ಪುಟ:ಕ್ರಾಂತಿ ಕಲ್ಯಾಣ.pdf/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೪೩


ವಂಚಿಸುವ ಪರಮೋದ್ದೇಶದಿಂದ ಬುದ್ಧಿಜೀವಿ ತಾತ್ವಿಕರು ಕಲ್ಪಿಸಿಕೊಂಡ ಸಾಧನಗಳೊಂದೂ, ಲೋಕಸಂಗ್ರಹದ ಹೊರತಾಗಿ ಅವುಗಳಿಗೆ ಮತ್ತಾವ ನೆಲೆಯೂ ಇಲ್ಲವೆಂದು ಆಗಿನ ಅನೇಕ ಬುದ್ಧಿಜೀವಿಗಳಂತೆ ಜಗದೇಕ ಮಲ್ಲನೂ ನಂಬಿದ್ದನು.

ಜೀವನದಲ್ಲಿ ಜಿಗುಪ್ಸೆಯಿಂದ, ಕುರವತ್ತಿಯ ಸಮೀಪ ತುಂಗಭದ್ರೆಯ ತಟದಲ್ಲಿ ನಿಂತು,

“ಜಾನಾಮಿ ಕರಿಕರ್ಣಾಂತ ಚಂಚಲಂ ಹತಜೀವಿತಂ,
ಮಮ ನಾನ್ಯತ್ರ ವಿಶ್ವಾಸಃ ಪಾರ್ವತೀವಿತೇಶ್ವರಾತ್.”
ಉತ್ಸಂಗೇ ತುಂಬಭದ್ರಾಯಾ ತದೇಕ ಶಿವಚಿಂತಯಾ
ವಾಂಛಾಮ್ಯಹಂ ನಿರಾಕರ್ತು೦ ದೇಹಗ್ರಹ ವಿಡಂಬನಂ"*

ಎಂಬ ದೃಢ ನಿರ್ಧಾರದಿಂದ ಜಲಪ್ರವೇಶಮಾಡಿ ಪ್ರಾಣಗಳನ್ನು ತೊರೆದ ಆಹವಮಲ್ಲ ಸೋಮೇಶ್ವರನ ಅನಂತರ ಕಳೆದ ಚಾಲುಕ್ಯ ವಂಶದ ಮೂರು ತಲೆ ಮಾರುಗಳಲ್ಲಿ ಜನತೆಯಂತೆ, ಪ್ರಭು ಸಾಮಂತರ ಧಾರ್ಮಿಕ ಭಾವನೆಯಲ್ಲಿಯೂ ಸಾಕಾದಷ್ಟು ಬದಲಾವಣೆಯಾಗಿತ್ತು. ಭುವನೈಕಮಲ್ಲ ಸೋಮೇಶ್ವರ ಮತ್ತು ಆರನೆಯ ವಿಕ್ರಮಾದಿತ್ಯರ ಧರ್ಮಶ್ರದ್ಧೆ ರಾಜನೀತಿ ಕೌಶಲಗಳು, ಸರ್ವಜ್ಞ ಚಕ್ರವರ್ತಿ ಮುಮ್ಮಡಿ ಸೋಮೇಶ್ವರನ ವಿದ್ಯಾಭಿಮಾನ ಮತ್ತು ಪ್ರಚುರ ಪಾಂಡಿತ್ಯ, ಇವುಗಳು ಪೆರ್ಮ ಜಗದೇಕಮಲ್ಲನ ಕಾಲಕ್ಕೆ ಜೀರ್ಣವಾಗಿ ತ್ರೈಲೋಕಮಲ್ಲ ಮುಮ್ಮಡಿ ತೈಲಪನ ಕಾಲಕ್ಕೆ ನಾಮಾವಶೇಷವಾಗಿ ಉಳಿದವು. ತೈಲಪನಂತೆ ಅವನ ಸಾಮಂತ ಮಾಂಡಲಿಕರು ಸ್ವಾರ್ಥಪ್ರಿಯರೂ ವಿಲಾಸೋಪಭೋಗಗಳಲ್ಲಿ ನಿರತರೂ, ಪ್ರಯೋಜನವಾದಿಗಳೂ ಆಗಿದ್ದರು. ಈ ಧರ್ಮ ಬಾಹಿರ ಅನೀತಿ ವಾತಾವರಣದಲ್ಲಿ ಬೆಳೆದ ಜಗದೇಕಮಲ್ಲನೂ ಅವರಂತೆಯೇ ಆಗಿದ್ದನು. ಚಾಲುಕ್ಯ ಅರಸರ ಈ ವಿಲಾಸ ಪ್ರವೃತ್ತಿ ಬಿಜ್ಜಳನ ರಾಜ್ಯಾಪಹಾರಕ್ಕೆ ಸಹಾಯವಾಯಿತು. ಮುಮ್ಮಡಿ ತೈಲಪನ ಮರಣಾನಂತರ ಬಿಜ್ಜಳನು, ತೈಲಪನ ಸಹೋದರ ಜಗದೇಕಮಲ್ಲನನ್ನು ಹೆಸರಿಗೆ ಸಿಂಹಾಸನದಲ್ಲಿ ಕುಳ್ಳಿರಿಸಿ ತಾನೇ ರಾಜ್ಯವಾಳಲು ಪ್ರಾರಂಭಿಸಿದನು.

ರಾಜಗೃಹದ ವಿಲಾಸ ವೈಭವಗಳ ನಡುವೆ, ರಾಜಬಂದಿಯಾಗಿ ಆರು

__________

  • ಆನೆಯ ಕಿವಿಯಂತೆ ಚಂಚಲ, ನನ್ನ ಹತಜೀವನ ; :ಪಾರ್ವತೀಪತಿಯನುಳಿದು ಮತ್ತಾವ ದೈವದಲ್ಲಿಯೂ
ನನಗೆ ವಿಶ್ವಾಸವಿಲ್ಲ.
ತುಂಗಭದ್ರೆಯ ಮಡಿಲಲ್ಲಿ, ಶಿವನನ್ನು ಚಿಂತಿಸುತ್ತ
ದೇಹವೆಂಬ ಬೆಂತರನನ್ನು ತೊರೆಯಲಿಚ್ಛಿಸುತ್ತೇನೆ “ವಿಕ್ರಮಾಂಕ ದೇವಚರಿತ” ಸರ್ಗ ೪.