ಏಳನೆಯ ಪರಿಚ್ಛೇದ ೬ಣ ಯುವಕನ ಭುಜವನ್ನು ತಟ್ಟಿ, 4 ವೀರತ್ವವೂ ರಸಿಕತೆಯೂ ನನ್ನಲ್ಲಿ ಹೊರತು ಮರಾರಲ್ಲಿ ಯೂ ಏಕಾಧಾರವಾಗಿರಲಿಲ್ಲವೆಂದು ತಿಳಿದಿದ್ದೆನು, ಆದರೆ ಈ ದಿನ ನಿನ್ನನ್ನು ನೋಡಿ ಎಲ್ಲದರಲ್ಲಿಯೂ ನಾನು ಸೋಲನ್ನೊಪ್ಪಿಕೊಳ್ಳುತ್ತೇನೆ ೨ ಎಂದನು. ಏ ಳ ನ ಯ ಸ ರಿ { ದ. ಕೃಷಿಕನು ಗಿರಿದುರ್ಗದಿಂದ ಹೊರಟುಹೋಗಿ ಫಕೀರನ ಬಳಿ ಇರುತ ದ್ದನು. ಸಮಾಚಾರವೇನಾದರೂ ಬಂದರೆ ಕೂಡಲೇ ಹೋಗಿ ಯುದ್ಧದಲ್ಲಿ ಸಹಾಯಮಾಡುವನು. ಎರಡು ತಿಂಗಳಾದ ಬಳಿಕ ಒಂದು ದಿನ ಸಾಯಂಕಾಲ ಅಂಬಾಲಿಕೆಯೂ ವಿಲಾಸಕುಮಾರಿಯ ದುರ್ಗಕ್ಕೆ ಹತ್ತಿರ ಇದ್ದ ನದಿಯ ತೀ'ದಲ್ಲಿ ನಿಂತು ಮಾತನಾಡುತ್ತಿದ್ದರು. ಅಂಬಾಲಿಕೆ-ನನಗೆ ಸರಿಯಾಗಿ ಹೇಳು, ಯಾವದಿನ ನಾವು ಇಲ್ಲಿಂದ ನಾಥದ್ವಾರಕ್ಕೆ ಹೊರಡುವೆವು, ಮೀನಮೇಷದ ಮಾತು ಬೇಡ ಹರಡುವ ದಿನವನ್ನು ಗೊತ್ತಾಗಿ ಹೇಳು. ಬಹಳವಾಗಿ ಬೇಡಿಕೊಂಡ ಪ್ರಕಾರ ನಾವು ಹೊರಟುಹೋಗುವುದಕ್ಕೆ ರಾಜಮಹಿಷಿಯು ಸಮ್ಮತಿಸುವಹಾಗೆ ಮಾಡಿದ್ದೇನೆ. ಸೀನು ಅಕಾರಣವಾಗಿ ಕಾಲವಿಳಂಬ ಮಾಡುತ್ತೀ, ನಾವು ಬೇಗನೆ ಇಲ್ಲಿಂದ ಹೊರಟುಹೋಗೋಣ, ನನ್ನ ಮೇಲೆ ದಯವಿಟ್ಟು ಜಾಗ್ರತೆ ಮಾಡು
- ಕೆಲವು ದಿನ ನೋಡೋಣ. ಯವನರ ಯುದ್ಧದ ಪರಿಣಾಮವು ಏನಾಗುವುದೋ, ನೋಡಬೇಡವೆ ? ೨೨
ವಿಲಾಸಕುಮಾರಿ-(ನಕ್ಕು, ಪುನಃ )-ನಾಥದ್ವಾರದ ಮಂದಿರಕ್ಕೆ ಹೋಗಿ ಸನ್ಯಾಸಿನಿಯ ವೇಷವನ್ನು ತಾಳಿಬಿಟ್ಟರೆ ದುಃಖವೆಲ್ಲಾ ನಿವಾರಣವಾ ಗುವುದದು ತಿಳಿದಿರುವಿ, ಏನು ? ಅಂಬಾಲಿಕೆ-(ನಿಟ್ಟು ಸಿರನ್ನು ಬಿಟ್ಟು)-ಸಖಿ ! ಪವಿತ್ರವಾದಾ ಸ್ಥಳ ದಲ್ಲಿ ರಾಧಾಶ್ಯಾಮನ ಪವಿತ್ರವಾದ ಪ್ರೇಮದ ಪ್ರವಾಹವು ಹರಿಯುವುದೆಂದು ಕೇಳಿದ್ದೇನೆ ಅಲ್ಲಿ ಶೋಕ ತಾಪಾದಿಗಳಿಲ್ಲವಂತೆ, ಅಲ್ಲಿಗೆ ಹೋದರೆ ನರನಾರಿ ಯರು ಅವಿಸ್ಕೃತರಾಗುವರಂತೆ !