ಪುಟ:ಕೋಹಿನೂರು.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦ ܐ ಕೋಹಿಸುರು ವಿಲಾಸಕುಮಾರಿ-ಸಖಿ ! ಕಳವಳಪಡಬೇಡ ! ನಿನ್ನಾ ಶೆಯೆಲ್ಲಾ ಪೂರ್ಣ ವಾಗುವುದು, ಇದೇನು ! ಈ ಕೋಲಾಹಲವೆಲ್ಲಿಂದ ಬಂದಿತು ! ಇದ್ದಕ್ಕಿದ್ದಹಾಗೆ ದುರ್ಗದಲ್ಲಿ ಕೋಲಾಹಲವೆದ್ದಿತು ! ಸೇನೆಯವರ ಆಸ್ಟಾಲನ ಶಬ್ದವೂ ನಾರಿಯರು ಅಳುವ ಶಬ್ದ ದೊಂದಿಗೆ ಕತ್ತಿಗಳ ಝಂಝನಾ ಶಬ್ದವೂ ಕೇಳಿ ಬಂದುವು, ವಿಲಾಸಕುಮಾರಿಯು, 66 ಯವನ ಸೈನ್ಯವು ದುರ್ಗ ವನ್ನು ಆಕ್ರಮಣ ಮಾಡಿದೆ. ಹೊರಡು, ರಾಜಕುಮಾರಿ ! ನಾವೂ ಅಲ್ಲಿಗೆ ಹೋಗೋಣ ! ಕಾಳಗುಡ್ಡನು ದುರ್ಗವನ್ನು ರಕ್ಷಿಸಿಕೊಳ್ಳುವ ಬಗೆಯನ್ನು ನೋಡೋಣ ?9 ಎಂದಳು. ಅಂಬಾಲಿಕೆ-ಈ ಅಸಮಸಾಹಸದಿಂದ ಪ್ರಯೋಜನವಿಲ್ಲ. ಯವನ ಸೈನ್ಯದವರು ನಮ್ಮ ಮೇಲೆ ಬಿದ್ದರೆ ನಮ್ಮನ್ನು ರಕ್ಷಿಸುವವರಾರು ? ವಿಲಾಸಕುಮಾರಿ-ನಿನ್ನ ಜತೆಯಲ್ಲಿ ನಾನು ಇರುವೆನು, ಈ ಚೂರಿಯ ನಿನ್ನಲ್ಲಿರಲಿ. ನಾರಿಯ ಕೈಯಲ್ಲಿ ಅಸ್ತ್ರವಿದ್ದರೆ ಶತ್ರುವು ಅವಳನೇನು ಮೂಡುವನು ? - ಹೀಗೆಂದು ಹೇಳಿ ವಿಲಾಸಕುಮಾರಿಯು ತನ್ನ ಡುಪಿನೊಳಗಿಂದೊಂದು ಹರಿತವಾದ ಚೂರಿಯನ್ನು ತೆಗೆದು ಅಂಬಾಲಿಕೆಯ ಕೈಯಲ್ಲಿ ಕೊಟ್ಟು, ಅವಳ ಕೈಯನ್ನು ಹಿಡಿದುಕೊಂಡು ನಿಸ್ಸಂಕೋಚವಾಗಿ ಮುಂದಾಗಿ ಹೋಗುತ್ತ, “ ನೋಡು, ದುರ್ಗದ ಸೈನ್ಯದವರು ಗದ್ದಲ ಹಚ್ಚಿ ಕೂಗುತ್ತ ನಾಲ್ಕು ದಿಕ್ಕಿಗೂ ಓಡುತ್ತಾರೆ, ಮತ್ತೆ, ಇದೇನು ! ದರ್ಗಕ್ಕೆ ದಕ್ಷಿಣಭಾಗದಲ್ಲಿ ನೋಡು ! ಯುದ್ಧವಿಲ್ಲದೇನೇ ಕಾಳಗುಡ್ಡನು ಬಂದಿಯಾಗಿ ಬೇಡಿಗಳನ್ನು ತೊಟ್ಟು ಕೊಂಡು ಕಾಡುಹಂದಿಯಹಾಗೆ ಅರಚುತ್ತಾನೆ ! ೨೪ ಎಂದು ಹೇಳಿದಳು. ವಾಸ್ತವಿಕವಾಗಿ ವಿಜಯಪಾಲನು ಯುದ್ದವಿಲ್ಲದೆ ಬಂದಿಯಾಗಿದ್ದನು. ಈದಿನ ಇದ್ದಕ್ಕಿದ್ದಹಾಗೆ ಯವನರು ಬಂದು ದುರ್ಗಕ್ಕೆ ಮುತ್ತಿಗೆ ಹಾಕುವ ರೆಂದು ಯಾರೂ ಅರಿಯರು, ಸೈನಿಕರೆಲ್ಲರೂ ನಿಸ್ಟ್ರೇಷ್ಟರಾಗಿ ನಿಶ್ಚಿಂತರಾಗಿದ್ದರು ವಿಜಯಪಾಲನೂ ಅಫೀಮಿನ ಪೂರ್ಣ ಮಾತ್ರೆಯನ್ನು ಸೇವಿಸಿ ದುರ್ಗದ ಹೆಬ್ಬಾ. ಗಲಲ್ಲಿ ಬೇಸಿಗೆಕಾಲದ ಸಂಜೆಯ ತನವಾದ ಗಾಳಿಯಲ್ಲಿ ನಿರ್ಭಯದಿಂದ ಕಣ್ಣು ಮುಚ್ಚಿಕೊಂಡು ಮಂಚದಮೇಲೆ ಮಲಗಿ ಎಚ್ಚರದಿಂದ ಗಾಢನಿದ್ರೆಯ ಸುಖವ (ನುಭವಿಸುತ್ತಿದ್ದನು, ಮೊದಲು ಕ್ರಮವಾಗಿ ಜೊಂಸಲು ಹತ್ತಿ ಆ ಜೊಂಪಲಲ್ಲಿ