ಪುಟ:ಕೋಹಿನೂರು.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ> ಕೋಹಿನುರು : ವುದಕ್ಕೆ ಪುನಃ ಬಗ್ಗಿ ದನು. ವಿಲಾಸಕುಮಾರಿಯು ಬಗ್ಗಿದ ಪೀಠಬಕ್ಷನ ಕುತ್ತಿ ಗೆಗೆ ಸರಿಯಾಗಿ ಕಾಲಿಂದ ಬಲವಾಗಿ ಒದ್ದಳು. ಸೀರಬಕ್ಷನು ಗಭೀರ ಜಲ ದಲ್ಲಿ ಗಂಭೀರಶಬ್ದದಿಂದ ಬಿದ್ದು ಗಂಭೀರಸ್ವರದಿಂದ ಅರಚುತ್ತ, ಹಾ ! ಸೈತಾನಿ ! (ಪಿಶಾಚಿಯೆ !) ಎಂದು ಕೂಗಿದನು. ವಿಲಾಸಕುಮಾರಿಯು ನಿಮಿಷದಲ್ಲಿ ಪೀರಬಕ್ಷನ ಕುದುರೆಯನ್ನೇರಿ ವೇಗ ದಿಂದ ದುರ್ಗಾಭಿಮುಖವಾಗಿ ದತೋಡಿಸಿಕೊಂಡು ಹೋದಳು. ವಿಲಾಸಕುಮಾರಿಯು ಇದಕ್ಕೆ ಮೊದಲೊಂದು ತಡವೆ ಕೃಷಿಕನನ್ನು ಸಂಗಡ ಕರೆದುಕೊಂಡು ಬೆಟ್ಟವನ್ನು ಹತ್ತಿದ್ದ ಮಾರ್ಗವಾಗಿ ಹೋಗಿ ಅಲ್ಲಿ ಕುದುರೆಯನ್ನು ನಿಲ್ಲಿಸಿದಳು. ಅಲ್ಲಿ ಅವಳೊಂದು ಶಾಲ್ಮಲಿಯ ಮರದ ಮೇಲು ಭಾಗದ ಕೊಂಬೆಗೆ ತನ್ನ ಪುರುಷವೇಷದ ಉಡುಪನ್ನು ಕಟ್ಟಿದುದು ಪಾಠಕರಿಗೆ ಬ್ಲಾಪಕದಲ್ಲಿರಬಹುದು, ಅಲ್ಲಿ ವಿಲಾಸಕುಮಾರಿಯು ಪುರುಷವೇಷವನ್ನು ತಾಳಿ, ಪುನಃ ಕುದುರೆಯನ್ನೇರಿ ಹೊರಟಳು, ಸ್ವಲ್ಪ ದೂರ ಮುಂದಾಗಿ ಹೋಗಿ ನೋಡಲಾಗಿ ಆ ಬೆಟ್ಟದ ಹಾದಿಯಲ್ಲಿ ರಕ್ತದ ಧಾರೆಯೂ ಅಲ್ಲಲ್ಲಿ ಯವನರ ಮೃತದೇಹವೂ ಕಡಿದಿದ್ದ ಮಂಡಗಳೂ ಕಂಡುಬಂದುವು. ಮುಂದೆ ಹೋದ ಹಾಗೆಲ್ಲಾ ಹಾದಿಯಲ್ಲಿ ಶವಗಳು ಹೆಚ್ಚಾಗಿ ಬಿದ್ದು ಕುದುರೆಯು ನಡೆಯಲು ಕಷ್ಟವಾಯಿತು. ಮುಂದುಗಡೆ ಸ್ವಲ್ಪ ದೂರದಲ್ಲಿ ಬೆಟ್ಟಡಹಾಗೆ ನರದೇಹದ ರಾಶಿ ! ಅಷ್ಟು ಮಂದಿ ಯವನರನ್ನು ಕೊಂದವರಾರು ? ಮತ್ತೆ ಇದೇನು ? ಪ್ರಾಣಹೀನವಾಗಿ ಅಚಲವಾಗಿ ಬಿದ್ದಿದ್ದಾ ನರದೇಹಗಳ ರಾಶಿಯ ಮಧ್ಯದಲ್ಲಿ ದೇವಕಾಂತಿಯುಳ್ಳ ಮುಸಲಮಾನ ಫಕೀರ ! ಶವಗಳ ಮಧ್ಯದಲ್ಲೊಬ್ಬನೇ ಕುಳಿ ತಿರುವನೇಕೆ ? ವಿಲಾಸಕಮಾರಿಯು ಮಂತ್ರದಿಂದ ಮುದ್ದೆಯಾದವಳಹಾಗೆ ಚಲಿಸದ ದೃಷ್ಟಿಯಿಂದ ನೋಡುತಿದ್ದಳು. ಫಕೀರನು ಚೇತನವಿಲ್ಲದೊಂದು ದೇಹ ವನ್ನೆತ್ತಿ ತೊಡೆಯಮೇಲಿರಿಸಿಕೊಂಡು ಔಷಧವನ್ನು ಹಚ್ಚುತಿದ್ದಾನೆ, ನಿಶ್ಚಲ ವಾಗಿದ್ದಾ ದೇಹವು (ಶವವೋ ಅಲ್ಲವೋ, ನಾವದನ್ನು ಅರಿಯವು) ಸ್ವಲ್ಪ ಹೊ ತಿನಲ್ಲಿ ಚೈತನ್ಯವನ್ನು ಹೊಂದಿ ಕರೆಯಿತು. ಅರ್ಧ ತೆರೆದಿದ್ದ ಕಣ್ಣುಗಳೆದು bಗೆ ಫಕೀರನು ತನ್ನ ತೋರ್ಬೆಟ್ಟನ್ನು ತೋರಿಸಿ ಎರಡು ನರಾವರ್ತಿ ತಿರುಗಿಸಿ, .ಧುರವಾದ ಕಂಠಸ್ಸರದಿಂದ ನಿರ್ಜನಪರ್ವತದ ಪ್ರದೇಶವೆಲ್ಲಾ ಕೆಲೆಕೊಡುವ ಹಾಗೆ, “ ಏಳು ವತ್ಸ ! ನೀನು ಬದುಕಿ ಎಚ್ಚರವಾಗಿರುತ್ತಿ ೨” ಎಂದು ಹೇಳಿದನು