ಪುಟ:ಕ್ರಾಂತಿ ಕಲ್ಯಾಣ.pdf/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೮

ಕ್ರಾಂತಿ ಕಲ್ಯಾಣ

ಮುಗಿಸುವುದು ಉಚಿತವಾಗಿತ್ತು, ಬಿಜ್ಜಳರಾಯರೆ. ನೀವು ಈ ಅವೇಳೆಯಲ್ಲಿ, ನನ್ನ ಬಿಡಾರಕ್ಕೆ ಬಂದು...." -ಎಂದು ಹೇಳುತ್ತ ಗಂಟಲು ಹಿಡಿದಂತಾಗಿ ಅರ್ಧದಲ್ಲಿ ನಿಲ್ಲಿಸಿದಳು.

"ಆತ್ಮಾರ್ಪಣ ಮಾಡಿದ ಗರುಡನಿಗೆ ತನ್ನ ಒಡತಿಯ ವಾಸಗೃಹವನ್ನು ಎಲ್ಲ ಕಾಲಗಳಲ್ಲಿಯೂ ಪ್ರವೇಶಿಸುವ ಅಧಿಕಾರವಿದೆ, ರಾಣಿ. ಆ ವಿಚಾರದಲ್ಲಿ ಅವನು ಪಾಲಿಸಬೇಕಾದ ಒಂದೇ ಒಂದು ನಿಬಂಧನೆ ಎಂದರೆ......" -ಎಂದು ನುಡಿದು ಬಿಜ್ಜಳನು ಅರ್ಥಗರ್ಭಿತವಾಗಿ ಕಾಮೇಶ್ವರಿಯ ಮುಖ ನೋಡಿದನು.

"ನಿಬಂಧನೆಯೇನು?" -ಕಾಮೇಶ್ವರಿ ಕೇಳಿದನು.

"ರಹಸ್ಯ ರಕ್ಷಣೆ. ನಾನು ಆ ಕಾರ್ಯ ಮಾಡಿದ್ದೇನೆ, ರಾಣಿ. ನೀವು ಮೊಗಶಾಲೆಯಲ್ಲಿ ನಿಂತಿದ್ದಾಗ ನಿಮ್ಮ ವಾಸಗೃಹದ ಬಾಗಿಲು ಮುಚ್ಚಿ ಹೊರಗೆ ಚಿಲುಕ ಹಾಕಿದೆ. ನಾನು ಇಲ್ಲಿಗೆ ಬಂದದ್ದು ಯಾರಿಗೂ ತಿಳಿಯದು. ಅರಮನೆಯ ಈ ಭಾಗಕ್ಕೆ ಯಾರನ್ನೂ ಬಿಡದಂತೆ ಭಟರಿಗೆ ಆಜ್ಞೆ ಮಾಡಿದ್ದೇನೆ. ನಮ್ಮ ರಹಸ್ಯ ಸಂಧಾನ, ನಾವು ಅಪೇಕ್ಷಿಸಿದಷ್ಟು ಕಾಲ ನಿರ್ವಿಘ್ನವಾಗಿ ನಡೆಯಬಹುದು."

ಬಿಜ್ಜಳನ ನುಡಿ ಕೇಳಿ ಕಾಮೇಶ್ವರಿಗೆ ತನ್ನ ವಿಪತ್ತಿನ ಅರಿವಾಯಿತು. ಹೆಣ್ಣಿಗೆ ಸಹಜವಾದ ಚತುರತೆಯಿಂದ ಅವಳು,

"ನಮ್ಮ ರಹಸ್ಯ ಸಂಧಾನ ನಾಳಿನವರೆಗೆ ತಡೆಯಬಹುದಾಗಿತ್ತು. ಅದಕ್ಕಾಗಿ ಈಗಲೇ ನೀವು ನನ್ನನ್ನು ನೋಡುವ ಅವಸರವೇನು?" ಎಂದಳು.

"ನಾನು ಅದಕ್ಕೆ ಉತ್ತರ ಹೇಳಲು ಶಕ್ತನಲ್ಲ, ರಾಣಿ. ನೀವೇ ಅದನ್ನು ನಿರ್ಧರಿಸಬೇಕು."

"ನಿಮ್ಮ ರಹಸ್ಯ ಸಂಧಾನವೇನೆಂಬುದನ್ನು ತಿಳಿಯದೆ ನಾನು ಹೇಗೆ ನಿರ್ಧರಿಸಲಿ?"

ನಿರುಪಾಯನಂತೆ ನಿಟ್ಟುಸಿರಿಟ್ಟು ಬಿಜ್ಜಳನು, "ಪಗಡೆಯಾಟದಲ್ಲಿ ನೀವು ಮೆರೆಸಿದ ಚತುರತೆ ಸಾಹಸಗಳು ಈಗೇನಾದವು, ರಾಣಿ? ದ್ಯೂತದ ಪಣವಾಗಿ ನೀವು ಪ್ರಯಾಸವಿಲ್ಲದೆ ನಿಮ್ಮ ಗರುಡನನ್ನು ಪಡೆದಿರಿ. ಇಲ್ಲವೆ ಅದಕ್ಕಾಗಿ ನೀವೇನು ಮಾಡಬೇಕಾಗಿತ್ತು ಗೊತ್ತೆ?" ಎಂದನು.

"ಗರುಡ ಸಂಪ್ರದಾಯದ ಹೆಸರು ಕೇಳಿದ್ದೇನೆ, ಅದರ ವಿಚಾರ ನನಗೇನೂ ತಿಳಿಯದು." -ಲಜ್ಜೆ ಸಂಕೋಚಗಳನ್ನು ಬದಿಗಿಟ್ಟು ಕಾಮೇಶ್ವರಿ ಹೇಳಿದಳು.

"ದಕ್ಷಿಣಾಪಥದಲ್ಲಿ ವಿಖ್ಯಾತವಾದ ಚೋಳ ಪಾಂಡ್ಯ ಗಂಗಕುಲದ ಅರಸರ ಅಂತಃಪುರವಾಸಿನಿಯರು ಗರುಡ ಸಂಪ್ರದಾಯವನ್ನು ಮೊದಲಿಗೆ ಆಚರಣೆಗೆ