ಪುಟ:ಕ್ರಾಂತಿ ಕಲ್ಯಾಣ.pdf/೪೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೩೧ ಆಮೇಲೆ ಬಸವಣ್ಣನವರು ತಮ್ಮ ನಿತ್ಯ ಪದ್ಧತಿಯಂತೆ ಅಲ್ಲಿಂದ ಹೊರಟು ನದಿಯ ತೀರದಲ್ಲಿದ್ದ ಇನ್ನೊಂದು ಶಿಲಾಮಂಟಪಕ್ಕೆ ಹೋದರು. ಅವರ ಸೇವೆಗಾಗಿ ನಿಯುಕ್ತನಾಗಿದ್ದ ಗುರುಕುಲದ ವಟು, ಪೂಜೆಗಾಗಿ ಅಲ್ಲಿ ಅಗ್ಗವಣಿ ಬಿಲ್ವಪತ್ರೆಗಳನ್ನು ಸಿದ್ಧಗೊಳಿಸಿ ಕಾದು ಕುಳಿತಿದ್ದನು. ನದೀತೀರದ ಬಂಡೆಯೊಂದರ ಮೇಲೆ ಕುಳಿತು ಅಗ್ಗಳನು ಸಂಧ್ಯಾ ಸೂರ್ಯನ ವರ್ಣರಂಜಿತ ಕಿರಣಗಳು ಅಲೆಗಳೊಡನೆ ಕಣ್ಣಾಮುಚ್ಚಾಲೆ ಯಾಡುವುದನ್ನು ನೋಡುತ್ತಿದ್ದನು. ಅವನ ಮನಸ್ಸು ಬಸವಣ್ಣನವರ ಪ್ರವಚನ, ಅವರು ಬೀಳ್ಕೊಳ್ಳುವ ಮುನ್ನ ನುಡಿದ ಎರಡು ಆಶುವಚನಗಳು, ಇವುಗಳನ್ನು ಕುರಿತು ಚಿಂತನಮಂಥನದಲ್ಲಿ ತೊಡಗಿತ್ತು. ಪ್ರಭುದೇವರ ವಚನಗಳ ವಿವರಣೆಯಲ್ಲಿ ಬಸವಣ್ಣನವರು ಅನುಸರಿಸಿದ ನವ ವಿಧಾನವನ್ನು ಅಗ್ಗಳನು ಗುರುತಿಸಿದನು. ಶರಣಧರ್ಮದಲ್ಲಿ ಮಾತ್ರವೇ ಪ್ರಚಾರದಲ್ಲಿದ್ದ ಪಾರಿಭಾಷಿಕ ಶಬ್ದಗಳ ಪ್ರತಿಯಾಗಿ, ಆಗಿನ ಕಾಲಕ್ಕೆ ಎಲ್ಲರಲ್ಲಿಯೂ ಪ್ರಚಾರದಲ್ಲಿದ್ದ ಅದೈತ ಪಂಥದ ಪಾರಿಭಾಷಿಕ ಶಬ್ದಗಳನ್ನು ಬಸವಣ್ಣನವರು ಉಪಯೋಗಿಸಿದ್ದರು. ಅದರಿಂದಾಗಿ ವಚನಗಳ ಅರ್ಥ ಅಗ್ಗಳನಿಗೆ ಹೆಚ್ಚು ಪರಿಸ್ಪುಟವಾಗಿತ್ತು. ಶರಣಧರ್ಮದ ಪ್ರವಚನಕಾರರು ಈ ಮಾರ್ಗವನ್ನೇಕೆ ಅನುಸರಿಸುತ್ತಿಲ್ಲ? ಶರಣಧರ್ಮದ ಪ್ರಗಾಢ ಸರ್ವವ್ಯಾಪಿ ತತ್ವಗಳನ್ನು ಪಾರಿಭಾಷಿಕ ಶಬ್ದಗಳ ಆವರಣದಿಂದ ಮುಚ್ಚಿಡಲು ಏಕೆ ಪ್ರಯತ್ನಿಸುತ್ತಿದ್ದಾರೆ ? ರಹಸ್ಯ ರಕ್ಷಣೆ ಇದರ ಉದ್ದೇಶವೇ? -ಎಂದು ಅವನ ವಿವೇಕ ಪ್ರಶ್ನಿಸಿತು. ಪ್ರವಚನದಲ್ಲಿ ಬಸವಣ್ಣನವರು ಸೂಚಿಸಿದ ಇನ್ನೊಂದು ವಿಚಾರ ಅಗ್ಗಳನಿಗೆ ಹೆಚ್ಚು ಮೆಚ್ಚುಗೆ ಆಯಿತು. ಪಂಚಶೀಲ ಅಷ್ಟಾವರಣಗಳ ಬಾಹ್ಯ ಲಾಂಛನಗಳಿಗೆ ಪ್ರಾಮುಖ್ಯತೆ ಕೊಡದೆ, ಸಾಧಕನ ಅಂತರಂಗದಲ್ಲಿ ಆಗಬೇಕಾದ ಪರಿವರ್ತನೆಯನ್ನು ಕುರಿತು ಬಸವಣ್ಣನವರು ವಿಸ್ತಾರವಾಗಿ ಪ್ರಸ್ತಾಪಿಸಿದ್ದರು. ಸುಮಾರು ಒಂದು ವರ್ಷಕ್ಕೆ ಹಿಂದೆ ದೇವಗಿರಿಯಲ್ಲಿ ಚೆನ್ನಬಸವಣ್ಣನವರನ್ನು ಕಂಡಾಗಿನಿಂದ ಅಗ್ಗಳನ ಒಲವು ಶರಣಧರ್ಮದ ಕಡೆಗೆ ತಿರುಗಿತ್ತಾದರೂ, ಪಂಚಶೀಲ ಅಷ್ಟಾವರಣಗಳ ಬಾಹ್ಯ ಲಾಂಛನಗಳಿಗೆ ಶರಣರು ಕೊಡುತ್ತಿದ್ದ ಮಹತ್ವ ಅವನನ್ನು ಶರಣದೀಕ್ಷೆಗೆ ವಿಮುಖನನ್ನಾಗಿ ಮಾಡಿದ್ದವು. ಶರಣಧರ್ಮ ವಿಶ್ವಧರ್ಮವಾಗುವ ಒಂದೇ ಒಂದು ಅಡಚಣೆಯೆಂದರೆ ಈ ಬಾಹ್ಯ ಲಾಂಛನಗಳ ಕಠಿಣತೆಯೇ ಎಂದು