ಪುಟ:ಕ್ರಾಂತಿ ಕಲ್ಯಾಣ.pdf/೪೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೫೦ ಕರಸ್ಥಳದಲ್ಲಿ ಬೆಳಗುತ್ತಿದ್ದ ಇಷ್ಟಲಿಂಗದ ಮೇಲೆ ನೆಟ್ಟಿದ್ದ ನೀಲಲೋಚನೆಯ ದೃಷ್ಟಿ ಅಪೂರ್ವಕಾಂತಿಯಿಂದ ಜ್ವಲಿಸಿತು,-ಆರುವ ಮೊದಲು ದೀಪ ನಗುವಂತೆ. ನಿಮ್ಮ ಗಂಭೀರ ಕಂಠದಿಂದ ನೀಲಲೋಚನೆ ಹೇಳಿದಳು : “ಕಾಮಿತವ ಕಂಗೊಳಿಸಿದ ಗುರುವೇ, ಕಲ್ಪಿತವ ನಷ್ಟವ ಮಾಡಿದ ಗುರುವೆ, ಎತ್ತಲಡಗಿದೆಯಯ್ಯ ! ಸುಖ ದುಃಖವನೊಂದು ರೂಪ ಮಾಡಿದ ಗುರುವೆ, ಎತ್ತಲಡಗಿದೆಯಯ್ಯ ಸಂಗಯ್ಯ ಗುರು ಬಸವಾ ! ಕರಸ್ಥಲ ಬಯಲಾಯಿತ್ತೆನಗೆ, ಎಲೆ ಅಯ್ಯ ! ಕರಸ್ಥಲ ಮನಸ್ಥಲವಾಯಿತ್ತು, ಸಂಗಯ್ಯ ! ಬಸವ ಹೋದನು, ನಾನಡಗಿದೆನಯ್ಯ ನಿನ್ನತ್ತ !” ನುಡಿಯುತ್ತಿದ್ದಂತೆ ನೀಲಲೋಚನೆಯ ಮಾತು ಅಸ್ಪುಟವಾಯಿತು, ದನಿಯುಡುಗಿತು, ಉಸಿರೆಳೆದು ನಿಶ್ಲೇಷಿತೆಯಾಗಿ, ಗಂಗಾಂಬಿಕೆಯ ಎದೆಗೊರಗಿ ತಲೆಯಿಟ್ಟು ಕಣ್ಣು ಮುಚ್ಚಿದಳು. ಶರಣೆಯರು ಮೆಲ್ಲನಿಯಲ್ಲಿ ಪಠಿಸುತ್ತಿದ್ದ ಷಡಕ್ಷರದ ಗಂಭೀರ ನಾದ ಗೂಡಾರವನ್ನೆಲ್ಲ ತುಂಬಿತು. “ನೀಲಲೋಚನೆ ಪುಣ್ಯವತಿ, ನಾಗತ್ತೆ ! ನನಗೆ ಬರಬಾರದಾಗಿತ್ತೆ ಆ ಮೃತ್ಯು!” ಎಂದು ಹಂಬಲಿಸಿದಳು ಗಂಗಾಂಬಿಕೆ. “ಅಶುಭವನ್ನಾಡಬೇಡ, ಗಂಗಾ. ಸಂಗಮನಾಥನು ದೊಡ್ಡವನಾದಾಗ ಇಹಲೋಕದಲ್ಲಿ ನಿನ್ನ ಮಣಿಹ ಮುಗಿಯುವುದು,” ಎಂದು ನಾಗಲಾಂಬೆ ಎಚ್ಚರಿಸಿದಳು. ನೀಲಲೋಚನೆ ಲಿಂಗೈಕ್ಯಳಾದ ಸುದ್ದಿ ಕೇಳಿ ಚೆನ್ನಬಸವಣ್ಣನವರು ಮತ್ತೆ ತಳಮಳಗೊಂಡರು. “ನಾನೆಂತಹ ನಿರ್ಭಾಗ್ಯನು ಮಾಚಿದೇವಯ್ಯನವರೆ !” ಎಂದು ಹಂಬಲಿಸಿದರು. ಆ ದಿನವೆಲ್ಲ ಶಿಬಿರದಲ್ಲಿ ಎಲ್ಲ ಕಡೆ ಷಡಕ್ಷರ ಮಂತ್ರದ ಪುನರಾವರ್ತ ಮತ್ತೆ ಮತ್ತೆ ಕೇಳಿ ಬರುತ್ತಿತ್ತು. ತಂಗಡಿಯ ಹತ್ತಿರ ಕೃಷ್ಣಾ ತೀರದ ಒಂದು ರಮ್ಯ ಸ್ಥಳದಲ್ಲಿ ಶರಣರು ನೀಲಲೋಚನೆಯ ಪಾರ್ಥಿವ ದೇಹವನ್ನು ಭೂಸ್ಥಾಪನೆ ಮಾಡಿ ಸಮಾಧಿ ರಚಿಸಿದರು.

  • ಶೂ, ಸಂ. ಪುಟ ೪೬೨-೪೬೩