ಪುಟ:ಕ್ರಾಂತಿ ಕಲ್ಯಾಣ.pdf/೪೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ್ರಾಂತಿ ಕಲ್ಯಾಣ “ಕವಿತೆಯ ಅಮೃತ ಬಿಂದುಗಳಂತೆ ಕಿವಿಗಳಲ್ಲಿ ಪುಟಿಸುವ ಈ ಮೂರು ವಚನಗಳು ಪ್ರಭುದೇವರ ಅನುಭಾವದ ಆಣಿಮುತ್ತುಗಳಂತೆ ಬೆಳಗುತ್ತವೆ. ಅವುಗಳನ್ನು ಅರ್ಥವಿಸುವುದೆಂದರೆ ಮೂಗು ಅರಿತ ಪರಿಮಳವನ್ನು ಬಾಯಿ ಚಪ್ಪರಿಸಿದಂತೆ, ನಾಲಿಗೆ ಅರಿತ ಸಿಹಿಯನ್ನು ಮೂಗು ಆಘ್ರಾಣಿಸಿದಂತೆ, ನಿರರ್ಥಕ ಪರಿಶ್ರಮ. ಆದರೂ ನಿಮಗಾಗಿ ಆ ಕಾರ್ಯ ಮಾಡುತ್ತಿದ್ದೇನೆ, “ದೇಹವೆಂಬ ತೆರೆಯ ಮರೆಯಲ್ಲಿರುವ ಜೀವನು, ಪರಬ್ರಹ್ಮನ ಅಂಶವೆಂದು ತಿಳಿದು, ಆ ಜೀವ ಬ್ರಹ್ಮರು ಒಂದೇ ವಸ್ತುವೆಂಬ ತತ್ವವನ್ನು ಅನುಭಾವದಿಂದ ಅರಿತಾಗ ಪೂಜಿಸುವ ಭಕ್ತನಾರು? ಪೂಜೆಗೊಂಬ ದೇವನಾರು? ಜೀವನೇ ಬ್ರಹ್ಮ ಬ್ರಹ್ಮನೇ ಜೀವ, ಎಂಬ ಅದೈತ ಭಾವನೆ ಉಂಟಾದ ಬಳಿಕ ನೀನು ನಾನೆಂಬ ದೈತಭಾವನೆ ಉಳಿಯುವುದಿಲ್ಲ-ಎಂದು ಮೊದಲ ವಚನದ ತಾತ್ಪರ್ಯ. - “ಜೀವಾತ್ಮ ಪರಮಾತ್ಮರು ಒಂದೇ ಎಂಬ ಭಾವದಿಂದ ನೆನಪು ಅಳಿದಾಗ “ನೆನೆ ನೆನೆ” ಎಂದರೆ ನಾನು ಯಾರನ್ನು ನೆನೆಯಲಿ. ಅರಿಯಬೇಕಾದ ವಸ್ತುವಾಗಲಿ, ಅರಿಯುವವನಾಗಲಿ ಇಲ್ಲದ್ದರಿಂದ ಈಗ ನನ್ನ ಕಾಯವೇ ಕೈಲಾಸ, ಮನಸ್ಸೇ ಲಿಂಗ, ತನುವೇ ಸೆಜ್ಜೆ ನೆನೆಯಲು ವಸ್ತುವಿಲ್ಲ, ನೆನೆಯುವ ಭಕ್ತನಿಲ್ಲ. ಆತ್ಮನಲ್ಲಿ ಬ್ರಹವೂ ಬ್ರಹ್ಮನಲ್ಲಿ ಆತ್ಮವೂ ಬೆರೆತು, ಎರಡಾಗಿದ್ದದ್ದು ಒಂದೇ ಆಯಿತು, ಎಂದು ಎರಡನೆಯ ವಚನದ ತಾತ್ಪರ್ಯ. ಮೂರನೆಯ ವಚನ ಕಾವ್ಯಮಯವಾಗಿದೆ. ತುಂಬಿ ಎಂಬ ಪದವನ್ನು ಪ್ರಭುದೇವರು ಈ ವಚನದಲ್ಲಿ ಬೇರೆ ಬೇರೆ ಅರ್ಥದಲ್ಲಿ ಪ್ರಯೋಗಿಸಿದ್ದಾರೆ. ಗಿಡದ ಮೇಲಿನ ಚೆಲುವಾದ ತುಂಬೆ ಹೂವಿನಂತೆ ದೇಹದಲ್ಲಿ ಆತ್ಮವೆಂಬ ಹೂವು ಅರಳಿದೆ, ನೋಡು, ಆತ್ಮನಲ್ಲಿ ಪರಮಾತ್ಮನು, ಪರಮಾತ್ಮನಲ್ಲಿ ಆತ್ಮನು, ಒಂದರೊಡನೊಂದು ಬೆರೆಯುವುದೇ ಆತ್ಮದ ಅರಳುವಿಕೆ. ಈ ಸ್ಥಿತಿಯಲ್ಲಿ ಶರಣನು ಅಖಂಡ ಪರಿಪೂರ್ಣ ಪರಬ್ರಹ್ಮವೇ ತಾನಾಗಿ ಶಿವೋಹಂ ಶಿವೋಹಂ ಎಂದಾಗ ಆ ಅರಿವಿನಿಂದಾದ ಮಹದಹಂಕಾರವನ್ನು ಕಳೆಯಲು ದಾಸೋಹಂ ಭಾವದಿಂದ ಮತ್ತೆ ಆ ಅಖಂಡ ಪರಿಪೂರ್ಣಕ್ಕೆರಗಿ, ಭಾವನಿಬ್ಬೆರಗಾಗಿ, ನಿರಹಂಭಾವದ ಮಹಾಘನಪರಿಪೂರ್ಣತೆಯನ್ನು ಪಡೆಯುವುದು ಎಂದು ಕೊನೆಯ ವಚನದ ಭಾವಾರ್ಥ: “ಈ ಮೂರು ವಚನಗಳಲ್ಲಿ ಪ್ರಭುದೇವರು ತಮ್ಮ ದಿವ್ಯಾನುಭಾವದ ಸಾರವನ್ನು ನಿರೂಪಿಸಿದ್ದಾರೆ. ಪ್ರಾಣಲಿಂಗಿ ಸ್ಥಳವನ್ನಡರಿದ ಶರಣನು ಈ ವಚನಗಳ ಚಿಂತನ ಮಂಥನಗಳಿಂದ ತನ್ನ ಸಾಧನೆಯ ಮುಂದಿನ ಹಂತಗಳಾದ ಶರಣ ಐಕ್ಯ