನು-೨೨ ಎಂದಳು. ಅಷ್ಟರೊಳಗೆ ಕೃಷಿಕನು » ಹಿಂದುರಿಗಿ ಬಂದು ರಾಜಕುಮಾರಿಯೆದುರಿಗೆ ನಿಂತನು. ರಾಜಕುಮಾರಿಯು, “ ನೀನು ಒಂದು ದಿನ ನನ್ನನ್ನು ಶತ್ರುಗಳ ಕೈಯಿಂದ ರಕ್ಷಿಸುವುದಕ್ಕಾಗಿ ನಿನ್ನ ಪ್ರಾಣವನ್ನು ಕೊಡುವುದಕ್ಕೆ ಸಿದ್ಧನಾ ಗಿದ್ದೆ. ಅದಕ್ಕೆ ಬದುಕಾಗಿ ಈ ಉಂಗುರವನ್ನು ನಿನಗೆ ಕೊಟ್ಟಿದ್ದೇನೆ.೨) ಎಂದು ಹೇಳಿ ತನ್ನ ಬೆರಳಲ್ಲಿದ್ದ ವಜ್ರದುಂಗುರವನ್ನು ತೆಗೆದು ಕೃಷಿಕನ ಕೈಯಲ್ಲಿಟ್ಟಳು. ರಾಜಕುಮಾರಿಯ ಕೈಯಿಂದ ಯುವಕನ ಕೈ ಸ್ಪರ್ಶವಾಯಿತು ! ಅಕಸ್ಮಿಕವಾದ ವಸಂತದ್ಧ ಗಾಳಿಯಿಂದ ಮಾಧವೀಲತೆಯು ತೂಗಾಡಿದಹಾಗೆ ರಾಜಕುಮಾರಿಯ