ಪುಟ:ಕ್ರಾಂತಿ ಕಲ್ಯಾಣ.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೨

ಕ್ರಾಂತಿ ಕಲ್ಯಾಣ

ಮಾಚಿದೇವರು ಮುಂದುವರಿಸಿ, "ಅವರು ಬೆಳವಳ ಪ್ರಾಂತದವರು. ಶ್ರೀಶೈಲ ಯಾತ್ರೆಯಿಂದ ಹಿಂದಿರುಗುತ್ತಾ ಬಸವಣ್ಣನವರ ನಿರ್ವಾಸನದ ಸುದ್ದಿ ಕೇಳಿ ಶರಣರಿಗೆ ನೆರವು ನೀಡಲು ಕಲ್ಯಾಣಕ್ಕೆ ಬಂದರು. ಶೈವಶರಣ ಧರ್ಮಗಳ ಬಗೆಗೆ ಅಧ್ಯಯನ ಮಾಡಿದ್ದಾರೆ."

"ರಾಜಗೃಹಕ್ಕೆ ಹೋಗಲು ಅವರು ಒಪ್ಪುವರೆ?"

"ಒಪ್ಪಿಸುವ ಭರವಸೆ ನನಗಿದೆ. ಬಿಜ್ಜಳರಾಯರಿಗೆ ಇಂದೇ ನೀವು ಪತ್ರ ಬರೆಯಬಹುದು."

ಅದರಂತೆ ಚೆನ್ನಬಸವಣ್ಣನವರು,

"ರಾಜಗೃಹದ ದಾಸೋಹದ ವ್ಯವಸ್ಥೆಗಾಗಿ ಈ ದಿನ ಇಬ್ಬರು ಕಾರ್ಯಕರ್ತರನ್ನು ಕಳುಹಿಸಿದ್ದೇನೆ. ಧರ್ಮೋಪದೇಶಕರ ಸ್ಥಾನಕ್ಕೆ ಬ್ರಹ್ಮೇಂದ್ರ ಶಿವಯೋಗಿ ಎಂಬ ಹೆಸರಿನ ಜಂಗಮರಿದ್ದಾರೆ. ನಿಮಗೆ ಒಪ್ಪಿಗೆಯಾದರೆ ಅವರು ರಾಜಗೃಹದಲ್ಲಿರಲು ಅನುಮತಿಯ ಆಜ್ಞೆ ಕಳುಹಿಸಿಕೊಡಬೇಕಾಗಿ ಕೋರುತ್ತೇನೆ. ಅವರ ಅಂತೇವಾಸಿ ಹರೀಶರುದ್ರ ಎಂಬ ಹೆಸರಿನ ಇನ್ನೊಬ್ಬ ತರುಣ ಜಂಗಮನೂ ಸಂಗಡಿರಬೇಕಾಗುವುದು," -ಎಂದು ಓಲೆ ಬರೆದು ಕಳುಹಿಸಿದರು.

ಬಿಜ್ಜಳನು ಸಲಹೆಗೆ ಒಪ್ಪಿ ಮರುದಿನವೇ, ಬ್ರಹ್ಮೇಂದ್ರ ಶಿವಯೋಗಿಯನ್ನು ಚಾಲುಕ್ಯ ಚಕ್ರೇಶ್ವರ ಜಗದೇಕಮಲ್ಲರಸರ ಧರ್ಮೋಪದೇಶಕರಾಗಿ ನೇಮಿಸುವ ನಿರೂಪವನ್ನೂ, ಅವರಿಗೂ ಅವರ ಶಿಷ್ಯನಿಗೂ ರಾಜಗೃಹದಲ್ಲಿ ಬಿಡಾರವೇರ್ಪಡಿಸಲು ಮನೆಹೆಗ್ಗಡೆಗೆ ಆಜ್ಞಾಪತ್ರವನ್ನೂ ಬರೆಯಿಸಿ ಚೆನ್ನಬಸವಣ್ಣನವರಿಗೆ ಕಳುಹಿಸಿದನು.

ಈ ವಿಚಾರ ತಿಳಿದ ಕೂಡಲೆ ಮಾಚಿದೇವರು ಬ್ರಹೇಂದ್ರ ಶಿವಯೋಗಿಗೆ ಹೇಳಿ ಕಳುಹಿಸಿದರು. ಈ ಅವಧಿಯಲ್ಲಿ ಬೊಮ್ಮರಸನಿಗೆ ಕೃತಕ ಗಡ್ಡ ಮೀಸೆಗಳು ವಾಸ್ತವವೆನಿಸುವಷ್ಟು ಸಹಜವಾಗಿ ಕಾಣುತ್ತಿದ್ದವು. ಹಗಲೆಲ್ಲ ಕಟ್ಟಿಕೊಂಡಿದ್ದು ರಾತ್ರಿ ಮಲಗುವಾಗ ತೆಗೆದಿಟ್ಟು ಪುನಃ ಎದ್ದಾಗ ಕೆಲವೇ ಕ್ಷಣಗಳಲ್ಲಿ ಕಟ್ಟಿಕೊಳ್ಳುವುದನ್ನು ಅವನು ಅಭ್ಯಾಸ ಮಾಡಿಕೊಂಡನು.

ದಿನದಿನಕ್ಕೆ ಉತ್ತಮವಾಗುತ್ತಿದ್ದ ಈ ಕೈಚಳಕವನ್ನು ಗಮನಿಸಿದ ಬ್ರಹ್ಮಶಿವನು "ಹಿಂದಿನ ಯಾವುದೋ ಜನ್ಮದಲ್ಲಿ ನೀವು ರಾವಣ ಸನ್ಯಾಸಿಯಾಗಿರಬೇಕು. ಅದರಿಂದಲೆ ಈ ಕೃತಕ ಗಡ್ಡ ಮೀಸೆಗಳು ನಿಮಗೆ ಇಷ್ಟು ಒಪ್ಪುತ್ತವೆ," ಎಂದು ಹಾಸ್ಯ ಮಾಡಿದ್ದನು.

"ಸೀತೆಯನ್ನು ಕದ್ದೊಯ್ಯಲು ರಾವಣನಿಗೆ ಸಹಾಯ ಮಾಡಿದ ಮಾರೀಚ ಋಷಿಯ ವಂಶದಲ್ಲಿ ಹುಟ್ಟಿದವನು ನೀನು, ಬ್ರಹ್ಮಶಿವ. ಅದರಿಂದಲೆ ಗಡ್ಡ ಮೀಸೆ