ಪುಟ:ಕ್ರಾಂತಿ ಕಲ್ಯಾಣ.pdf/೪೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ್ರಾಂತಿ ಕಲ್ಯಾಣ ಭಾವಪರವಶೆಯಾದ ನೀನು ಆ ದನಿ ಕೇಳಿದ್ದು ಆಶ್ಚರ್ಯವೇನೂ ಅಲ್ಲ.” ಅವರು ಎದ್ದು ಕೂಡಾರದಿಂದ ಹೊರಗೆ ಬಂದು ಸ್ನಾನಕ್ಕಾಗಿ ಕಟ್ಟಿದ ಆವಾರದ ಬಳಿ ಹೋದರು. ಕೃಷ್ಣಯ ಸಣ್ಣ ಕಾಲುವೆ ಅಲ್ಲಿ ಹರಿಯುತ್ತಿತ್ತು. ಮೊದಲು ನೀಲಲೋಚನೆ ಸ್ನಾನಮಾಡಿ ಮಡಿಯುಟ್ಟು ಹೊರಗೆ ಬಂದಳು. * ಉದಯ ರವಿಯ ಹೊಂಗಿರಣಗಳು ಆ ಪ್ರದೇಶವನ್ನು ಆಲೋಕಮಯವಾಗಿ ಮಾಡಿದ್ದವು. ಕಾಲುದಾರಿಯ ಇಕ್ಕೆಲದಲ್ಲಿ ಬೆಳೆದಿದ್ದ ಹಸಿರು ಹುಲ್ಲು, ಬಣ್ಣ ಬಣ್ಣದ ಕಾಡು ಹೂಗಳು, ಬೆಳಕನ್ನು ಸೆರೆಹಿಡಿದಂತೆ ಮಿರುಗುತ್ತಿದ್ದವು. ನೆಲದ ಆ ಚಲುವಿಕೆ ಮಾರ್ದವಗಳು ತುಳಿತದಿಂದ ಮಲಿನವಾಗದಿರಲೆಂದು ನೀಲಲೋಚನೆ ಮೆಲ್ಲನೆ ಅಡಿಯಿಟ್ಟು ನಡೆದಳು. ಅವರು ಕರೆ ಕಳುಹಿಸಿದಾಗ ನಾನೇಕ ಸಂಗಮಕ್ಕೆ ಹೋಗಲಿಲ್ಲ? ಈಗ ಅವರಿಗಾಗಿ ಏಕೆ ತಪಿಸುತ್ತಿದ್ದೇನೆ? ನಾನು ಅವರಿಗೆ ಕಳುಹಿಸಿದ ಎರಡು ವಚನಗಳು ನನ್ನ ಅವಿವೇಕ ಉದ್ಧಟತನಗಳ ಸಂಕೇತ, ಸೂರ್ಯನೆದುರು ದೀಪವಿಟ್ಟಂತೆ. ಅವರ ಸಹಧರ್ಮಿಣಿಯಾಗಿ ಆರು ವರ್ಷಗಳನ್ನು ಕಳೆದರೂ ಕಲಚೂರ್ಯ ರಾಜಕನ್ಯಯ ಅಭಿಮಾನ ನನ್ನನ್ನು ಕಾಡಿಸುತ್ತಿದೆ. ಆ ವಾಸನೆಯನ್ನು ಕಳೆಯಬಲ್ಲ ಶ್ರೀಚರಣಗಳಿಂದ ದೂರವಾಗಲು ಸಂಕಲ್ಪಿಸಿ ನಾನು ಅಪರಾಧ ಮಾಡಿದೆ!” ಎಂಬ ಚಿಂತೆಯಿಂದ ಭಾರವಾಗಿತ್ತು ಅವಳ ಮನಸ್ಸು. “ಹುತ್ತವ ಬಡಿದರೆ ಹಾವು ಸಾಯಬಲ್ಲುದೆ, ಅಯ್ಯ?” ನೀಲಲೋಚನೆ ವಿಸ್ಮಿತೆಯಾದಳು. ಶಿಬಿರದಲ್ಲಿ ಯಾರೋ ಆ ವಚನ ಪಠಿಸುತ್ತಿರಬೇಕು ಎಂದು ಭಾವಿಸಿ ಅವಳು ಎರಡು ಹೆಜ್ಜೆ ಮುಂದೆ ಹೋದಳು, ಆದರೆ ಅದೇ ಪರಿಚಿತ ಶೃತಿಮಧುರ ಕಂಠ. ಇದು ನನ್ನ ಕಲ್ಪನೆ ! ಭ್ರಾಂತಿ ! ಎಂದುಕೊಂಡಳು ನೀಲಲೋಚನೆ. ಕೆಲವು ಕ್ಷಣಗಳು ನಿಸರ್ಗ ಸ್ತಂಭಿತವಾಯಿತು. ಶಿಬಿರದ ಎಲ್ಲ ಶಬ್ದಗಳು ಶೂನ್ಯದಲ್ಲಿ ಅಡಗಿದವು. ಪ್ರಭಾತದ ಸೂರ್ಯಲೋಕ ಉಜ್ವಲವಾಗಿ ಆ ಪ್ರದೇಶವನ್ನೆಲ್ಲ ಅರುಣ ಕೋಮಲ ಕಾಂತಿಯಿಂದ ಬೆಳಗಿತು. ಆ ಪರಿಚಿತ ಶೃತಿಮಧುರ ಗಂಭೀರಕಂಠ ಮತ್ತೆ ಕೇಳಿಸಿತು. “ಹುತ್ತವ ಬಡಿದರೆ ಹಾವು ಸಾಯುವುದೇ, ಅಯ್ಯ? ಅಘೋರ ತಪವ ಮಾಡಿದರೇನು ? ಅಂತರಂಗ ಆತ್ಮಶುದ್ದಿ ಇಲ್ಲದವರನೆಂತು ನಂಬುವನಯ್ಯ, ಕೂಡಲ ಸಂಗಮದೇವ?” ಈ