ಪುಟ:ಕೋಹಿನೂರು.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಟನೆಯ ಪರಿಚ್ಛೇದ ೬೯ < ಮುಂದೆ ಕಾಣುವ ಪುಷ್ಕರಣಿಗೆ ಕರೆದುಕೊಂಡು ಹೋದರೆ ನಾವೇ ನೀರು ಕುಡಿಯುವೆವು, ಬಳಿಕ ಹಿಂದಕ್ಕೆ ಕರೆತರಬಹುದು, ೨೨ ವಿಲಾಸಕುಮಾರಿಯ ಅಂಬಾಲಿಕೆಯ ಕಿವಿಯಲ್ಲೇನೋ ಉಸುರಿದಳು ಪೀರಬಕ್ಷನು ಬೋಯಿಗಳನ್ನೂ ಪಹರೆಯವರನ್ನೂ ಕುರಿತು ಅಲ್ಲೇ ದಾರಿಯಲ್ಲಿ ಕಾದಿರಬೇಕೆಂದು ಹೇಳಿ ವಿಲಾಸಕುಮಾರಿಯ ಸಂಗಡ ಸರೋವರದ ಬಳಿ ಹೋದನು. ಪ್ರಕೃತಿಯು ಸ್ಥಿರವಾಗಿಯೂ ಗಂಭೀರವಾಗಿಯ ನೀರವವಾಗಿಯೂ ಇದ್ದಿತು, ಭೂಮಿಯ ಆಕಾಶವೂ ಆ ನಿರ್ಜನದಲ್ಲಿ ವಿಕಟಾಕಾರವಾಗಿ ಪ್ರೇತದಹಾಗಿದ್ದಾ ವೀರಭಕ್ಷನ ಜತೆಯಲ್ಲಿ ರಮಣಿಯರ ಕುಲಕ್ಕೆ ರಾಜ್ಯ ಹಾಗಿದ್ದ ವಿಲಾಸಕುಮಾರಿಯನ್ನು ನೋಡಿ ನೋಡಿ ಇಂತಹ ಸ್ವಭಾವಕ್ಕೆ ವಿರು ದ್ದವಾದ ದೃಶ್ಯದಿಂದ ಆಶ್ಚರ್ಯಗೊಂಡು ಮಾತಿಲ್ಲದೆ ಚಿತ್ರಿತವಾಗಿವೆಯೋ ಎಂಬಹಾಗಿದ್ದುವು ! ಚಂದ್ರನೂ ಕಮುದವೂ ಪರಸ್ಪರ ನೋಡಿ ನಗುತಿದ್ದ ಹಾಗೆ ಕಂಡಿತು ! ಕಮಲದಳವು ರಹಸ್ಯದಿಂದಲೂ ಲಜ್ಜೆಯಿಂದ ಮುಖ ತಗ್ಗಿದು ದಾಗಿ ಬೆಳದಿಂಗಳ ಮುಖದ ಪರದೆಯೊಳಗಿಂದ ಮಾತನಾಡದೆ ನೋಡುತಿದ್ದ ಹಾಗಿದ್ದಿತು ! ವಿಲಾಸಕುಮಾರಿ-ಕೈಯಲ್ಲಿ ನೀರು ಕುಡಿಯುವುದು ಹೇಗೆ ? ನನ ಗೊಂದು ಪದ್ಯದೆಲೆಯನ್ನು ತಂದುಕೊಡಿ, ನೀರು ಆಳವಿಲ್ಲವೆಂದು ತೋರುತ್ತದೆ. ಪೀರಬಕ್ಷ-ನೀರು ಆಳವಾಗಿದ್ದರೂ ನನಗೆ ಈಜು ಬರುವುದು, ನೀರ ಬ್ಲಾಗಲೀ, ಬೆಂಕಿಯಲ್ಲಾಗಲೀ, ಆಕಾಶಕ್ಕಾಗಲೀ, ಎಲ್ಲಿಗೆ ಹೋಗೆಂದರೂ ನಿನಗೋಸ್ಕರ ಹೋಗಲು ಈ ಗುಲಾಮನು ಸಿದ್ಧವಾಗಿರುವನು ! “ ನೀವು ಕುದುರೆಯಿ೦ದಿಳಿಯಬೇಕಾದ ಆವಶ್ಯಕವಿಲ್ಲ. ನಾನು ನಿಮ್ಮ ಕುದುರೆಯ ಕಡಿವಾಣವನ್ನು ಹಿಡಿದುಕೊಂಡಿರುವೆನು, ನೀವು ಕುದುರೆಯ ಮೇಲೆ ಕುಳಿತಿರುವ ಹಾಗೆ ಬಗ್ಗಿ ನೀರಿಂದ ಎಲೆಯನ್ನು ಕಿತ್ತು ಕೊಡಿ, ಅದಲ್ಲದೆ ಲಜ್ಜೆಯಿಂದ ತಲೆ ತಗ್ಗಿಸಿಕೊಂಡಿರುವ ಪದ್ಯವನ್ನೂ ಕಿತ್ತು ಕೊಡಿ, ಜೋಕೆ, ಕಮಲವನ್ನು ಕೀಳುವಾಗ ಕೈಗೆ ಮುಳ್ಳು ತಗಲಿ ಘಾಯವಾದೀತು, ನೋಡಿ ಕೊಳ್ಳಿರಿ! 99 ವಿಲಾಸಕುಮಾರಿಯು ಕುದುರೆಯ ಕಡಿವಾಣವನ್ನು ಹಿಡಿದುಕೊಂಡಳು ರಬಕ್ಷನು ಬಗ್ಗೆ ಪದ್ಯವನ್ನು ಕಿತ್ತು ಕೊಟ್ಟನು, ಅನಂತರ ಎಲೆಯನ್ನು ಕೀಳು