ಪುಟ:ಕ್ರಾಂತಿ ಕಲ್ಯಾಣ.pdf/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೩೭


ಹೋಗಿದ್ದರು. ಕ್ರಮಿತನ ಕಿಡಿಗಣ್ಣೆದುರಿಗೆ ನಿಲ್ಲುವ ಧೈರ್ಯ ಗಣಿಕಾವಾಸದ ಧೂರ್ತೆಯರಿಗೂ ಇರಲಿಲ್ಲ.

ಕ್ರಮಿತನು ಕಾಮೇಶ್ವರಿ ಸುಂದರವಲ್ಲಿಯರನ್ನು ಹತ್ತಿರ ಕರೆದುಕೊಂಡು ಬಂದಾಗ ಬಿಜ್ಜಳನು, “ರಾಣಿಯವರು ಪಗಡೆಯಾಟಕ್ಕೆ ಬಂದದ್ದು, ಸಂತೋಷ. ಪುರುಷರ ನಡುವೆ ಏಕಾಕಿನಿಯಾದೆನೆಂದು ಹಂಬಲಿಸುತ್ತಿದ್ದ ಸಿರಿದೇವಿ ಈಗ ಸಖಿಯರನ್ನು ಪಡೆದಳು,” ಎಂದು ನಗೆಯಾಡಿದನು.

“ಪಗಡೆಯಾಡುವುದು ಸರ್ವಾಧಿಕಾರಿಗಳ ಇಚ್ಚೆಯಾದರೆ ನಾನು ಸಿದ್ದ,”ಎಂದು ಕಾಮೇಶ್ವರಿ ಅಗ್ಗಳನ ಮುಖ ನೋಡಿದಳು. ಸಾವಿರ ವರಹಗಳ ಥೈಲಿಯೊಂದನ್ನು ಕರಣಿಕನ ಮುಂದಿಟ್ಟು ಅಗ್ಗಳನು, ೧೦೦ ವರಹಗಳ ೧೦ ಗುರುತು ಬಿಲ್ಲೆಗಳನ್ನು ಕೊಂಡು ಕಾಮೇಶ್ವರಿಗೆ ಕೊಟ್ಟನು.

ಇಂತಹ ಸಂದರ್ಭಕ್ಕಾಗಿಯೇ ಕ್ರಮಿತನು ಜರಿಹೂವಿನ ಕುಸುರಿ ಕೆಲಸದ ದಿಂಬುಗಳು ಹಾಕಿದ ಹಾಸಂಗಿಯೊಂದನ್ನು ತೆರವಾಗಿಟ್ಟಿದ್ದನು. ಬಿಜ್ಜಳ ಕಾಮೇಶ್ವರಿ ಸುಂದರವಲ್ಲಿಯರು ಹಾಸಂಗಿಯ ಸುತ್ತ ದಿಂಬುಗಳಿಗೊರಗಿ ಪಗಡೆಯಾಟಕ್ಕೆ ಕುಳಿತರು. ಸುಂದರವಲ್ಲಿ ಅಪೇಕ್ಷಿಸಿದಂತೆ ೧೦೦ ವರಹಗಳ ಎರಡು ಗುರುತು ಬಿಲ್ಲೆಗಳನ್ನು ಸೋಮೇಶ್ವರನು ತಂದುಕೊಟ್ಟನು.

ಪಗಡೆಯಾಟದಲ್ಲಿ ಸುಂದರವಲ್ಲಿಯ ನೈಪುಣ್ಯ ಅವಳು ಕಲಚೂರ್ಯ ಅರಮನೆಗೆ ಬಂದ ಎರಡೇ ದಿನಗಳಲ್ಲಿ ಅಂತಃಪುರವಾಸಿನಿಯರೆಲ್ಲರ ಮನೆಮಾತಾಗಿತ್ತು. ಅನುಕ್ರಮವಾಗಿ ಅವಳು ಬಿಜ್ಜಳನ ರಾಣಿಯರನ್ನು, ಸೊಸೆಯರನ್ನು ಆಟದಲ್ಲಿ ಸೋಲಿಸಿದ್ದಳು. “ಮಾವನವರೊಬ್ಬರು ಉಳಿದಿದ್ದಾರೆ. ಇಂದು ಅವರನ್ನೂ ಸೋಲಿಸುತ್ತೇನೆ,” ಎಂಬ ನಿರ್ಧಾರದಿಂದ ಅವಳು ಆಟಕ್ಕೆ ಕುಳಿತಳು. ಮೊದಲ ಆಟ ಸೋತರೂ ಎರಡನೆಯ ಆಟ ಗೆಲ್ಲುತ್ತೇನೆ, ಎಂದು ಅವಳ ವಿಶ್ವಾಸ. ಅದರಿಂದಲೆ ಎರಡು ಬಿಲ್ಲೆಗಳನ್ನು ಮಾತ್ರ ತರಿಸಿಕೊಂಡಿದ್ದಳು.

ಆದರೆ ಮೊದಲ ಆಟದಲ್ಲಿಯೇ ಸುಂದರವಲ್ಲಿ ಗೆದ್ದು ಬಿಜ್ಜಳ ಕಾಮೇಶ್ವರಿಯ ರಿಂದ ೧೦೦ ವರಹಗಳ ಎರಡು ಬಿಲ್ಲೆಗಳನ್ನು ಪಡೆದಳು. ಎರಡನೆಯ ಆಟದಲ್ಲಿ ಕಾಮೇಶ್ವರಿ ಗೆದ್ದಳು.

“ಪಗಡೆ ಹೆಂಗಸರ ಆಟ. ಪುರುಷರು ಅದರಲ್ಲಿ ಗೆಲ್ಲುವುದಿಲ್ಲ,”-ಎನ್ನುತ್ತ ಬಿಜ್ಜಳನು ಮೂರನೆಯ ಆಟ ಪ್ರಾರಂಭಿಸಿದನು.

ಕಾಮೇಶ್ವರಿ ಬಿಜ್ಜಳರಾರರುರ ಪಗಡೆಯಾಟದ ಸುದ್ದಿ ತಿಳಿದಾಗ ಸಭಾಂಗಣದಲ್ಲಿದ್ದವರು ಆಟ ಬಿಟ್ಟು ಬಂದು, ನೋಡುತ್ತ ನಿಂತರು. ಮೂರನೆಯ