ಪುಟ:ಕ್ರಾಂತಿ ಕಲ್ಯಾಣ.pdf/೪೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೭೫ ನೇಮಿಸಿ, ರಾಜಗೃಹದಲ್ಲಿ ಬಂಧನದಲ್ಲಿಟ್ಟರು.” “ನೇಮಕದ ಉದ್ದೇಶ ?” “ರಾಣಿ ಕಾಮೇಶ್ವರಿಯ ಕ್ಷೇತ್ರದಪುತ್ರ ಕುಮಾರ ಪ್ರೇಮಾರ್ಣವನ ಉತ್ತರಾಧಿಕಾರದ ವಿಚಾರವಾಗಿ ಜಗದೇಕಮಲ್ಲನೊಡನೆ ಸಂಧಾನ ನಡೆಸುವುದಕ್ಕಾಗಿ, ಆದರೆ ಬಿಜ್ಜಳರಾಯರು ಉದ್ದೇಶಿಸಿದ್ದುದೊಂದು, ನಡೆದದ್ದು ಮತ್ತೊಂದು. ಅಗ್ಗಳ ಬೊಮ್ಮರಸರಿಬ್ಬರೂ ರಾಜಗೃಹ ಸೇರಿದ್ದರಿಂದ ಒಳಸಂಚಿಗೆ ಅನುಕೂಲವಾಯಿತು.” ಕ್ರಮಿತನ ಉತ್ತರಗಳಿಂದ ಸೋಮೇಶ್ವರನು ಪುನಃ ಗೊಂದಲದಲ್ಲಿ ಬಿದ್ದನು. ರಾಣಿ ಕಾಮೇಶ್ವರಿಯನ್ನು ಪಟ್ಟಾಭಿಷೇಕದ ನೆವದಿಂದ ಮಂಗಳವೇಡೆಗೆ ಕರೆಸಿಕೊಳ್ಳಲು ಬಿಜ್ಜಳನು ನಡೆಸಿದ ಸನ್ನಾಹ ಅಗ್ನಿದಾಹದಲ್ಲಿ ಕಾಮೇಶ್ವರಿಯ ಅಪಮೃತ್ಯು, ರಾಣಿಯೊಡನೆ ಬಿಜ್ಜಳನ ಲಂಪಟ ವರ್ತನೆಯನ್ನು ಕುರಿತು ಜನರಲ್ಲಿ ಹರಡಿದ್ದ ಅಪವಾದ, ಈ ಎಲ್ಲ ವಿಚಾರಗಳು ಸೋಮೇಶ್ವರನ ಮನದಲ್ಲಿ ಸುಳಿದವು. ಕಾಮೇಶ್ವರಿಯ ಅಪಮೃತ್ಯು ತಂದೆಯ ಕೊಲೆಗೆ ಕಾರಣವಾಗಿರಬಹುದೆ? ಕೊಲೆ ಮಾಡಿದವರಾರು? ಕಾಮೇಶ್ವರಿಯ ಸಹೋದರ, ಕರ್ಹಾಡದ ಮಂಡಲಾಧಿಪತಿ ವಿಜಯಾರ್ಕನ ಪ್ರೇರಣೆಯಿಂದ ಕೊಲೆ ನಡೆಯಿತೆ? ಎಲ್ಲವೂ ಸಾಧ್ಯ ಎಂದು ಚಿಂತಿಸಿ ಸೋಮೇಶ್ವರನು, “ಮಂಗಳವೇಡೆಯ ಘಟನೆಗಳು ಜಗದೇಕಮಲ್ಲನಿಗೆ ತಿಳಿದಿತ್ತೆ?” ಎಂದು ಹೇಳಿದನು. ಕ್ರಮಿತನು ಕೂಡಲೆ ಉತ್ತರ ಕೊಡಲಿಲ್ಲ. ಕೆಲವು ಕ್ಷಣಗಳು ಯೋಚಿಸುತ್ತಿದ್ದು ಬಳಿಕ ಹೇಳಿದನು. “ರಾಣಿ ಕಾಮೇಶ್ವರಿಯನ್ನು ಮಂಗಳವೇಡೆಗೆ ಕರೆಸಿಕೊಳ್ಳಲು ಬಿಜ್ಜಳರಾಯರು ನಡೆಸುತ್ತಿದ್ದ ಸಂಧಾನ ಅಗ್ಗಳನಿಂದ ಜಗದೇಕಮಲ್ಲನಿಗೆ ತಿಳಿದಿರಬೇಕು. ಪಟ್ಟಾಭಿಷೇಕ ಮುಗಿದು ಕಲ್ಯಾಣಕ್ಕೆ ಹಿಂದಿರುಗಿದ ಕರ್ಣದೇವ ಆಮೇಲಿನ ಘಟನೆಗಳನ್ನು ತಿಳಿಸಿರಬಹುದು. ಜಗದೇಕಮಲ್ಲನು ಕರ್ಣದೇವನ ಬಂದಿಯಾಗಿದ್ದರೂ ವಾಸ್ತವದಲ್ಲಿ ಅವರು ಗೆಳೆಯರಂತೆ ಸಲಿಗೆಯಿಂದ ನಡೆದುಕೊಳ್ಳುತ್ತಿದ್ದರು. ಸೆರೆಯಲ್ಲಿಯೂ ಚಾಲುಕ್ಯ ಅರಸರ ಸುಖಜೀವನ, ರಾಜೋಚಿತ ವೈಭವದಿಂದ ನಡೆಯ ಬೇಕೆಂಬುದು ಮೊದಲಿನಿಂದ ಬಿಜ್ಜಳರಾಯರ ಉದ್ದೇಶವಾಗಿತ್ತು.” - 'ತಂದೆಯವರ ಆ ಉದಾರ ವರ್ತನೆಯೇ ಅವರ ಅಂತ್ಯಕ್ಕೆ ಕಾರಣವಾಯಿತು.” -ದೀರ್ಘವಾಗಿ ಉಸಿರೆಳೆದು ಸೋಮೇಶ್ವರ ಹೇಳಿದನು. “ಜನರು ಹಾಗೆ ತಿಳಿದಿಲ್ಲ, ಸೋಮೇಶ್ವರ, ಲೋಕದೃಷ್ಟಿಯಲ್ಲಿ ಹತ್ಯೆಯ ಕಾರಣ ರಾಜಕೀಯವೂ ಅಲ್ಲ, ಧಾರ್ಮಿಕವೂ ಅಲ್ಲ.”