ಪುಟ:ಕ್ರಾಂತಿ ಕಲ್ಯಾಣ.pdf/೪೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೯೬ ಕ್ರಾಂತಿ ಕಲ್ಯಾಣ ಚಾವಡಿಯ ಕಡೆಯಿಂದ ನಾಲ್ವರು ಓಡುತ್ತ ಅಂಗಡಿ ಬೀದಿಗೆ ಬಂದು, 'ಅನಾಹುತ ಲೂಟಿ ! ಬಾಗಿಲು ಮುಚ್ಚಿರಿ !” ಎಂದು ಕೂಗಿಕೊಂಡರು. ಕೆಲವು ದಿನಗಳಿಂದ ನಗರದಲ್ಲಿ ಮಾಧವ ನಾಯಕನ ಸೈನಿಕರ ತಿರುಗಾಟ ಹೆಚ್ಚುತ್ತಿರುವುದನ್ನು ಕಂಡು ಬೆದರಿದ ಜನ, ನಗರದಲ್ಲಿ ಎಲ್ಲಿಯೋ ಗಲಭೇ ಲೂಟಿ ನಡೆಯುತ್ತಿರಬೇಕೆಂದು ಭಾವಿಸಿ ಅಂಗಡಿಗಳನ್ನು ಮುಚ್ಚುತ್ತಿದ್ದಾರೆ.” ಮಾಚಿದೇವರು ನಕ್ಕು ನುಡಿದರು : "ವಾಣಿಜ್ಯ ವ್ಯವಹಾರಗಳು ಲಕ್ಷ್ಮೀ ಸರಸ್ವತಿಯರಂತೆ, ಶೆಟ್ಟರೆ. ವಾಣಿಜ್ಯದಲ್ಲಿ ಚತುರರಾದ ನೀವು ವ್ಯವಹಾರದಲ್ಲಿ ಮಂದಮತಿಗಳು. ಮಾಧವ ನಾಯಕನ ಸೈನ್ಯ ನಗರಕ್ಕೆ ಬಂದಿರುವುದು ನಿಮ್ಮ ರಕ್ಷಣೆಗಾಗಿಯೇ ಅಲ್ಲವೆ?” ಎಂದರು. - ಹರದನ ಸಂಗಡಿದ್ದ ಗೆಳೆಯ ನಡುವೆ ಬಂದು ಹೇಳಿದನು : “ರಕ್ಷಣೆಗೋ ಭಕ್ಷಣೆಗೋ ಯಾರು ಕಂಡರು, ಅಯ್ಯನವರೆ, ಸರ್ವಾಧಿಕಾರಿಗಳು ಮಾಧವ ನಾಯಕನನ್ನು ಭಾಗಾನಗರದಿಂದ ಕರೆಸಿದ್ದು ಕಲ್ಯಾಣದ ಮಠ ಮಂದಿರಗಳ ವಿನಾಶಕ್ಕಾಗಿಯೇ ಎಂದು ಸುದ್ದಿ ಹರಡಿದೆ. ಈ ಸಂಜೆ ಧರ್ಮಾಧಿಕರಣದ ಚಾವಡಿಯಲ್ಲಿ ರಹಸ್ಯ ಸಭೆ ನಡೆದಾಗ ಆ ವಿಚಾರ ಚರ್ಚಿಸಲ್ಪಟ್ಟಿತಂತೆ.”

  • ಮಾಚಿದೇವರ ತೀವ್ರ ದೃಷ್ಟಿ ಅಪರಿಚಿತ ಹರದನ ಕಡೆ ತಿರುಗಿತು. ಸಂಜೆ ನಡೆದ ರಹಸ್ಯ ಸಭೆಯ ವಿಚಾರ ಇಷ್ಟು ಬೇಗ ನಿನಗೆ ತಿಳಿದದ್ದು ಹೇಗೆ, ತಮ್ಮ ಹಲ್ಲಿ ಶಕುನ ನುಡಿಯಿತೆ? ಅಥವಾ ನೀನೇ ಹಲ್ಲಿಯಾಗಿ ಸಭಾಂಗಣದ ಸೂರಿನಲ್ಲಿ ಕುಳಿತಿದ್ದೆಯ?” ಎಂದರು ಅವರು.

“ರಾಜಸಭೆಯ ರಹಸ್ಯ, ರಹಸ್ಯವಾಗಿಯೇ ಉಳಿಯುವುದು ಸಭೆ ಮುಗಿಯುವವರೆಗೇ, ಅಯ್ಯನವರೆ. ಆಮೇಲೆ ಅದು ರಹಸ್ಯವೆಂದೇ ಕಿವಿಯಿಂದ ಕಿವಿಗೆ ಪ್ರಚಾರವಾಗುವುದು. ಮಠ ಮಂದಿರಗಳನ್ನು ನಾಶಮಾಡುವ ವಿಚಾರ ಮಾಧವ ನಾಯಕನು ಸಭೆಯ ಮುಂದಿಟ್ಟಾಗ ಕರ್ಣದೇವರಸರು ವಿರೋಧಿಸಿದರಂತೆ, ಮಾತಿಗೆ ಮಾತು ಬೆಳೆದು ಕರ್ಣದೇವರಸರು ಕೋಪದಿಂದ ಸಭೆಯನ್ನು ಬಿಟ್ಟು ಹೋದರಂತೆ.” -ಹರದನು ದನಿ ತಗ್ಗಿಸಿ ಉತ್ತರ ಕೊಟ್ಟನು. “ಆಮೇಲೆ ಸಭೆಯಲ್ಲಿ ಏನು ನಡೆಯಿತಂತೆ?” “ಸರ್ವಾಧಿಕಾರಿಗಳು ಸಲಹೆಯನ್ನು ಅನುಮೋದಿಸಿ ಅದನ್ನು ಕಾರ್ಯಗತ ಮಾಡುವ ಹೊಣೆಯನ್ನು ಮಾಧವ ನಾಯಕನಿಗೇ ವಹಿಸಿದರಂತೆ.” “ಮಠ ಮಂದಿರಗಳು ನಾಶವಾದರೆ ನಿಮಗಾದ ನಷ್ಟವೇನು? ಅದಕ್ಕೆ