ಪುಟ:ಕ್ರಾಂತಿ ಕಲ್ಯಾಣ.pdf/೪೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ್ರಾಂತಿ ಕಲ್ಯಾಣ “ಶರಣರು ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ, ಕರ್ಣದೇವರಸರೆ. ನಮ್ಮಿಂದ ನಿಮಗಾವ ಸಹಾಯವೂ ದೊರಕಲಾರದು.”- ನಿರ್ಧಾರಕ ಕಂಠದಿಂದ ಮಾಚಿದೇವರು ಉತ್ತರ ಕೊಟ್ಟರು. ಕರ್ಣದೇವ ಅಪ್ರತಿಭನಾಗಿ ಚೆನ್ನಬಸವಣ್ಣನವರ ಕಡೆ ನೋಡಿದನು. “ಮಾಚಿದೇವರ ಅಭಿಪ್ರಾಯವೇ ನನ್ನ ಅಭಿಪ್ರಾಯ, ಒಂದು ಸಾರಿ ಸರ್ಪದ್ರಷ್ಟರಾದವರು ಮುಂದೆ ಯಾವಾಗಲೂ ಹುತ್ತದ ಬಳಿ ಹೋಗುವುದಿಲ್ಲ. ಬಿಜ್ಜಳ ರಾಯರು ನನ್ನನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಂಡು ಕಲಚೂರ್ಯ ರಾಜಿಕದ ಪರಿಚಯ ಮಾಡಿಕೊಟ್ಟಿದ್ದಾರೆ. ನಾವು ಕಲ್ಯಾಣವನ್ನು ಬಿಟ್ಟು ವಲಸೆ ಬರಲು ಆ ದುರದೃಷ್ಟಕರ ಅನುಭವವೇ ಕಾರಣ. ಮುಂದೆ ಶರಣರನ್ನು ರಾಜಕದಿಂದ ದೂರವಾಗಿಡಲು ಸರ್ವಪ್ರಯತ್ನ ಮಾಡುತ್ತೇನೆ,” ಎಂದರು ಚೆನ್ನಬಸವಣ್ಣನವರು. “ನಿಮ್ಮ ಉತ್ತರಗಳು ನನ್ನನ್ನು ಸ್ತಂಭಿತಗೊಳಿಸಿವೆ, ಅಯ್ಯಗಳೇ. ಅಣ್ಣನ ಅಪರಾಧಕ್ಕಾಗಿ ತಮ್ಮನನ್ನು ಶಿಕ್ಷಿಸುವುದು ಯಾವ ಧರ್ಮ? ನಾನು ನಿಮ್ಮನ್ನು ಮಂತ್ರಿಯಾಗಲು ಕರೆಯುತ್ತಿಲ್ಲ. ಶರಣರು ರಾಜಿಕಕ್ಕೆ ಪ್ರವೇಶಿಸಲು ಹೇಳುತ್ತಿಲ್ಲ. ನೀವು ದಯಮಾಡಿ ವಲಸೆಯ ನಿರ್ಧಾರವನ್ನು ತ್ಯಜಿಸಿ ಕಲ್ಯಾಣಕ್ಕೆ ಹಿಂದಿರುಗಬೇಕಾಗಿ ನನ್ನ ಪ್ರಾರ್ಥನೆ. ಅದರಿಂದ ನಗರದಲ್ಲಿ ನನ್ನ ಕೈ ಮೇಲಾಗುವುದು. ಮಾಧವ ನಾಯಕನ ದುರಾಡಳಿತವನ್ನು ತಡೆಯಲು ನಾನು ಶಕ್ತನಾಗುವೆನು,” ಎಂದು ಕರ್ಣದೇವ ಪುನಃ ಹೇಳಿದನು. ಚೆನ್ನಬಸವಣ್ಣನವರು ಉತ್ತರ ಕೊಡಲಿಲ್ಲ. ಮುಖ ತಿರುಗಿಸಿ ತಮ್ಮ ಧರ್ಮ ಚಿಂತನೆಯಲ್ಲಿ ಮಗ್ನರಾದರು. ಅವರ ಪರವಾಗಿ ಮಾಚಿದೇವರು ಉತ್ತರ ಕೊಟ್ಟರು : “ನಾವು ವಲಸೆ ಹೊರಟು ಆಂಜನೇಯ ಹೊಳೆ ದಾಟಿ ಆಗಲೆ ಕೊಂಚ ದೂರ ಬಂದಿದ್ದೇವೆ, ಕರ್ಣದೇವರಸರೆ, ಈಗ ಪುನಃ ಕಲ್ಯಾಣಕ್ಕೆ ಹಿಂದಿರುಗುವುದು, ಬೇಡವೆಂದು ಉಗುಳಿದ್ದನ್ನು ಪುನಃ ತೆಗೆದು ಬಾಯಿಗಿಟ್ಟುಕೊಂಡಂತೆ. ಅಂತಹ ಹೊಲಸು ಶರಣರಿಗೆ ತ್ರಿಕಾಲದಲ್ಲಿಯೂ ಸಲ್ಲ.” ಕರ್ಣದೇವ ಯೋಚಿಸುತ್ತ ಕುಳಿತನು. ಮೋಳಿಗೆ ಮಾರಯ್ಯನವರು ಅವನ ನೆರವಿಗೆ ಬಂದು ಹೇಳಿದರು : “ಶರಣರು ರಾಜಸತ್ತೆಯಲ್ಲಿ ವಿಶ್ವಾಸ ಕಳೆದುಕೊಂಡಿದ್ದಾರೆ, ಕರ್ಣದೇವರಸರೆ. ಅವರು ವಲಸೆ ಹೊರಟಿರುವುದು ಯಾವ ಒಬ್ಬ ಅರಸನ ಅಥವಾ ಪ್ರಭುತ್ವದ ವಿರುದ್ಧವಾಗಿ ಅಲ್ಲ-ಎಲ್ಲ ಕಾಲ, ಎಲ್ಲ ದೇಶಗಳ ರಾಜಸತ್ತೆಗೆ ತಮ್ಮ ವಿರೋಧದ