ವಿಷಯಕ್ಕೆ ಹೋಗು

ಪುಟ:ಕೋಹಿನೂರು.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನ್ನೆರಡನೆಯ ಪರಿಚ್ಛೇದ ra kwwwhy ಜmmm ಮುಖದಲ್ಲಿ ವಿಭೂತಿ ಧಾರಣೆ ಮಾಡಿದ್ದಳು. ಹಾ ! ಕಮಲದಹಾಗೆ ಕೋಮಲ ವಾಗಿದ್ದಾ ದೇಹವು ಕಠೋರವಾದಾ ಯೋಗಸಾಧನವನ್ನು ಸಹಿಸಲಾಗದೆ ? ಬ್ರಹ್ಮನು ಆ ನವೀನ ತಾಪಸಿಯ ದೇಹವನ್ನು ಬಂಗಾರದ ಕಮಲದಿಂದ ಸೃಷ್ಟಿ ಮಾಡಿದ್ದನೆ? ವಿಲಾಸಕುಮಾರಿಯು ಅಂಬಾಲಿಕೆಯನ್ನು ಕುರಿತು, ರಾಜನಂದಿನಿ ! ಸನ್ಯಾಸಿನಿಯಾಗುವ ಆಶೆಯು ತೀರಿತು. ಇನ್ನು ಹೊರಡು, ನಿನ್ನನ್ನು ರಾಜ ರಾಣಿಯಾಗಿ ಸಿಂಗರಿಸುವೆನು ೨೨ ಎಂದಳು. ಅಂಬಾಲಿಕೆ--ನಿನಗೆ ಹಾಸ್ಯ ಮಾಡುವ ಕಾಲವು ಇನ್ನೂ ಮುಗಿದಿಲ್ಲವೆ ? (• ಹಾಸ್ಯವಲ್ಲ, ಸಖಿ ! ಇದುವರೆವಿಗೂ ನಿನಗೆ ಹೇಳಲಿಲ್ಲ. ಆದರೆ ಈ ದಿನ ನಿನಗೆ ಹೇಳುತ್ತೇನೆ, ಕೇಳು-ನಾವು ಗಿರಿದುರ್ಗದಿಂದ ಇಲ್ಲಿಗೆ ಹೊರಟು ಬಂದ ದಿನವೇ ವಿಜಯಪಾಲನೂ ಮಹಾರಾಣಾ ಜಯಸಿಂಹನ ಬಳಿಗೆ ಹೊರಟ ನೆಂಬುವುದು ನೆನಪಿದೆಯಷ್ಟೆ ! ಅದೇಕೆ ಆತನು ಅಲ್ಲಿಗೆ ಹೋದ ? ನೀನು ಒಲ್ಲೆ ಯ ? ೨೨ (“ ಆ ಪ್ರಸ್ತಾಪದಿಂದ ಪ್ರಯೋಜನವೇನು ? 99 “ ಹಾಗಾದರೆ, ಹೇಳುತ್ತೇನೆ, ಕೇಳು. ರಾಜನಹಿತಿ ಅರುಂಧತಿದೆ ವಿಯು ನಿನ್ನನ್ನು ಮಹಾರಾಣಾ ಜಯಸಿಂಹನ ಮಗ ಕುಮಾರ ಅಮರಸಿಂಹನಿಗೆ ಕೊಟ್ಟು ಲಗ್ನ ವಾಗಬೇಕೆಂಬ ವಿಚಾರವನ್ನು ಕುರಿತು ಮಾತನಾಡಿಕೊಂಡು ಬರು ವದಕ್ಕೆ ವಿಜಯಪಾಲನನ್ನು ಕಳುಹಿಸಿಕೊಟ್ಟಿದ್ದಾಳೆ. ವಿಜಯಪಾಲನು ನನಗೆ ಬರೆದ ಕಾಗದವು ನಿನ್ನಿ ನದಿನ ಬಂದಿತು, ಅದನ್ನೋದಿದರೆ ಸಂಗತಿಯೆಲ್ಲಾ ಗೊತ್ತಾಗುತ್ತದೆ, ೨ ಅಂಬಾಲಿಕೆಯು ವಿಷಾದದಿಂದ ನಿಟ್ಟುಸಿರನ್ನು ಬಿಟ್ಟು, ಸಖಿ ! ನಾನೇನೋ ಚಿರಜೀವನವೂ ರಾಧಾನಾಥನ ಚರಣಗಳಲ್ಲಿ ಆತ್ಮ ಸಮರ್ಪಣೆ ಮಾಡಿದ್ದೇನೆ ಈ ಮಾತುಗಳೆಲ್ಲಾ ನನಗೇಕೆ ? ಎಂದಳು. “ ಇದುವರೆವಿಗಂತೂ ಪ್ರಪಂಚವನ್ನು ಬಿಟ್ಟು ಸನ್ಯಾಸಿಯಾಗಿದ್ದೆ. ಆದರೆ ಯಾರನ್ನು ಮರೆಯಬೇಕೆಂದು ರಾಧಾಶ್ಯಾಮನ ಆಶ್ರಯ ಮೂಡಿದೆಯೋ ಅವನ ಮೇಲಿನ ಪ್ರೇಮ ವಿಶ್ವಾಸಗಳು ನಿನ್ನ ಹೃದಯವನ್ನು ಬಿಟ್ಟು ಬೇರೇ ಹೋಗ ” “ ನೀನರಿಯೆ, ಸಖಿ ! ಆ ಪ್ರೇಮವು ರಾಧಾನಾಥನ ಅನಂತಪ್ರೇಮ Gಂದಿಗೆ ಸೇರಿಹೋಗಿದೆ, 19 ಅಲ್ಲ, ೨೨