ಪುಟ:ಕ್ರಾಂತಿ ಕಲ್ಯಾಣ.pdf/೪೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ್ರಾಂತಿ ಕಲ್ಯಾಣ ಪಡಿಹಾರಿ ಅಪ್ಪಣ್ಣ ಆ ಪುಣ್ಯಾಂಗನೆಯ ಸಮಾಧಿಯನ್ನು ಪ್ರತಿನಿತ್ಯ ಹೂಗಳಿಂದ ಅಲಂಕರಿಸಲು ನಿಯುಕ್ತನಾಗಿ ಅಲ್ಲಿಯೇ ಕೆಲವು ವರ್ಷಗಳಿದ್ದು ಲಿಂಗೈಕ್ಯನಾದನೆಂದು ಐತಿಹ್ಯ ಹೇಳುತ್ತದೆ. - ನೀಲಲೋಚನೆ ಲಿಂಗೈಕ್ಯಳಾದ ಸುದ್ದಿ ಕೇಳಿದ ಸಿದ್ದರಾಮೇಶ್ವರ ಶಿವಯೋಗಿಗಳು ನುಡಿದ ಪರೋಕ್ಷ ವಿನಯದ ಶ್ರದ್ದಾಂಜಲಿಯಿದು : “ತಾಯೆ, ಪರಮಸುಖಾಚಾರ ಮೂರ್ತಿಯನಡಗಿಸಿ ನೀನೆಯಾದೆಯವ್ವಾ ! ತಾಯೆ, ಮಹಾಜ್ಞಾನ ಕಲ್ಪಿತದಲ್ಲಿ ನೀನೆಯಡಗಿದೆಯಪ್ಪಾ! ತಾಯೆ, ನೀಲಮ್ಮನೆಂಬ ಸುಖವಾಸಿ ಮೂರ್ತಿ ! ಕಪಿಲಸಿದ್ಧ ಮಲ್ಲಿನಾಥಯ್ಯಾ, ನಿಮ್ಮ ತಾಯಿ ನೀಲಮ್ಮ ನೀನಾದಳು !” “ಈ ಎಲ್ಲ ಅನರ್ಥಗಳಿಗೆ ನನ್ನ ಆಚಾತುರ್ಯವೇ ಕಾರಣ. ಈ ಅಪರಾಧಕ್ಕಾಗಿ ನಾನು ಮಾಡಿಕೊಳ್ಳಬೇಕಾದ ಪ್ರಾಯಶ್ಚಿತ್ತವೇನು ?” -ಎಂದು ಮಾಚಿದೇವರು ಚಿಂತಿಸಿದರು. ಹೀಗೆ ಎರಡು ದಿನಗಳು ಕಳೆದವು. ಮೂರನೆಯ ದಿನ ಮುಂಜಾವಿನಲ್ಲಿ ತಡಸದ ಹಾಯ್ದಡಕ್ಕೆ ಹೋಗಿದ್ದ ಅಂಬಿಗರ ನಾಯಕನು ಹಿಂದಿರುಗಿ, “ಹೊಳೀ ಇಳೀತಾ ಬಂದೈತ್ರಿ, ಅಣ್ಣ, ಈ ಸಂಜೆ ಹೊತ್ತಿಗೆ ಇನ್ನೂ ಕಡಿಮೆ ಆದಾತು. ನೀವು ಈಗ ಶಿಬಿರ ಎತ್ತಿದ್ರೆ ಸೂರ್ಯ ನಡುನೆತ್ತಿಗೇರೋ ಹೊತ್ತಿಗೆ ತಡಸ ಸೇರಬೋದು, ಅಲ್ಲಿ ಎಲ್ಲವೂ ಅಣಿಯಾಗೈತಿ,” ಎಂದು ವರದಿ ಮಾಡಿದನು. “ಏನು ಸಿದ್ಧವಾಗಿದೆ ?” ಎಂದು ಮಾಚಿದೇವರು ಕೇಳಿದರು. “ಎತ್ತುಗಳು, ಚಕ್ಕಡಿಗಳು, ಸಾಮಾನು ಸರಂಜಾಮು ಸಾಗಿಸಲು ನಾಕು ದೊಡ್ಡ ತೆಪ್ಪಗಳು, ಜನಗಳಿಗೆ ನೂರು ದೋಣಿ. ಸಂಜೀ ಮುನ್ನ ನಿಮ್ಮನ್ನ ಆ ದಡ ಸೇರಿಸೇವು,” -ಅಂಬಿಗರ ನಾಯಕ ಉತ್ತರಿಸಿದನು. ಅಂಬಿಗನ ವರದಿ ಎಷ್ಟು ಉತ್ಸಾಹದಾಯಕವಾಗಿ ಕಲ್ಯಾಣದಿಂದ ಬಂದ ಸುದ್ದಿ ಅಷ್ಟೇ ಭೀತಿಜನಕವಾಗಿತ್ತು. ಹರದನ ವೇಷದಲ್ಲಿ ಬಂದ ಶರಣನು ಹೇಳಿದನು : “ನಿಮ್ಮನ್ನು ತಡೆಯಲು ಮಾಧವ ನಾಯಕನು ಸೈನ್ಯದೊಡನೆ

  • ಶೂ, ಸಂ. ಪುಟ ೪೬೪.