ಪುಟ:ಕ್ರಾಂತಿ ಕಲ್ಯಾಣ.pdf/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೩೩


“ಪ್ರಯೋಗದ ಜನಪ್ರಿಯತೆಯಿಂದ ಕ್ರಮಿತರಿಗೆ ಪರಮಾನಂದವಾಗಿದೆ. ಮಂತ್ರಿ ಮಂಡಲಕ್ಕೆ ಚೆನ್ನಬಸವಣ್ಣನವರ ನೇಮಕದಿಂದ ತಮಗಾದ ಅಪಮಾನವನ್ನು ಈಗ ಅವರು ಮರೆತಿದ್ದಾರೆ.” -ಎಂದು ಪತ್ರ ಮುಗಿಯುತ್ತದೆ.

ಪಟ್ಟಾಭಿಷೇಕಕ್ಕಾಗಿ ಬಂದಿದ್ದ ಅತಿಥಿಗಳು ಷಷ್ಠಿಯ ದಿನ ಮುಂಜಾವಿನಲ್ಲಿ ಬಿಜ್ಜಳನಿಂದ ಸನ್ಮಾನಿತರಾಗಿ ಸುಸ್ಥಾನಗಳಿಗೆ ತೆರಳಿದರು. ಬಿಜ್ಜಳನಿಗೆ ಆಪ್ತರಾದ ಕೆಲವು ಮಂದಿ ಸಾಮಂತರು, ನಾರಣಕ್ರಮಿತ, ಚಾಲುಕ್ಯರಾಣಿ ಕಾಮೇಶ್ವರಿ, ಇವರು ಮಾತ್ರವೇ ಕಲಚೂರ್ಯ ಅರಮನೆಯಲ್ಲಿ ಉಳಿದರು.

ಆ ದಿನವೇ ಕರ್ಹಾಡಕ್ಕೆ ಪ್ರಯಾಣಮಾಡಿ, ಪ್ರೇಮಾರ್ಣವನ ಪಟ್ಟಬಂಧೋತ್ಸವ ಗೊತ್ತಾದ ಮೇಲೆ ಅಣ್ಣ ವಿಜಯಾರ್ಕನೊಡನೆ ಕಲ್ಯಾಣಕ್ಕೆ ಬರುವುದು ಕಾಮೇಶ್ವರಿಯ ಇಚ್ಛೆಯಾಗಿತ್ತು.

ಆದರೆ ಬಿಜ್ಜಳನು ಒಪ್ಪಲಿಲ್ಲ. "ದಶಮಿ ಇನ್ನು ನಾಲ್ಕು ದಿನವಿದೆ. ಅಲ್ಲಿಯವರೆಗೆ ನಮ್ಮ ಅತಿಥಿಯಾಗಿದ್ದು ಆಮೇಲೆ ಹೋಗಬಹುದು,” ಎಂದು ಒತ್ತಾಯ ಪಡಿಸಿದನು. ಕಾಮೇಶ್ವರಿ ನಿರ್ವಾಹವಿಲ್ಲದೆ ಒಪ್ಪಿಕೊಂಡಳು.

***

“ರಾಜಸೂಯಯಾಗ ಮುಗಿದಮೇಲೆ ದ್ಯೂತಸಭೆ ನಡೆಸುವುದು ಕ್ಷತ್ರಿಯ ಸಂಪ್ರದಾಯವೆಂದು ಮಹಾಭಾರತ ಹೇಳುತ್ತದೆ. ಅಂದಿನ ರಾಜಸೂಯವೇ ಇಂದಿನ ಪಟ್ಟಾಭಿಷೇಕ. ನವಮಿಯಂದು ಸಭಾಂಗಣ ಅಕ್ಷಮ್ಯೂತಕ್ಕೆ ಅಣಿಯಾಗಲಿ. ಸ್ತ್ರೀ ಪುರುಷ ಭೇದವಿಲ್ಲದೆ ಇಷ್ಟವುಳ್ಳವರೆಲ್ಲ ಬಂದು ಅದೃಷ್ಟ ಪರೀಕ್ಷೆ ಮಾಡಬಹುದು.”

ಬಿಜ್ಜಳನ ಆಜ್ಞೆನಾರಣಕ್ರಮಿತನನ್ನಾಗಲಿ, ಪರಿವಾರದ ಸಾಮಂತರನ್ನಾಗಲಿ ಅಚ್ಚರಿಗೊಳಿಸಲಿಲ್ಲ. ಉತ್ಸವ ಕಾಲಗಳಲ್ಲಿ ಹಣದ ಪರಿಮಿತಿಯಿಲ್ಲದೆ ಜೂಜಾಟವಾಡುವುದು ಆಗ ಚಾಲುಕ್ಯ ರಾಜ್ಯದ ಸಾಮಂತ ಶ್ರೀಮಂತರ ಪದ್ಧತಿಯಾಗಿತ್ತು. ಸರ್ವತ್ರ ಪ್ರಚಾರದಲ್ಲಿದ್ದ ಈ ಹಳೆಯ ಪದ್ಧತಿಗೆ ರಾಜಮನ್ನಣೆ ದೊರಕಿತೆಂದು ಅವರು ಸಂತುಷ್ಟರಾದರು.

“ಆಜ್ಞೆಯಂತೆ ಎಲ್ಲವನ್ನೂ ಏರ್ಪಡಿಸುತ್ತೇನೆ, ಸಭಿಕರ ಹೆಸರನ್ನು ದಯಮಾಡಿ ಪ್ರಭುಗಳೇ ಸೂಚಿಸಿದರೆ......” ಕ್ರಮಿತನು ಮಾತು ಮುಗಿಸದೆ ಬಿಜ್ಜಳನ ಕಡೆ ನೋಡಿದನು.

“ಕರ್ಣದೇವನೇಕಾಗಬಾರದು?”

ಬಿಜ್ಜಳನ ಸಲಹೆಯನ್ನು ವಿರೋಧಿಸುವುದು ಕ್ರಮಿತನ ಉದ್ದೇಶವಾಗಿರಲಿಲ್ಲ. ಆದರೂ ಕರ್ಣದೇವನತಹ ಅಸಂಯತ ಪಾನಾಸಕ್ತ ಉದ್ಧಟ ಕ್ಷತ್ರಿಯನ ಅಧ್ಯಕ್ಷತೆಯಲ್ಲಿ