ಪುಟ:ಕ್ರಾಂತಿ ಕಲ್ಯಾಣ.pdf/೪೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೪ ಕ್ರಾಂತಿ ಕಲ್ಯಾಣ ಬೀರಿದರು. ಶರಣರು ನೀರವವಾಗಿ ಕಣ್ಣೀರಿಡುತ್ತಿದ್ದರು, ಕಲ್ಯಾಣದಲ್ಲಿ ಉಳಿದ ತಮ್ಮವರಿಗಾಗಿ, ಅವರೆಲ್ಲರ ಅಂತರ್ವಾಣಿ ಏಕಕಾಲದಲ್ಲಿ ನುಡಿಯುತ್ತಿತ್ತು- “ಇದರಲ್ಲಿ ನಮ್ಮ ತಪ್ಪೇನಿದೆ? ಮುನ್ನೆಚ್ಚರಿಕೆಯಿಂದ ಚೆನ್ನಬಸವಣ್ಣನವರು ಎಲ್ಲರಿಗೂ ಸುದ್ದಿ ಕಳುಹಿಸಿದರು. ಗೊತ್ತಾದ ದಿನವನ್ನು ಮುಂದಕ್ಕೆ ಹಾಕಿದರು. ಆಗಲೂ ಅವರು ಸಂಗಡ ಬರಲು ನಿರಾಕರಿಸಿದರೆ ನಾವೇನು ಮಾಡುವುದು?” -ಎಂದು. ಗಣಾಚಾರಿಯೋಧರ ಪ್ರತಿಕ್ರಿಯೆ ಬೇರೆ ವಿಧವಾಗಿತ್ತು. ಅವರಲ್ಲಿ ಕೆಲವರು ಮುಂದೆ ಬಂದು ಮಾಚಿದೇವರಿಗೆ ಕೈಮುಗಿದು, “ಅಣ್ಣನವರು ಅನುಮತಿಯಿತ್ತು ಆಶೀರ್ವಾದ ಮಾಡಿದರೆ ಕಲ್ಯಾಣದಲ್ಲಿ ಉಳಿದಿರುವ ಶರಣರ ರಕ್ಷಣೆಗಾಗಿ ನಾವು ಇಂದೇ ಹೊರಡುತ್ತೇವೆ. ನಮ್ಮಂತೆ ನೂರು ಮಂದಿ ಯೋಧರು ಈ ಕಾರ್ಯದಲ್ಲಿ ಪ್ರಾಣಾರ್ಪಣ ಮಾಡಲು ಸಿದ್ದರಾಗಿದ್ದಾರೆ,” ಎಂದು ಬಿನ್ನವಿಸಿಕೊಂಡರು. ಮಾಚಿದೇವರ ಕಂಠ ಹೆಚ್ಚು ಗಂಭೀರವಾಯಿತು. ಅವರು ಹೇಳಿದರು : “ಆ ಕಾರ್ಯ, ಸಾಧ್ಯತೆಯ ಪರಿಮಿತಿಯಲ್ಲಿ ಇದ್ದಿದ್ದರೆ ನಿಮ್ಮನಾಯಕನಾಗಿ ನಿಮ್ಮ ಸಂಗಡ ನಾನೂ ಕಲ್ಯಾಣಕ್ಕೆ ಬರುತ್ತಿದ್ದೆ. ನೆನ್ನಿನ ರಾತ್ರಿ ಕಲಚೂರ್ಯ ಅರಮನೆಯಲ್ಲಿ ನಡೆದ ದುರ್ಘಟನೆ ನಗರದ ಪರಿಸ್ಥಿತಿಯನ್ನು ಮತ್ತಷ್ಟು ವಿಷಮಗೊಳಿಸಿದೆ. ಇಷ್ಟು ಹೊತ್ತಿಗೆ ಕಲ್ಯಾಣದ ಮಹಾದ್ವಾರಗಳನ್ನೆಲ್ಲ ಬಂಧಿಸಿ ಮಾಧವ ನಾಯಕನ ಸೈನ್ಯ ದಳಗಳು ಕಾವಲಿರಬಹುದು. ಇನ್ನೆರಡು ದಿನಗಳು ನಗರವನ್ನು ಪ್ರವೇಶಿಸುವುದಾಗಲಿ, ನಗರದಿಂದ ಹೊರಗೆ ಬರುವುದಾಗಲಿ ಯಾರಿಗೂ ಸಾಧ್ಯವಲ್ಲ.” “ಕಲಚೂರ್ಯ ಅರಮನೆಯಲ್ಲಿ ದುರ್ಘಟನೆ ! ಏನದು? ಏನದು ?” ಎಲ್ಲ ಕಡೆಗಳಿಂದ ಕೂಗು ಕೇಳಿ ಬಂದಿತು. ಶರಣರಂತೆ ಗಣಾಚಾರಿಯೊಧರೂ ಕೇಳಲು ಆತುರರಾಗಿದ್ದರು. ಮಾಚಿದೇವರು ನುಡಿದರು : “ಆ ದುರ್ಘಟನೆಯ ಸುಳುಹು ತಿಳಿದು, ನೆನ್ನಿನ ರಾತ್ರಿ ನಗರ ಸ್ತಂಭಿತವಾಗಿತ್ತು. ಮಾಧವ ನಾಯಕನ ಮಹಾಸೈನ್ಯ, ನಗರ ರಕ್ಷಕ ದಳಗಳು, ಕಲಚೂರ್ಯ ಅರಮನೆಯ ಸುತ್ತ ಕೇಂದ್ರೀಕೃತವಾಗಿದ್ದವು. ಶರಣರ ಯಾತ್ರಾದಳ ತೊಂದರೆಯಿಲ್ಲದೆ ನಗರವನ್ನು ಬಿಡಲು ಬಹುಮಟ್ಟಿಗೆ ಅದು ಸಹಾಯಕವಾಯಿತು. ಆದರೆ ಆ ದುರ್ಘಟನೆಯೇನೆಂಬುದು ಆಗ ಯಾರಿಗೂ ತಿಳಿಯದು. ನಾವು ಮಹಾದ್ವಾರದಿಂದ ಹೊರಗೆ ಬಂದಾಗ ದೈವಯೋಗದಿಂದ ನನಗೆ ಆ ವಿಚಾರ ತಿಳಿಯಿತು. ಈಗ ನಿಮ್ಮ ಮುಂದೆ ಅದನ್ನು ಮೊದಲ ಸಾರಿ ಹೇಳುತ್ತಿದ್ದೇನೆ.” ಸಭೆಯಲ್ಲಿ ನಿಶ್ಯಬ್ದ. ಎಲ್ಲರೂ ಆತುರದಿಂದ ಮಾಚಿದೇವರ ಮುಖ